ತಿರಿ ಪ್ಯಾಂಚಿ ಮಿನ್ ಥು ವುನ್(೧೦ ಫೆಬ್ರವರಿ ೧೯೦೯ - ೧೫ ಆಗಸ್ಟ್ ೨೦೦೪) [1]ಬರ್ಮಾ ದೇಶದ ಕವಿ ಮತ್ತು ಲೇಖಕ. ಖಿತ್ ಸಾನ್ (ಪರೀಕ್ಷೆಯ ಸಮಯಗಳು) ಎಂಬ ಹೊಸ ಸಾಹಿತ್ಯ ಚಳುವಳಿ ಅನ್ನು ಶುರು ಮಾಡಿದ ಧೀಮಂತರು. ೨೦೧೬ ರಿಂದ ೨೦೧೮ ರವರೆಗೆ ಬರ್ಮಾ ದೇಶದ ಅಧ್ಯಕ್ಷರಾಗಿದ್ದ ಥಿನ್ ಕ್ಯಾವ್, ಮಿನ್ ಥು ವುನ್ ರ ಪುತ್ರ.

Thumb
ಮಿನ್ ಥು ವುನ್ ಭಾವಚಿತ್ರ

ಬಾಲ್ಯ

ಇವರು ಮಾವುಂಗ್ ವುನ್ ಎಂದ ಹೆಸರಿನಿಂದ ೧೯೦೯ ರಲ್ಲಿ ಬರ್ಮಾ ದೇಶದ ಮೊನ್ ಪ್ರಾಂತ್ಯದಲ್ಲಿ ಜನಿಸಿದರು. ೨೦ನೆ ವರ್ಷದಲ್ಲಿ ರಂಗೂನ್ ಕಾಲೇಜು ಸೇರಿದರು.ರಂಗೂನ್ ಕಾಲೇಜಿನ ವಾರಪತ್ರಿಕೆಗೆ ಕವಿತೆಗಳನ್ನು ಬರೆಯಲು ಶುರು ಮಾಡಿದರು. ಅಲ್ಲಿ ಪೆ ಮಾವುಂಗ್ ಥಿನ್ ಜ಼್ಾವ್ಗ್ಯಿ ಮೊದಲಾದ ಕವಿಗಳ ಪರಿಚಯ ಥು ವುನ್ ರಿಗೆ ಆಯಿತು. ಬರ್ಮಾ ರಿಸರ್ಚ್ ಸೊಸೈಟಿ ಸ್ಥಾಪಕರಾದ ಜೆ ಎಸ್ ಫರ್ನಿವಾಲ್ ಪರಿಚಯ ಥು ವುನ್ ರಿಗೆ ಆಯಿತು. ಜೆ ಎಸ್ ಫರ್ನಿವಾಲ್ ಬೆಂಬಲದಿಂದ ಗಂದಾ ಲವ್ಕಾ (ಪುಸ್ತಕ ಪ್ರಪಂಚ) ಎಂಬ ಪತ್ರಿಕೆಯನ್ನು ಆರಂಭ ಮಾಡಿದರು. ತಮ್ಮ ಪುಟ್ಟ ವಾಕ್ಯಗಳ ವಿಭಿನ್ನ ಶೈಲಿ ಮತ್ತು ಸಾಂಪ್ರದಾಯಿಕ ಶಬ್ದ ಪ್ರಯೋಗದ ಮೂಲಕ ಥು ವುನ್ ಹೆಸರು ಮಾಡಿದರು. [2]

೧೯೩೫ರಲ್ಲಿ ಮಿನ್ ಥು ವುನ್ ಬರ್ಮಾ ಸಾಹಿತ್ಯದಲ್ಲಿ ಉನ್ನತ ಪದವಿ ಪಡೆದರು. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದಲು ತೆರಳಿದ ಮಿನ್ ಥು ವುನ್, ೧೯೩೯ರಲ್ಲಿ ಸಾಹಿತ್ಯದಲ್ಲಿ ಪದವಿ ಪಡೆದರು.

ಕುಟುಂಬ

ಸೇನಾಧಿಕಾರಿ ಕರ್ನಲ್ ಉ ಲ್ವಿನ್ ಪುತ್ರಿ ಸು ಸು ಲ್ವಿನ್ ರನ್ನು ತಮ್ಮ ಪುತ್ರ ಥಿನ್ ಕ್ಯಾವ್

Thumb
ಬರ್ಮಾ ಅಧ್ಯಕ್ಷ ಥಿನ್ ಕ್ಯಾವ್ ೨೦೧೬-೧೮

ರಿಗೆ ೧೯೭೩ರಲ್ಲಿ ಮದುವೆ ನಿಕ್ಕಿ ಮಾಡಿದ ಮಿನ್ ಥು ವುನ್, ಟೀಕೆಗೆ ಒಳಗಾದರು.ಸು ಸು ಲ್ವಿನ್, ಉ ಲ್ವಿನ್, ಥಿನ್ ಕ್ಯಾವ್ ಎಲ್ಲರೂ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್ ಎಲ್ ಡಿ) ಪಕ್ಷದ ಸದಸ್ಯರಾಗಿ ಚುನಾವಣೆಗೆ ನಿಂತು ಸಂಸತ್ ಸದಸ್ಯರಾದರು. ಕುಟುಂಬ ರಾಜಕಾರಣದ ಆರೋಪಕ್ಕೆ ಹೆಗಲು ನೀಡಬೇಕಾಗಿ ಬಂತು.

ಪುಸ್ತಕಗಳು

ಮುಆಂಗ್ ಖ್ವೇ ಗಾಗಿ ನರ್ಸರಿ ಹಾಡುಗಳು ಎಂಬ ೧೨ ಬರ್ಮಾ ಭಾಷೆಯ ಕವನ ಗುಚ್ಛವನ್ನು ೧೯೪೨ರಲ್ಲಿ ಮಿನ್ ಥು ವುನ್ ಬರೆದರು. [3]೬೦ ವರ್ಷಗಳ ನಂತರ ಕೂಡಾ ಮರು ಮುದ್ರಣ ಕಂಡ ಪುಸ್ತಕ ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮರದ ಕಾಂಡ ಮತ್ತು ಅರಳು ಮೊಗ್ಗುಗಳು ಎಂಬ ಪುಸ್ತಕ ೧೯೬೫ರಲ್ಲಿ ಪ್ರಕಟವಾಯಿತು. ಬರ್ಮಾದ ಬದುಕು ಮತ್ತು ಪತ್ರಗಳು ಎಂಬ ೧೯೬೫ರ ಪುಸ್ತಕ ಬಲು ಜನಪ್ರಿಯ ಆಯಿತು.[4] ೧೯೬೮ರಲ್ಲಿ ಕಟು ಮಾವಿನ ಬುಡ ಎಂಬ ಪುಸ್ತಕ ಮಿನ್ ಥು ವುನ್ ರಿಗೆ ಬಲು ಜನಪ್ರಿಯತೆ ನೀಡಿತು.[5]
ಮಿನ್ ಥು ವುನ್, ತಮ್ಮ ಜನಪರ ನಿಲುವುಗಳ ಮೂಲಕ, ೧೯೩೦ರಲ್ಲಿ ಖಿತ್ ಸಾನ್ (ಪರೀಕ್ಷೆಯ ಸಮಯಗಳು) ಎಂಬ ಹೊಸ ಸಾಹಿತ್ಯ ಚಳುವಳಿ ಹುಟ್ಟು ಹಾಕಿದರು. [6]ಆಂಗ್ಲ ಸಾಹಿತ್ಯದ ದಟ್ಟ ಪ್ರಭಾವವನ್ನು ಬರ್ಮಾ ಭಾಷೆಯ ಮೇಲೆ ಹೇರಿದ ಖಿತ್ ಸಾನ್ ೨೦ ಶತಮಾನದ ಮೊದಲ ಸಾಹಿತ್ಯ ಚಳುವಳಿ ಎಂದು ಹೆಸರಾಯಿತು.[7]

ಹೆಗ್ಗಳಿಕೆ

ಮಿನ್ ಥು ವುನ್ ಮೊನ್-ಬರ್ಮಾ ಭಾಷೆ ನಿಘಂಟು ಮತ್ತು ಪಾಲಿ-ಬರ್ಮಾ ಭಾಷೆ ನಿಘಂಟು ರಚಿಸಿದರು. ಅಂಧರಿಗಾಗಿ ಬ್ರೇಲ್ ಲಿಪಿಯನ್ನು ಬರ್ಮಾ ಭಾಷೆಯಲ್ಲಿ ರಚಿಸಿದರು.

ರಾಜಕೀಯ

ರಾಜಕೀಯದ ಸೆಳೆತ ಮಿನ್ ಥು ವುನ್ ರನ್ನು ೧೯೯೦ರಲ್ಲಿ ಬರ್ಮಾ ಸಂಸತ್ ಚುನಾವಣೆಗೆ ನಿಲ್ಲಲು ಪ್ರೇರೇಪಣೆ ನೀಡಿತು. ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್ ಎಲ್ ಡಿ) ಪಕ್ಷದ ಸದಸ್ಯರಾಗಿ ಚುನಾವಣೆಗೆ ನಿಂತ ಮಿನ್ ಥು ವುನ್, ೧೯೯೮ರಲ್ಲಿ ಬರ್ಮಾ ಸೇನೆಯ ಕಾಕದೃಷ್ಟಿಗೆ ಒಳಗಾಗಿ ರಾಜೀನಾಮೆ ನೀಡ ಬೇಕಾಯಿತು. ಮಿನ್ ಥು ವುನ್ ರ ಎಲ್ಲಾ ಪುಸ್ತಕಗಳನ್ನು ಬರ್ಮಾ ಸೇನೆ ನಿಷೇಧ ಮಾಡಿತು. ಜೂನ್ ೧೯೯೫ರಲ್ಲಿ ಸಪೇ ಗ್ಯಾ ನೇ ಎಂಬ ಸಾಹಿತ್ಯ ಪತ್ರಿಕೆ ತನ್ನ ಸಂಚಿಕೆಯನ್ನು ಮಿನ್ ಥು ವುನ್ ರಿಗೆ ಅರ್ಪಿಸಿ ಪ್ರಕಟಣೆ ಮಾಡಿರು. ಬರ್ಮಾ ಸೇನೆ, ಆ ಸಂಚಿಕೆಯನ್ನೇ ನಿಷೇಧಕ್ಕೆ ಒಳಪಡಿಸಿತು. ಇಷ್ಟಾದರೂ ಸಹಿತ ತನ್ನ ನಿಲುವಿನಲ್ಲಿ ಕೊಂಚ ಕೂಡಾ ಬದಲಾವಣೆ ಮಾಡಿಕೊಳ್ಳಲು ಮಿನ್ ಥು ವುನ್ ನಿರಾಕರಿಸಿದರು. ೧೫ ಆಗಸ್ಟ್ ೨೦೦೪ರಂದು, ತಮ್ಮ ೯೫ನೆಯ ವಯಸ್ಸಿನಲ್ಲಿ ಮಿನ್ ಥು ವುನ್ ಅಸು ನೀಗಿದರು.[8]

ಉಲ್ಲೇಖ

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.