ಮೂಲ್ಕಿ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನಲ್ಲಿರುವ ಒಂದು ಪಂಚಾಯತ್ ಪಟ್ಟಣ. / From Wikipedia, the free encyclopedia
ಮೂಲ್ಕಿ ಅಥವಾ ಮುಲ್ಕಿಯು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನಲ್ಲಿರುವ ಒಂದು ಪಂಚಾಯತ್ ಪಟ್ಟಣ. ಇದನ್ನು ಮೊದಲು ಮೂಲಿಕಾಪುರ ಎಂದು ಕರೆಯಲಾಗುತ್ತಿತ್ತು, ನಂತರ ಮೂಲ್ಕಿ ಎಂಬುವುದು ಪ್ರಚಲಿತಕ್ಕೆ ಬಂದಿತು. ಆದರೆ, ಮಾತಾನಾಡುವಾಗ ಮೂಲ್ಕಿಯನ್ನು ಮುಲ್ಕಿ ಎಂದು ಉಚ್ಛಾರಣೆ ಮಾಡುತ್ತಾರೆ. ಮೂಲ್ಕಿ ವಿವಿಧ ಧರ್ಮದ ಜನರನ್ನು ಹೊಂದಿರುವ ಪಟ್ಟಣವಾಗಿದೆ. ಇದು ಸುರತ್ಕಲ್ ಉತ್ತರಕ್ಕೆ 10 ಕಿ.ಮೀ ದೂರದಲ್ಲಿದೆ. ಕಾರ್ನಾಡ್ ಮುಲ್ಕಿಯೊಳಗಿನ ಒಂದು ಪ್ರದೇಶವಾಗಿದೆ. ೮೦೦ ವರ್ಷ ಇತಿಹಾಸವಿರುವ ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಸ್ಥಾನವು ಈ ಮೂಲ್ಕಿಯಲ್ಲಿರುವ ಶಾಂಭವಿ ನದಿಯ ದಡದಲ್ಲಿದೆ. ಮೂಲ್ಕಿಯಿಂದ ಸ್ವಲ್ಪ ದೂರದಲ್ಲಿ ಮಂಗಳೂರು, ಉಡುಪಿ ಜಿಲ್ಲೆ ಮತ್ತು ಮೂಡುಬಿದಿರೆ ಇದೆ. ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ೧೭ರಲ್ಲಿ ಬರುತ್ತದೆ.
Quick Facts ಮುಲ್ಕಿ ತಾಲೂಕು ಮುಲ್ಕಿMoolikapur, Mulky, ದೇಶ ...
ಮುಲ್ಕಿ ತಾಲೂಕು
ಮುಲ್ಕಿ Moolikapur, Mulky | |
---|---|
ತಾಲೂಕು | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ದಕ್ಷಿಣ_ಕನ್ನಡ |
Elevation | ೭ m (೨೩ ft) |
Population (2011[1]) | |
• Total | ೧೭,೨೭೪ |
ಭಾಷೆ | |
• ಅಧಿಕೃತ | ಕನ್ನಡ |
ಭಾಷೆ | |
• ಪ್ರಾದೇಶಿಕ | ಕನ್ನಡ, ತುಳು, ಕೊಂಕಣಿ |
ಸಮಯ ವಲಯ | ಯುಟಿಸಿ+5:30 (IST) |
PIN | 574154 |
ISO 3166 code | IN-KA |
ವಾಹನ ನೋಂದಣಿ | KA-19 |
ಜಾಲತಾಣ | karnataka |
Close