ಬರ್ಕ
From Wikipedia, the free encyclopedia
ಬರ್ಕಗಳು ಟ್ರ್ಯಾಗ್ಯುಲಿಡೇ ಕುಟುಂಬದ ಸಣ್ಣ ಗಾತ್ರದ ಗೊರಸುಳ್ಳ ಸಸ್ತನಿಗಳು. ಇದರ ೧೦ ಪ್ರಜಾತಿಗಳು ಅಸ್ತಿತ್ವದಲ್ಲಿವೆ. ಅಸ್ತಿತ್ವದಲ್ಲಿರುವ ಪ್ರಜಾತಿಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಕಾಡುಗಳಲ್ಲಿ ಕಂಡುಬರುತ್ತವೆ. ಒಂದೇ ಒಂದು ಪ್ರಜಾತಿ ಮಧ್ಯ ಹಾಗೂ ಪಶ್ಚಿಮ ಆಫ಼್ರಿಕಾದ ಮಳೆಕಾಡುಗಳಲ್ಲಿ ಕಂಡುಬರುತ್ತದೆ.[1] ಇವು ಒಂಟಿಜೀವಿಗಳು ಅಥವಾ ಜೋಡಿಯಾಗಿ ಜೀವಿಸುತ್ತವೆ, ಮತ್ತು ಬಹುತೇಕವಾಗಿ ಕೇವಲ ಸಸ್ಯವಸ್ತುವನ್ನು ತಿನ್ನುತ್ತವೆ. ಬರ್ಕಗಳು ವಿಶ್ವದಲ್ಲಿನ ಅತ್ಯಂತ ಚಿಕ್ಕ ಗೊರಸುಳ್ಳ ಸಸ್ತನಿಗಳಾಗಿವೆ. ಏಷ್ಯಾದ ಪ್ರಜಾತಿಗಳು ೦.೭ ಹಾಗೂ ೮ ಕೆ.ಜಿ. ನಡುವೆ ತೂಕ ಹೊಂದಿದ್ದರೆ, ಆಫ಼್ರಿಕಾದ ಬರ್ಕವು ಗಣನೀಯವಾಗಿ ದೊಡ್ಡದಾಗಿದೆ (೭-೧೬ ಕೆ.ಜಿ.).