![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/e/e8/Eye-diagram_no_circles_border.svg/langkn-640px-Eye-diagram_no_circles_border.svg.png&w=640&q=50)
ಮಾನವನ ಕಣ್ಣು
From Wikipedia, the free encyclopedia
ಮಾನವನ ಕಣ್ಣು ಬೆಳಕಿಗೆ ಪ್ರತಿಕ್ರಿಯಿಸುವ ವಿವಿಧೋದ್ದೇಶಗಳುಳ್ಳ ಅತ್ಯಮೂಲ್ಯ ಅಂಗವಾಗಿದೆ.
Quick Facts ಮಾನವನ ಕಣ್ಣು ...
ಮಾನವನ ಕಣ್ಣು | |
---|---|
![]() | |
1. posterior chamber 2. ora serrata 3. ciliary muscle 4. ciliary zonules 5. canal of Schlemm 6. pupil 7. anterior chamber 8. cornea 9. iris 10. lens cortex 11. lens nucleus 12. ciliary process 13. conjunctiva 14. inferior oblique muscle 15. inferior rectus muscle 16. medial rectus muscle 17. retinal arteries and veins 18. optic disc 19. dura mater 20. central retinal artery 21. central retinal vein 22. optic nerve 23. vorticose vein 24. bulbar sheath 25. macula 26. fovea 27. sclera 28. choroid 29. superior rectus muscle 30. retina | |
Close
ಪ್ರಜ್ಞಾತ್ಮಕ ಜ್ಞಾನೇಂದ್ರಿಯವಾಗಿರುವ ಕಣ್ಣು, ದೃಷ್ಟಿಗೆ ಅವಕಾಶ ನೀಡುತ್ತದೆ. ಅಕ್ಷಿಪಟದಲ್ಲಿರುವ ರಾಡ್(ಕಣ್ಣಿನ ಪಾಪೆಯ ದಂಡ) ಮತ್ತು ಕೋನ್ (ಅಕ್ಷಿಪಟದಲ್ಲಿರುವ ಶಂಕುವಿನಾಕಾರದ ರಚನೆ) ಕೋಶಗಳು, ವಿವಿಧ ಬಣ್ಣಗಳು ಮತ್ತು ಅವುಗಳ ಗಾಢತೆಯನ್ನು ಗ್ರಹಿಸುವುದು ಸೇರಿದಂತೆ ಜಾಗೃತ ಬೆಳಕಿನ ಗ್ರಹಿಕೆ ಮತ್ತು ದೃಷ್ಟಿಗೆ ಅವಕಾಶ ಕಲ್ಪಿಸುತ್ತದೆ. ಮಾನವನ ಕಣ್ಣು ಸುಮಾರು ೧೦ ದಶಲಕ್ಷದಷ್ಟು ವಿವಿಧ ಬಣ್ಣಗಳ ನಡುವೆ ವ್ಯತ್ಯಾಸ ಗುರುತಿಸಬಲ್ಲದು. [1]
ಸಾಮಾನ್ಯವಾಗಿ ಇತರ ಸಸ್ತನಿಗಳ ಕಣ್ಣುಗಳ ರೀತಿಯಲ್ಲಿ ಮಾನವನ ಕಣ್ಣಿನ ಅಕ್ಷಿಪಟದಲ್ಲಿರುವ ಚಿತ್ರವನ್ನು ಮೂಡಿಸದ ದ್ಯುತಿಸಂವೇದಿ ನರಗ್ರಂಥಿ ಕೋಶಗಳು , ಬೆಳಕಿನ ಸಂಕೇತಗಳನ್ನು ಸ್ವೀಕರಿಸುತ್ತದೆ. ಇದು ಪಾಪೆಯ ಗಾತ್ರದ ಹೊಂದಾಣಿಕೆ, ಮೆಲಟೊನಿನ್ ಎಂಬ ಹಾರ್ಮೋನ್ ನ ನಿಯಂತ್ರಣ ಮತ್ತು ನಿಗ್ರಹ ಹಾಗೂ ಜೈವಿಕ ಗಡಿಯಾರದ ಹೊಂದಾಣಿಕೆ ಮೇಲೆ ಪ್ರಭಾವ ಬೀರುತ್ತದೆ.