ಮುಂಡ್ಕೂರು (ಮುಂಡೇರ್, ಮುಂಡುಕೂರು, Mundkur, Mundukuru, Mundkooru) ಉಡುಪಿ ಜಿಲ್ಲೆಯ ತೆಂಕಣ ಗಡಿ ಭಾಗದ ಒಂದು ಗ್ರಾಮ. ಮುಂಡ್ಕೂರಿನ ಪಶ್ಚಿಮ ಮತ್ತು ದಕ್ಷಿಣದಲ್ಲಿ ಮಂಗಳೂರು ತಾಲೂಕಿಗೆ ಸೇರಿದ ಉಳೆಪಾಡಿ, ಕರ್ನಿರೆ, ಕಲ್ಲಮುಂಡ್ಕೂರು ಇತ್ಯಾದಿ ಗ್ರಾಮಗಳು ಇವೆ.
ಮಂಗಳೂರು ತಾಲೂಕಿನ ಕಿನ್ನಿಗೋಳಿ ಸನಿಹ ಮೂರುಕಾವೇರಿಯಿಂದ ದಾಮಸ್ಕಟ್ಟೆ ಸಂಕಲಕರಿಯದ ಮೂಲಕ ಬೆಳ್ಮಣ್ಣುಗೆ ಹೋಗುವ ರಾಜ್ಯ ರಸ್ತೆಯಲ್ಲಿ ಮುಂಡ್ಕೂರು ಗ್ರಾಮವಿದೆ. ಮೂರುಕಾವೇರಿಗೆ ಮುಲ್ಕಿ, ಹಳೆಯಂಗಡಿ, ಕಿನ್ನಿಗೋಳಿ, ಮೂಡಬಿದ್ರೆ, ಕಟೀಲು ಕಡೆಗಳಿಂದ ಹೋಗಲು ರಸ್ತೆಗಳಿವೆ. ಹಾಗೆಯೇ, ಬೆಳ್ಮಣ್ಣುಗೆ ಪಡುಬಿದ್ರಿ (ಪಡ್ಡೆದ್ರ) , ಶಿರ್ವಾ, ನಿಟ್ಟೆ, ಕಾರ್ಕಳ ಕಡೆಗಳಿಂದ ಬರಲು ರಸ್ತೆಗಳಿವೆ.
ಉಡುಪಿಯಿಂದ ಬರುವವರಿಗೆ ಉಡುಪಿ- ಕಟಪಾಡಿ- ಶಿರ್ವ ಮಂಚಕಲ್- ಬೆಳ್ಮಣ್ಣು-ಮುಂಡ್ಕೂರು ಹತ್ತಿರದ ದಾರಿ.
ಕಾರ್ಕಳದಿಂದ ಬರುವವರಿಗೆ ಕಾರ್ಕಳ- ನಿಟ್ಟೆ-ಬೆಳ್ಮಣ್ಣು -ಮುಂಡ್ಕೂರು ಹತ್ತಿರದ ದಾರಿ.
ಮೂಡಬಿದ್ರಿಯಿಂದ ಬರುವವರಿಗೆ ಮೂಡಬಿದ್ರಿ -ಅಲಂಗಾರು- ಪುತ್ತಿಗೆ- ಕೊಡ್ಯಡ್ಕ-ಕಡಂದಲೆ-ಪಾಲ್ಡಡ್ಕ-ಸಚ್ಚೇರಿಪೇಟೆ-ಮುಂಡ್ಕೂರು ಹತ್ತಿರದ ದಾರಿ. ಪರ್ಯಾಯವಾಗಿ (2)ಮೂಡಬಿದ್ರಿ- ಕಲ್ಲಮುಂಡ್ಕೂರು-ಮೂರುಕಾವೇರಿ-ಮುಂಡ್ಕೂರು, ಇಲ್ಲವೆ (3) ಮೂಡಬಿದ್ರಿ-ಮಿಜಾರು-ಗಂಜಿಮಠ-ಕೈಕಂಬ- ಬಜಪೆ-ಕಟೀಲು- ಮೂರುಕಾವೇರಿ-ಮುಂಡ್ಕೂರು ದಾರಿಯಿಂದ ಬರಬಹುದಾಗಿದೆ.
ಭೌಗೋಳಿಕ ನಿರ್ದೆಶಾಂಕಗಳು
ಮುಂಡ್ಕೂರು ಗ್ರಾಮದ (ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪರಿಸರದ) ಭೌಗೋಳಿಕ ನಿರ್ದೇಶಾಂಕಗಳು ಡಿಗ್ರಿ-ಮಿನಿಟ್-ಸೆಕೆಂಡುಗಳಲ್ಲಿ ಹೀಗಿವೆ:
ಅಕ್ಷಾಂಶ: 13° 07' 42.18" N
ರೇಖಾಂಶ: 74° 52' 00.61" E
Gururaja Bhat, P. (1969) Antiquities of south Canara. Prabhakar Press, Udupi. p.31+ plates 184
Gururaja Bhat, P. (1975,2014) Studies in Tuluva history and culture.( Second impression 2014), Dr Padur Gururaja Bhat Memorial Trust,Udupi, (original published in 1975).p.457+ plates+preview+ appendix.