ಮಧುರೈ
From Wikipedia, the free encyclopedia
ಭಾರತೀಯ ದ್ವೀಪಕಲ್ಪ[2] ದ ಜನವಾಸ್ತವ್ಯವಿದ್ದ ಪ್ರಾಚೀನ ನಗರ ಮಧುರೈ (ತಮಿಳು:மதுரை). ಭಾರತದ ರಾಜ್ಯವಾದ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ವೈಗೈ ನದಿತೀರದ ಪ್ರಾಚೀನ ಹಾಗೂ ಪ್ರತಿಷ್ಠಿತ ನಗರವಾಗಿದೆ.
ಮಧುರೈ
ಮದುರೈ மதுரை | |
---|---|
city | |
Government | |
• ಮೇಯರ್ | ಥೆನ್ಮೋಳಿ ಗೋಪಿನಾಥನ್[1] |
Population (೨೦೦೧) | |
• Total | ೧೧,೨೮,೮೬೯ |
Website | www.maduraicorporation.in |
ಈ ನಗರವನ್ನು ವ್ಯಾಪಕವಾಗಿ ದೇವಾಲಯಗಳ ನಗರ [2], ಇದನ್ನು ಕೂದಲ್ ಮಾನಗರ್ ಎಂದೂ ಕರೆಯುತ್ತಾರೆ, ತಮಿಳುನಾಡಿನ ಸಾಂಸ್ಕೃತಿಕ ರಾಜಧಾನಿ (ಕಲಾಚಾರ ತಲೈನಗರ್) , ಮಲ್ಲಿಗೈ ಮಾನಗರ್(ಮಲ್ಲಿಗೆಯ ನಗರ), ಥೂಂಗ ನಗರಂ(ನಿದ್ದೆಮಾಡದ ನಗರ), ಪೂರ್ವದ ಅಥೆನ್ಸ್ ಎಂಬಿತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. 2001ರ ಜನಗಣತಿ[3] ಯ ಪ್ರಕಾರ 1,203,095ರಷ್ಟು ಜನಸಂಖ್ಯೆ ಇರುವ ಈ ನಗರ ತಮಿಳುನಾಡಿನಲ್ಲೇ ಮೂರನೇ ಅತಿ ದೊಡ್ಡ ಮಹಾನಗರವಾಗಿದೆ.
ಪ್ರಾಚೀನ ಕಾಲದ ದಕ್ಷಿಣ ನಾಗರೀಕತೆಯ ರಾಜಧಾನಿಯಾಗಿತ್ತು ಮಧುರೈ ಮಹಾನಗರ. ಮಧುರೈನ ಸಾಂಸ್ಕೃತಿಕ ಹಿನ್ನೆಲೆಯು 2,500 ವರ್ಷಗಳಷ್ಟು ಹಿಂದಿನದು ಹಾಗೂ ನಗರವು ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದುದಲ್ಲದೇ 550 B.C.E.[2] ಗಳಷ್ಟು ಪ್ರಾಚೀನ ಕಾಲದಿಂದ ರೋಮ್ ಮತ್ತು ಗ್ರೀಸ್ ರಾಷ್ಟ್ರಗಳ ಜೊತೆಗೆ ವ್ಯವಹಾರ ನಡೆಸಲಾಗುತ್ತಿತ್ತು[4].