Thumb

ಇತಿಹಾಸ

ಬಿಜಾಪುರದ ಕೋಟೆ ಮತ್ತು ಇತರ ರಚನೆಗಳ ಶ್ರೀಮಂತ ಇತಿಹಾಸ ಕಲ್ಯಾಣಿ ಚಾಲುಕ್ಯರಿಂದ ೧೦-೧೧ರ ಶತಮಾನಗಳಲ್ಲಿ ಸ್ಥಾಪಿಸಲ್ಪಟ್ಟ ಬಿಜಾಪುರ ನಗರದ ಇತಿಹಾಸದಲ್ಲಿ ಅಂತರ್ಗತವಾಗಿದೆ. ಇದು ಆಗ ವಿಜಯಪುರ (ವಿಜಯದ ನಗರ) ಎಂದು ಕರೆಯಲ್ಪಡುತ್ತಿತ್ತು. ನಗರವು ೧೩ ನೇ ಶತಮಾನದ ಕೊನೆಯಲ್ಲಿ ದೆಹಲಿಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಒಳಪಟ್ಟಿತು. ೧೩೪೭ರಲ್ಲಿ, ಈ ಪ್ರದೇಶವನ್ನು ಗುಲ್ಬರ್ಗದ ಬಹಮನಿ ಸುಲ್ತಾನರು ವಶಪಡಿಸಿಕೊಂಡರು. ಈ ವೇಳೆಗೆ, ನಗರ ವಿಜಾಪುರ ಅಥವಾ ಬಿಜಾಪುರ ಎಂದು ಕರೆಯಲ್ಪಡುತ್ತಿತ್ತು.

ಟರ್ಕಿಯ ಸುಲ್ತಾನ ಎರಡನೇ ಮುರಾದ್‍ನ ಮಗ, ಯೂಸುಫ್ ಆದಿಲ್ ಷಾ ಮೂರನೇ ಸುಲ್ತಾನ್ ಮೊಹಮ್ಮದ್‍ನ ಅಡಿಯಲ್ಲಿ ೧೪೮೧ ರಲ್ಲಿ ಸಲ್ತನತ್‍ನ ಬೀದರ್ ನ್ಯಾಯಾಲಯ ಸೇರಿದ್ದನು. ಅವನನ್ನು ರಾಜ್ಯದ ಪ್ರಧಾನ ಮಂತ್ರಿ ಮಹಮೂದ್ ಗವಾನನು ಗುಲಾಮನಾಗಿ ಖರೀದಿಸಿದ್ದನು. ಅವನು, ಸಲ್ತನತ್‍ನ ಸಕ್ರಿಯ ರಕ್ಷಣೆಯಲ್ಲಿ ತೋರಿದ ನಿಷ್ಠೆ ಮತ್ತು ಶೌರ್ಯಕ್ಕಾಗಿ, ಬಿಜಾಪುರ ರಾಜ್ಯಪಾಲನಾಗಿ ೧೪೮೧ ರಲ್ಲಿ ನೇಮಕಗೊಂಡನು. ಕೋಟೆ ಮತ್ತು ಅರಮನೆ ಮತ್ತು ಫಾರೂಕ್ ಮಹಲ್ ಅವನಿಂದ ಪರ್ಷಿಯಾ, ಟರ್ಕಿ ಮತ್ತು ರೋಮ್‍ನ ನುರಿತ ವಾಸ್ತುಶಿಲ್ಪಿಗಳು ಮತ್ತು ಕುಶಲಕರ್ಮಿಗಳ ಸಹಾಯದಿಂದ ಕಟ್ಟಲ್ಪಟ್ಟಿತು. (೧೪೮೨ ರಲ್ಲಿ, ಬಹಮಿನಿ ಸಾಮ್ರಾಜ್ಯ ಐದು ರಾಜ್ಯಗಳಾಗಿ ಹೋಳಾಯಿತು ಮತ್ತು ಬಿಜಾಪುರ ಸಲ್ತನತ್ ಅವುಗಳಲ್ಲಿ ಒಂದು) ಯೂಸುಫ್ ಸುಲ್ತಾನ್‍ನ ಆಡಳಿತದ ಸ್ವತಂತ್ರ ಎಂದು ಘೋಷಿಸಿಕೊಂಡನು ಮತ್ತು ಹೀಗೆ ೧೪೮೯ ರಲ್ಲಿ, ಆದಿಲ್ ಷಾಹಿ ರಾಜವಂಶದ ಅಥವಾ ಬಹಮನಿ ರಾಜ್ಯ ಸ್ಥಾಪಿಸಿದ.

ಯೂಸುಫ್ ಆದಿಲ್ ಷಾ ಮತ್ತು ಅವನ ಹಿಂದೂ ಪತ್ನಿ ಪುಂಜಿ(ಒಬ್ಬ ಮರಾಠಾ ಯೋಧನ ಮಗಳು)ಯ ಮಗ, ಇಬ್ರಾಹಿಂ ಆದಿಲ್ ಷಾ ತನ್ನ ತಂದೆಯ ಮರಣದ ನಂತರ ೧೫೧೦ರಲ್ಲಿ ಉತ್ತರಾಧಿಕಾರಿಯಾದನು. ಅವನು ಅಪ್ರಾಪ್ತವಯಸ್ಕನಾಗಿದ್ದರಿಂದ, ಸಿಂಹಾಸನ ಪಡೆದುಕೊಳ್ಳುವುದಕ್ಕೆ ಪ್ರಯತ್ನವಾಯಿತು, ಇದು ಪರಿಣಾಮಕಾರಿಯಾಗಿ ಪುರುಷ ಉಡುಗೆಯಲ್ಲಿ ತನ್ನ ಮಗನ ಕಾರಣಕ್ಕಾಗಿ ಹೋರಾಟಮಾಡಿದ ಅವನ ಧೀರ ತಾಯಿಯ ಸಕಾಲಿಕ ಮಧ್ಯಪ್ರವೇಶದಿಂದ ಈಡೇರಲಿಲ್ಲ. ನಂತರ ಅವನು ಬಿಜಾಪುರದ ಸಲ್ತನತ್‍ನ ರಾಜನಾಗುತ್ತಾನೆ. ಅವನು ಕೋಟೆಗೆ ಹೆಚ್ಚಿನ ಸೇರ್ಪಡೆ ಮಾಡುವ ಮತ್ತು ಕೋಟೆಯ ಒಳಗೆ ಜಾಮಿ ಮಸೀದಿ ನಿರ್ಮಿಸುವುದರಲ್ಲಿ ಕಾರಣಕರ್ತನಾದನು.

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.