ಭಾರತದ ಸರ್ವೋಚ್ಛ ನ್ಯಾಯಾಲಯ
ಭಾರತದ ಅತ್ಯುನ್ನತವಾದ ನ್ಯಾಯಪೀಠ / From Wikipedia, the free encyclopedia
ಭಾರತದ ಸರ್ವೋಚ್ಛ ನ್ಯಾಯಾಲಯವು ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಅತೀ ಹೆಚ್ಚಿನ ಅಧಿಕಾರವುಳ್ಳ ನ್ಯಾಯಾಲಯವಾಗಿದೆ. ಭಾರತದ ಸಂವಿಧಾನದ ಛೇದ ೫, ಅನುಚ್ಛೇದ ೪ರ ಮೂಲಕ ಈ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಸರ್ವೋಚ್ಛ ನ್ಯಾಯಾಲಯದ ಮೂಲ ಉದ್ದೇಶವೆಂದರೆ: ಸಂವಿಧಾನದ ರಕ್ಷಣೆ, ಸಂವಿಧಾನಿಕ ಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ಯಾವುದೇ ಖಟ್ಲೆಯ ವಾದದ ಕೊನೆಯಹಂತ.
Quick Facts ಭಾರತದ ಸರ್ವೋಚ್ಛ ನ್ಯಾಯಾಲಯ, ಸ್ಥಾಪನೆ ...
ಭಾರತದ ಸರ್ವೋಚ್ಛ ನ್ಯಾಯಾಲಯ | |
---|---|
ಸ್ಥಾಪನೆ | ಜನವರಿ ೨೮, ೧೯೫೦ |
ದೇಶ | ಭಾರತ |
ಸ್ಥಳ | ಭಗವಾನ್ ದಾಸ್ ರಸ್ತೆ, ನವ ದೆಹಲಿ, ಭಾರತ, 110201 |
ಅಕ್ಷಾಂಶ ಮತ್ತು ರೇಖಾಂಶ | 28.622237°N 77.239584°E / 28.622237; 77.239584 |
ಧ್ಯೇಯವಾಕ್ಯ | यतो धर्मस्ततो जयः॥ (Yato dharmas tato jayah) ಧರ್ಮ ಎಲ್ಲಿದೆಯೋ ಅಲ್ಲಿ ಜಯವಿದೆ. |
ಸಂಯೋಜನೆ ಪದ್ಧತಿ | Collegium System |
ಅಧಿಕೃತ ಗೊಳಿಸಿದ್ದು | ಭಾರತದ ಸಂವಿಧಾನ |
ನ್ಯಾಯಾಧೀಶರ ಅಧಿಕಾರ ಅವಧಿ | 65 ವರ್ಷ |
ಸ್ಥಾನಗಳ ಸಂಖ್ಯೆ | 34(33+1) |
ಜಾಲತಾಣ | supremecourtofindia.nic.in |
ಭಾರತದ ಮುಖ್ಯ ನ್ಯಾಯಾಧೀಶರು | |
ಪ್ರಸ್ತುತ | ಡಿ. ವೈ. ಚಂದ್ರಚೂಡ |
ಇಂದ | ೦೯ ನವಂಬರ್ ೨೦೨೨ |
Close
ಭಾರತದ ಸರ್ವೋಚ್ಛ ನ್ಯಾಯಾಲಯವು ೨೮ನೇಯ ಜನವರಿ ೧೯೫೦ರಂದು ತನ್ನ ಮೊದಲನೆಯ ಖಟ್ಲೆಯ ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಸರ್ವೋಚ್ಚ ನ್ಯಾಯಾಲಯದ ಅಧಿಕಾರ ಹಾಗೂ ಕಾರ್ಯಗಳು. 1.ಪ್ರಾರಂಭಿಕ ಅಥವಾ ಮೂಲ ಅಧಿಕಾರ ಕಾರ್ಯಗಳು. 2.ಮನವಿ ಅಧಿಕಾರ 3.ಸಲಹಾ ಅಧಿಕಾರ.