![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/8/82/Georg_Friedrich_Bernhard_Riemann.jpeg/640px-Georg_Friedrich_Bernhard_Riemann.jpeg&w=640&q=50)
ಬರ್ನ್ಹಾರ್ಡ್ ರೀಮನ್
ಗಣಿತಜ್ಞ / From Wikipedia, the free encyclopedia
ಜಾರ್ಜ್ ಫ್ರೆಡ್ರಿಕ್ ಬರ್ನ್ಹಾರ್ಡ್ ರೀಮನ್ (೧೭ ಸೆಪ್ಟೆಂಬರ್ ೧೮೨೬ ಹ್ಯಾನೋವರ್ - ೨೦ ಜುಲೈ ೧೮೬೬ ಸೆಲಾಸ್ಕಾ, ಇಟಲಿ)[1][2] ಒಬ್ಬ ಜರ್ಮನ್ ಗಣಿತಶಾಸ್ತ್ರಜ್ಞ. ಇವರು ಅಲ್ಪಾವಧಿಯ ಜೀವನವನ್ನು ಹೊಂದಿದ್ದರು ಮತ್ತು ತಮ್ಮ ಆವಿಷ್ಕಾರಗಳ ಬಗ್ಗೆ ಹೆಚ್ಚು ಬರೆಯಲಿಲ್ಲ, ಆದರೆ ಇವರು ಕಂಡುಹಿಡಿದ ವಿಷಯಗಳು ಬಹಳ ಮುಖ್ಯವಾಗಿದ್ದವು ಮತ್ತು ಇವು ಗಣಿತದ ಮೇಲೆ ಕ್ರಾಂತಿಕಾರಿ ಪರಿಣಾಮವನ್ನು ಬೀರಿದವು. ವಿಶ್ಲೇಷಣೆ, ಜ್ಯಾಮಿತಿ, ಗಣಿತೀಯ ಭೌತಶಾಸ್ತ್ರ ಮತ್ತು ಸಂಖ್ಯಾಸಿದ್ಧಾಂತ ಮುಂತಾದ ಗಣಿತಶಾಸ್ತ್ರದ ಹಲವು ಕ್ಷೇತ್ರಗಳಿಗೆ ಇವರು ಕೊಡುಗೆ ನೀಡಿದ್ದಾರೆ. ಅನೇಕ ಜನರು ಇವರನ್ನು ಮಹಾನ್ ಗಣಿತಜ್ಞ ಎಂದು ಕರೆಯುತ್ತಾರೆ.[3][4] ಸಂಕೀರ್ಣ ವಿಶ್ಲೇಷಣೆ ಮೇಲೆ ಕೆಲಸ ಮಾಡಿದ ಮೊದಲ ಗಣಿತಜ್ಞರಲ್ಲಿ ಇವರು ಒಬ್ಬರು.