ಲಾಸ್ಟ್ (TV ಸರಣಿ)
From Wikipedia, the free encyclopedia
ಲಾಸ್ಟ್ ಎಂಬುದು ಅಮೆರಿಕದ ಟಿವಿ ಸರಣಿಯ ಧಾರಾವಾಹಿ ನಾಟಕವಾಗಿದೆ. ನಿಗೂಢವಾದ ಉಷ್ಣವಲಯ ದ್ವೀಪದಲ್ಲಿ ವಿಮಾನ ಅಪಘಾತಕ್ಕೆ ಒಳಗಾಗಿ ಬದುಕುಳಿದವರು ಇಲ್ಲಿ ಜೀವನ ನಡೆಸುವುದನ್ನು ಇದು ತೋರಿಸುತ್ತದೆ. ವಾಣಿಜ್ಯ ಪ್ಯಾಸೆಂಜರ್ ಜೆಟ್ವೊಂದು ಸಿಡ್ನಿ, ಆಸ್ಟ್ರೇಲಿಯಾ ಮತ್ತು ಸಂಯುಕ್ತ ಸಂಸ್ಥಾನದ ಲಾಸ್ ಏಂಜಲೀಸ್ನ ಮಧ್ಯೆ ಹಾರುತ್ತಿದ್ದಾಗ ದಕ್ಷಿಣ ಪ್ಯಾಸಿಫಿಕ್ನ ಮಧ್ಯೆ ಎಲ್ಲೋ ಅಪಘಾತಗೊಂಡಿರುತ್ತದೆ. ಪ್ರತೀ ಕಂತೂ ಕೂಡಾ ಪ್ರಾಥಮಿಕವಾಗಿ ದ್ವೀಪದಲ್ಲಿನ ಜೀವನದ ಕಥೆಯ ಎಳೆಯನ್ನು ಹೊಂದಿರುತ್ತದೆ, ಹಾಗೆಯೇ ಇನ್ನೊಂದು ದೃಷ್ಟಿಯಿಂದ ದ್ವಿತೀಯ ಕಥೆಯ ಎಳೆಯಾಗಿ ವ್ಯಕ್ತಿಗಳ ಜೀವನ ಕಥೆಯನ್ನು ಹೊಂದಿರುತ್ತದೆ. ಆದರೂ ಸಮಯಕ್ಕೆ ತಕ್ಕಂತೆ ಕಥಾವಸ್ತುವಿನಲ್ಲಿ ಆಗಾಗ ಈ ಸೂತ್ರವನ್ನು ಕೆಲವು ಕಂತುಗಳಲ್ಲಿ ಬದಲಾಯಿಸಲಾಗುತ್ತದೆ. ಸಪ್ಟೆಂಬರ್ 22, 2004[1] ರಂದು ಪ್ರಾಥಮಿಕ ಕಂತನ್ನು ಮೊಟ್ಟಮೊದಲ ಬಾರಿಗೆ ಪ್ರಸಾರ ಮಾಡಲಾಯಿತು ಮತ್ತು ನಂತರದಲ್ಲಿ ಐದು ಸಂಪೂರ್ಣ ಪ್ರದರ್ಶನವು ಪ್ರಸಾರವಾಗಿದೆ. ಸಂಯುಕ್ತ ಸಂಸ್ಥಾನದ ಎಬಿಸಿ ನೆಟ್ವರ್ಕ್ನಲ್ಲಿ ಈ ಸರಣಿಯು ಪ್ರಸಾರವಾಗುವುದರ ಜೊತೆಗೆ ಇತರ ಹಲವು ದೇಶಗಳ ಸ್ಥಳೀಯ ನೆಟ್ವರ್ಕ್ಗಳಲ್ಲಿ ಪ್ರಸಾರವಾಗುತ್ತಿದೆ.
ಶೈಲಿ | Adventure Drama Fantasy Science fiction Thriller |
---|---|
ಶೈಲಿ | Serial drama |
ರಚನಾಕಾರರು | Jeffrey Lieber J.J. Abrams Damon Lindelof |
ನಿರ್ದೇಶಕರು | Jack Bender Stephen Williams and others |
ನಟರು | Adewale Akinnuoye-Agbaje Naveen Andrews Nestor Carbonell Henry Ian Cusick Jeremy Davies Emilie de Ravin Michael Emerson Jeff Fahey Matthew Fox Jorge Garcia Maggie Grace Josh Holloway Malcolm David Kelley Daniel Dae Kim Yunjin Kim Ken Leung Evangeline Lilly Rebecca Mader Elizabeth Mitchell Dominic Monaghan Terry O'Quinn Harold Perrineau Michelle Rodriguez Kiele Sanchez Rodrigo Santoro Ian Somerhalder Cynthia Watros |
ಸಂಯೋಜಕ(ರು) | Michael Giacchino |
ದೇಶ | United States |
ಭಾಷೆ(ಗಳು) | English |
ಒಟ್ಟು ಸರಣಿಗಳು | 5 |
ಒಟ್ಟು ಸಂಚಿಕೆಗಳು | 103 (List of episodes) |
ಕಾರ್ಯನಿರ್ವಾಹಕ ನಿರ್ಮಾಪಕ(ರು) | J. J. Abrams Damon Lindelof Bryan Burk Jack Bender Edward Kitsis Adam Horowitz Carlton Cuse |
ಸ್ಥಳ(ಗಳು) | Oahu, Hawaii |
ಸಮಯ | approx. 42 minutes |
ನಿರ್ಮಾಣ ಸಂಸ್ಥೆ(ಗಳು) | Bad Robot Productions ABC Studios |
ಮೂಲ ವಾಹಿನಿ | ABC |
ಚಿತ್ರ ಶೈಲಿ | 480i (SDTV) 720p (HDTV) ABC HD 1080i (HDTV) Sky1 HD, Premiere HD, Seven HD |
ಮೂಲ ಪ್ರಸಾರಣಾ ಸಮಯ | September 22, 2004 – present |
ತಾಣ | |
Production website |
ಹೆಚ್ಚಿನ ನಟರ ಮೇಳದಿಂದಾಗಿ ಮತ್ತು ಓವಾಹೊ, ಹವಾಯಿ ಸ್ಥಳದಲ್ಲಿ ನಡೆಸಬೇಕಾದ ಪ್ರಾಥಮಿಕ ಚಿತ್ರೀಕರಣದಿಂದಾಗಿ[2] ಈ ಸರಣಿಯು ಟಿವಿಯಲ್ಲಿನ ಅತೀ ಹೆಚ್ಚು ಖರ್ಚಿನ ಸರಣಿಯಾಗಿದೆ.[3] ಈ ಕಾರ್ಯಕ್ರಮದ ಪರಿಕಲ್ಪನೆಯು ಡಮನ್ ಲಿಂಡೆಲಾಫ್, ಜೆ.ಜೆ.ಅಬ್ರಾಮ್ಸ್ ಮತ್ತು ಜೆಫ್ರಿ ಲೀಬೆರ್ ಅವರದ್ದಾಗಿದ್ದು ಮತ್ತು ಎಬಿಸಿ ಸ್ಟುಡಿಯೋಸ್, ಬ್ಯಾಡ್ ರೋಬೋಟ್ ಪ್ರೊಡಕ್ಷನ್ಸ್ ಮತ್ತು ಗ್ರಾಸ್ ಸ್ಕರ್ಟ್ ಪ್ರೊಡಕ್ಷನ್ಸ್ ಇದನ್ನು ನಿರ್ಮಿಸಿದೆ. ಮೈಕೆಲ್ ಗಿಯಾಚಿನೋ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಲಿಂಡೆಲಾಫ್, ಅಬ್ರಾಮ್ಸ್, ಬ್ರಿಯಾನ್ ಬರ್ಕ್, ಜ್ಯಾಕ್ ಬೆಂಡರ್, ಎಡ್ವರ್ಡ್ ಕಿಟ್ಸಿಸ್, ಆಡಮ್ ಹೊರೊವಿಟ್ಝ್ ಮತ್ತು ಕಾರ್ಲ್ಟನ್ ಕ್ಯೂಸ್ ಅವರು ಸದ್ಯದ ಕಾರ್ಯನಿರ್ವಾಹಕ ನಿರ್ಮಾತೃಗಳಾಗಿದ್ದಾರೆ. ವಿಮರ್ಶಕರ ಶಿಫಾರಸು ಗಳಿಸಿದ ಮತ್ತು ಜನಪ್ರಿಯತೆಯನ್ನು ಗಳಿಸಿದ ಲಾಸ್ಟ್ ಸರಣಿಯು ತನ್ನ ಮೊದಲ ವರ್ಷದಲ್ಲಿ ಪ್ರತೀ ಕಂತಿಗೆ ಸರಿಸುಮಾರು 16 ಮಿಲಿಯನ್ ವೀಕ್ಷಕರನ್ನು ಹೊಂದಿತ್ತು. ವಿಶೇಷ ಡ್ರಾಮಾ ಸರಣಿಗಾಗಿನ ಎಮ್ಮೀ ಪ್ರಶಸ್ತಿಯನ್ನು 2005ರಲ್ಲಿ,[4] ಬ್ರಿಟಿಷ್ ಅಕಾಡೆಮಿ ಟೆಲೆವಿಷನ್ ಅವಾರ್ಡ್ಸ್ನ ಬೆಸ್ಟ್ ಅಮೆರಿಕನ್ ಇಂಫೋರ್ಟ್ಆಗಿ 2005ರಲ್ಲಿ, ಉತ್ತಮ ಡ್ರಾಮಾಕ್ಕಾಗಿ ಗೋಲ್ಡನ್ ಗ್ಲೋಬ್ನ್ನು 2006ರಲ್ಲಿ ಮತ್ತು ಡ್ರಾಮಾ ಸರಣಿಯಲ್ಲಿನ ವಿಶೇಷ ತಾರಾಗಣಕ್ಕಾಗಿ ಸ್ಕ್ರೀನ್ ಆಯ್ಕ್ಟರ್ಸ್ ಗಿಲ್ಡ್ ಅವಾರ್ಡ್ನ್ನೂ ಸೇರಿ ಇದು ಅನೇಕ ಔದ್ಯಮಿಕ ಪ್ರಶಸ್ತಿಗಳನ್ನು ಗೆದ್ದಿದೆ.[4] ಆರಾಧನೆಯ ಅಭಿಮಾನಿಗಳ ಮೂಲವನ್ನು ಪ್ರತಿಬಿಂಬಿಸುತ್ತಾ ಈ ಸರಣಿಯು ಕಥೆಯ ಆಧಾರದಿಂದಾಗಿ ಅಮೆರಿಕದ ಜನಪ್ರಿಯ ಸಂಸ್ಕೃತಿಯಾಗಿದೆ ಮತ್ತು ಇದರ ಅಂಶಗಳು ಇತರ ಟೆಲಿವಿಷನ್ ಸರಣಿಗಳಲ್ಲಿ,[5] ಜಾಹೀರಾತುಗಳಲ್ಲಿ, ಮಕ್ಕಳ ಕಥಾ ಪುಸ್ತಕಗಳಲ್ಲಿ,[6] ವೆಬ್ಕಾಮಿಕ್ಗಳಲ್ಲಿ, ಮಾನವಾಸಕ್ತಿಯ ನಿಯತಕಾಲಿಕಗಳಲ್ಲಿ, ವೀಡಿಯೋ ಗೇಮ್ಗಳಲ್ಲಿ ಮತ್ತು ಗೀತ ಸಾಹಿತ್ಯಗಳಲ್ಲಿ ಪ್ರಭಾವ ಬೀರಿವೆ. ಈ ಕಾರ್ಯಕ್ರಮದ ಕಾಲ್ಪನಿಕ ಕಥಾಜಗತ್ತು ಕಾದಂಬರಿ, ಬೋರ್ಡ್ ಮತ್ತು ವೀಡಿಯೋ ಗೇಮ್ಗಳ ಮತ್ತು ಇತರ ಸಂಬಂಧೀ ರಿಯಾಲಿಟಿ ಗೇಮ್ಗಳಾದ ದಿ ಲಾಸ್ಟ್ ಎಕ್ಸ್ಫೀರಿಯನ್ಸ್ ಮತ್ತು ಫೈಂಡ್ 815 ಗಳಿಗೆ ಸ್ಪೂರ್ತಿಯಾಗುವ ಮೂಲಕ ಅಭಿವೃದ್ಧಿ ಹೊಂದಿದೆ.
ಆರನೇ ಸೀಸನ್ನಿನ 121ನೇಯ[7] ಮತ್ತು ಅಂತಿಮ ಕಂತಿನೊಂದಿಗೆ ಮೇ 2010ರಲ್ಲಿ ಲಾಸ್ಟ್ ಸರಣಿಯು ಅಂತ್ಯಗೊಳ್ಳಲಿದೆ.[8] ಆರನೇ ಸೀಸನ್ನು ಹದಿನೆಂಟು ಕಂತುಗಳದ್ದಾಗಲಿದೆ.[9] ಯುಎಸ್ನಲ್ಲಿ ಮೊದಲ ನಾಲ್ಕು ಸೀಸನ್ಗಳ ಸರಣಿಯು ಸ್ವಂತ ವಾಹಿನಿಯಲ್ಲಿ ಪ್ರಸಾರವಾಗದೇ ಇತರೇ ವಾಹಿನಿಗಳಿಂದ ಅದೇ ಸಮಯಕ್ಕೆ ಪ್ರಸಾರವಾಯಿತು. ಡಿಸ್ನೆ-ಎಬಿಸಿ ಡೊಮೆಸ್ಟಿಕ್ ನೆಟ್ವರ್ಕ್ಗಳಿಂದ ವಿತರಿಸಲ್ಪಟ್ಟು ಜಿ4 ಮತ್ತು ಸಿಫಿ ವಾಹಿನಿಗಳಲ್ಲಿ ಪ್ರಸಾರವಾಯಿತು.[10][11]