ಮಾರ್ಮಸೆಟ್ ಪ್ರೈಮೇಟ್ ಗಣದ ಕ್ಯಾಲಿತ್ರೈಸಿಡೀ ಕುಟುಂಬಕ್ಕೆ ಸೇರಿದ, ಚಿಕ್ಕಗಾತ್ರದ ಹಾಗೂ ಉದ್ದಬಾಲ ಇರುವ ಹಲವಾರು ಬಗೆಯ ಕೋತಿಗಳಿಗೆ ಅನ್ವಯವಾಗುವ ಹೆಸರು. ಇವುಗಳ ತವರು ದಕ್ಷಿಣ ಹಾಗೂ ಮಧ್ಯ ಅಮೆರಿಕ.[3][4] ಅಳಿಲಿನಂತೆ ಕಾಣುವ ವೃಕ್ಷವಾಸಿ ಪ್ರಾಣಿಗಳಿವು. ಮರಗಳಲ್ಲಿ ಚುರುಕಾದ ವಿಚಿತ್ರ ನುಲಿಚಲನೆಯಿಂದ ಓಡಾಡಿಕೊಂಡಿರುವುವು. ಹಗಲಿನಲ್ಲಿ ಚಟುವಟಿಕೆ ಹೆಚ್ಚು.

Quick Facts ಮಾರ್ಮಸೆಟ್‍ಗಳು, Scientific classification ...
ಮಾರ್ಮಸೆಟ್‍ಗಳು[1][2]
Thumb
ಸಾಮಾನ್ಯ ಮಾರ್ಮಸೆಟ್ (ಕ್ಯಾಲಿತ್ರಿಕ್ಸ್ ಜ್ಯಾಖೂಸ್)
Scientific classification
Included groups
  • Callibella M.G.M. van Roosmalen & T. van Roosmalen, 2003 (Roosmalens' dwarf marmoset)
  • Callimico Miranda-Ribeiro, 1922 (Goeldi's marmoset)
  • Callithrix Erxleben, 1777 (Atlantic marmosets)
  • Cebuella Gray, 1866 (pygmy marmosets)
  • Mico Lesson, 1840 (Amazonian marmosets)
Excluded groups
  • Leontopithecus Lesson, 1840 (lion tamarins)
  • Saguinus Hoffmannsegg, 1807 (tamarins)
Close

ದೇಹರಚನೆ

ವೃಕ್ಷವಾಸಿಗಳಾದ್ದರಿಂದ ರೆಂಬೆಗಳನ್ನು ಹಿಡಿದು ಹತ್ತಲು ಅನುಕೂಲವಾಗುವಂತೆ ಕೈಕಾಲುಗಳ ಬೆರಳುಗಳಲ್ಲಿ (ಹೆಬ್ಬೆರಳು ವಿನಾ) ಉಗುರಿಗೆ ಬದಲಾಗಿ ಮೊನೆಯುಗುರುಗಳಿವೆ.

ಆಹಾರ

ಇವು ಮುಖ್ಯವಾಗಿ ಕೀಟಭಕ್ಷಿಗಳು. ಹಣ್ಣುಗಳನ್ನೂ ಇನ್ನಿತರ ಪ್ರಾಣಿಗಳನ್ನೂ ತಿನ್ನವುದುಂಟು.

ಬಗೆಗಳು

ಮಾರ್ಮಸೆಟ್ ಕೋತಿಗಳಲ್ಲಿ ಹಲವಾರು ಬಗೆಗಳಿವೆಯೆಂದು ಮೇಲೆ ಸೂಚಿಸಲಾಗಿದೆ. ಮುಖ್ಯವಾದವು ಇಂತಿವೆ:

  1. ಕ್ಯಾಲಿತ್ರಿಕ್ಸ್ ಜಾತಿಯ ಪೆನಿಸಿಲೇಟ, ಕ್ರೈಸೊಲ್ಯೂಕ, ಅರ್ಜೆಂಟೇಟ, ಜ್ಯಾಕಸ್ ಪ್ರಭೇಧಗಳು. ಇವು ಬ್ರಜಿಲ್ ಹಾಗೂ ಬೊಲೀವಿಯಗಳ ಕಾಡುಗಳಲ್ಲಿ ಕಾಣದೊರೆಯುವುವು. 15-25 ಸೆಂಮೀ ಉದ್ದದ ಪ್ರಾಣಿಗಳಿವು; 25-40 ಸೆಂಮೀ ಉದ್ದದ ಬಾಲ ಉಂಟು. ಮೈಬಣ್ಣ ಬಿಳಿಯಿಂದ ಕಗ್ಗೆಂಪಿನವರೆಗೆ ವ್ಯತ್ಯಸ್ತ. ಕೆಲವಲ್ಲಿ ಬಾಲದ ಮೇಲೆ ಅಡ್ಡಪಟ್ಟೆಗಳಿರುವುದುಂಟು. ತುಪ್ಪುಳು ರೇಷ್ಮೆಯಂತೆ ಬಲುಮೃದು. ಕಿವಿಗಳ ತುದಿಯಲ್ಲಿ ರೋಮಗುಚ್ಛಗಳಿವೆ.
  2. ಸೆಬುಯೆಲ ಪಿಗ್ಮಿಯ (ಪಿಗ್ಮಿ ಮಾರ್ಮಸೆಟ್): ಪೆರು ಹಾಗೂ ಎಕ್ವಡಾರುಗಳಲ್ಲಿ ಸಿಕ್ಕುತ್ತದೆ. ಬಲುಚಿಕ್ಕಗಾತ್ರದ್ದು, ಉದ್ದ ಕೇವಲ 14 ಸೆಂಮೀ. ವಯಸ್ಕ ಪ್ರಾಣಿ 90 ಗ್ರಾಮಿಗೂ ಹೆಚ್ಚು ಭಾರವಿರದು. ದೇಹದ ಬಣ್ಣ ಕಗ್ಗಂದು ಇಲ್ಲವೆ ಬೂದು.

ಮಾರ್ಮಸೆಟ್ಟುಗಳನ್ನು ಸಾಕುವುದು ಸುಲಭ.

ಉಲ್ಲೇಖಗಳು

ಹೊರಗಿನ ಕೊಂಡಿಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.