From Wikipedia, the free encyclopedia
ಮೈಕ್ರೊಸಾಫ್ಟ್ ವಿಂಡೋಸ್ (ಆಂಗ್ಲ:Microsoft Windows) ಮೈಕ್ರೋಸಾಫ್ಟ್ ಕೃತ ಹಲವು ಕಾರ್ಯಕಾರಿ ವ್ಯವಸ್ಥೆಗಳ ಸರಮಾಲೆ. ಇದರಲ್ಲಿ ಮೊದಲಿಗ, ೧೯೮೫ರಲ್ಲಿ ಬಳಕೆಗೆ ತಂದ "ವಿಂಡೋಸ್" ವ್ಯವಸ್ಥೆ. ಅಂದು "ವಿಂಡೋಸ್" MS-DOSಗೆ ವಿಂಡೋಸ್ ಒಂದು ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್) - ಗಣಕದ ಕಾರ್ಯವನ್ನು ನಿಯಂತ್ರಿಸುವ, ಸಮ್ಮೇಳಿಸುವ ತಂತ್ರಾಂಶ). ಇದು ಮೈಕ್ರೋಸಾಫ್ಟ್ ಕಂಪೆನಿಯ ತಂತ್ರಾಂಶಗಳಲ್ಲೊಂದು. ೧೯೮೫ ರಲ್ಲಿ ಮೊದಲ ಬಾರಿಗೆ ಈ ತಂತ್ರಾಂಶ ಬಿಡುಗಡೆಯಾಯಿತು. ಅಲ್ಲಿಂದೀಚೆಗೆ ಅನೇಕ ಆವೃತ್ತಿಗಳು ಬಿಡುಗಡೆಗೊಂಡಿವೆ. ಎಲ್ಲಕ್ಕಿಂತ ಇತ್ತೀಚಿನ 'ಆವೃತ್ತಿಗೆ ವಿಂಡೋಸ್ ೮' ಎಂದು ಹೆಸರು.
ಡೆವಲಪರ್ಗಳು | ಮೈಕ್ರೋಸಾಫ್ಟ್ |
---|---|
ಪ್ರೋಗ್ರಾಮಿಂಗ್ ಭಾಷೆ | Assembly, C, C++[1] |
ಆಪರೇಟಿಂಗ್ ಸಿಸ್ಟಮ್ ಕುಟುಂಬ | Windows 9x, Windows CE and Windows NT |
ಕೆಲಸದ ಸ್ಥಾನ | Publicly released |
ಮೂಲ ಮಾದರಿ | Closed / Shared source |
ಆರಂಭಿಕ ಬಿಡುಗಡೆ | ನವೆಂಬರ್ 20, 1985 , as Windows 1.0 |
ಮಾರುಕಟ್ಟೆ ಗುರಿ | Personal computing |
ಭಾಷೆಗಳಲ್ಲಿ ಲಭ್ಯ | Multilingual (137 languages)[2] |
ನವೀಕರಣ ವಿಧಾನ | Windows Update, Windows Anytime Upgrade |
ಪ್ಲಾಟ್ಫಾರ್ಮ್ | ARM, IA-32, Itanium, x86-64 |
ಕರ್ನಲ್ ಪ್ರಕಾರ |
|
ಪ್ರಾಥಮಿಕ ಯೂಸರ್ ಇಂಟರ್ಫೆಸ್ | Windows Shell |
ಲೈಸೆನ್ಸ್ | Proprietary commercial software |
ಅಧಿಕೃತ ಜಾಲತಾಣ | windows |
ವಿಂಡೋಸ್ನ ವಿವಿಧ ಆವೃತ್ತಿಗಳು ಹೀಗಿವೆ:
ವಿಂಡೋಸ್ನ ಎಕ್ಸ್ಪಿ ಆವೃತ್ತಿಯಲ್ಲಿ ಪ್ರಥಮ ಬಾರಿಗೆ ಕನ್ನಡವನ್ನು ಅಳವಡಿಸಲಾಯಿತು. ವಿಂಡೋಸ್ನಲ್ಲಿ ಕನ್ನಡವನ್ನು ಯುನಿಕೋಡ್ ಸಂಕೇತೀಕರಣದ ಮೂಲಕ ಅಳವಡಿಸಲಾಗಿದೆ. ಪ್ರಾರಂಭದ ಆವೃತ್ತಿಯಲ್ಲಿ ಅಂದರೆ ವಿಂಡೋಸ್ ಎಕ್ಸ್ಪಿಯಲ್ಲಿ ಕನ್ನಡದ ಅಳವಡಿಕೆ ಮಾಡಿದಾಗ ಕೆಲವು ನ್ಯೂನತೆಗಳಿದ್ದವು. ಅದರಲ್ಲಿ ಕನ್ನಡಕ್ಕಾಗಿ ಬಳಸಿದ ತುಂಗ ಹೆಸರಿನ ಫಾಂಟ್ನಲ್ಲಿ ಕೆಲವು ಅಕ್ಷರಗಳು ತಪ್ಪಾಗಿ ಮೂಡಿಬರುತ್ತಿದ್ದವು. ಕನ್ನಡದ ಅಕಾರಾದಿ ವಿಂಗಡಣೆಯಲ್ಲೂ ತಪ್ಪುಗಳಿದ್ದವು. ಈ ಎಲ್ಲ ತಪ್ಪುಗಳನ್ನು ಮುಂದಿನ ಆವೃತ್ತಿಗಳಲ್ಲಿ ಸರಿಪಡಿಸಲಾಗಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.