ಬಳ್ಳಿ (ಲತೆ) ಎಂದರೆ ಜೋಲು ಬೀಳುವ ಅಥವಾ ಆರೋಹಿ ಕಾಂಡಗಳು, ಲಿಯಾನಾಗಳು ಅಥವಾ ಹಬ್ಬುಕಾಂಡಗಳಂತಹ ಬೆಳವಣಿಗೆ ರೂಪದ ಯಾವುದೇ ಸಸ್ಯ.[1]

Thumb
ವೀಳ್ಯದೆಲೆ ಬಳ್ಳಿ, ಒಂದು ಹಬ್ಬುವ ಸಸ್ಯ

ಕೆಲವು ಸಸ್ಯಗಳು ಯಾವಾಗಲೂ ಬಳ್ಳಿಗಳಾಗಿ ಬೆಳೆದರೆ, ಕೆಲವು ಭಾಗಶಃ ಸಮಯ ಮಾತ್ರ ಬಳ್ಳಿಗಳಾಗಿ ಬೆಳೆಯುತ್ತವೆ. ಉದಾಹರಣೆಗೆ, ನಂಜು ಐವಿ ಹಾಗೂ ಬಿಟರ್‌ಸ್ವೀಟ್ ಗಿಡಗಳು ಆಧಾರವಿಲ್ಲದಾಗ ಎತ್ತರವಿಲ್ಲದ ಪೊದೆಗಳಾಗಿ ಬೆಳೆಯಬಲ್ಲವು, ಆದರೆ ಆಧಾರ ಲಭ್ಯವಿದ್ದಾಗ ಬಳ್ಳಿಗಳಾಗಿ ಮಾರ್ಪಾಡಾಗುತ್ತವೆ.[2]

ಬಳ್ಳಿಯು ಉದ್ದನೆಯ ಕಾಂಡಗಳನ್ನು ಆಧರಿಸಿದ ಬೆಳವಣಿಗೆ ರೂಪವನ್ನು ಪ್ರದರ್ಶಿಸುತ್ತದೆ. ಇದರ ಉದ್ದೇಶವೆಂದರೆ ಬಹಳ ಸಹಾಯಕ ಅಂಗಾಂಶಕ್ಕೆ ಶಕ್ತಿ ಹೂಡುವ ಬದಲು ಬಳ್ಳಿಯು ಬಂಡೆ ಒಡ್ಡಿಕೆಗಳು, ಇತರ ಸಸ್ಯಗಳು, ಅಥವಾ ಇತರ ಆಧಾರಗಳನ್ನು ಬೆಳವಣಿಗಾಗಿ ಬಳಸಬಹುದು. ಇದರಿಂದ ಸಸ್ಯವು ಸೂರ್ಯನ ಬೆಳಕನ್ನು ಕನಿಷ್ಠ ಶಕ್ತಿ ಹೂಡಿಕೆಯೊಂದಿಗೆ ತಲುಪಲು ಸಾಧ್ಯವಾಗುತ್ತದೆ. ಸ್ಕೋಟೊಟ್ರಾಪಿಸಮ್‍ನ್ನು ಅಭಿವೃದ್ಧಿಪಡಿಸಿಕೊಳ್ಳುವ ಕೆಲವು ಉಷ್ಣವಲಯದ ಬಳ್ಳಿಗಳಿವೆ. ಇವು ಬೆಳಕಿನಿಂದ ದೂರ ಬೆಳೆಯುತ್ತವೆ, ಇದು ನಕಾರಾತ್ಮಕ ದ್ಯುತಿವರ್ತನದ ಒಂದು ಪ್ರಕಾರವಾಗಿದೆ.

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.