ಫ್ಲೂರೀನ್
From Wikipedia, the free encyclopedia
ಫ್ಲೂರೀನ್ ಒಂದು ಮೂಲಧಾತು. ಇದು ಸಾಮಾನ್ಯ ಉಷ್ಣತೆಯಲ್ಲಿ ತೆಳು ಹಳದಿ ಬಣ್ಣದ ಅನಿಲ.[1] ಇದು ಬಹು ಸುಲಭವಾಗಿ ಉಳಿದ ಮೂಲ ವಸ್ತುಗಳೊಂದಿಗೆ ರಾಸಾಯನಿಕ ಕ್ರಿಯೆಗೆ ಒಳಗಾಗುತ್ತದೆ.
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಫ್ಲೂರೀನ್, F, ೯ | ||||||||||||||
ರಾಸಾಯನಿಕ ಸರಣಿ | halogen | ||||||||||||||
ಗುಂಪು, ಆವರ್ತ, ಖಂಡ | 17, 2, p | ||||||||||||||
ಸ್ವರೂಪ | ಹಳದಿ-ಕಂದು ಅನಿಲ | ||||||||||||||
ಅಣುವಿನ ತೂಕ | 18.9984032(5) g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | 1s2 2s2 2p5 | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು | 2, 7 | ||||||||||||||
ಭೌತಿಕ ಗುಣಗಳು | |||||||||||||||
ಹಂತ | gas | ||||||||||||||
ಸಾಂದ್ರತೆ | (0 °C, 101.325 kPa) 1.7 g/L | ||||||||||||||
ಕರಗುವ ತಾಪಮಾನ | 53.53 K (−219.62 °C, −363.32 °ಎಫ್) | ||||||||||||||
ಕುದಿಯುವ ತಾಪಮಾನ | 85.03 K (−188.12 °C, −306.62 °F) | ||||||||||||||
ಕ್ರಾಂತಿಬಿಂದು | 144.13 K, 5.172 MPa | ||||||||||||||
ಸಮ್ಮಿಲನದ ಉಷ್ಣಾಂಶ | (F2) 0.510 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | (F2) 6.62 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) (F2) 31.304 J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | cubic | ||||||||||||||
ಆಕ್ಸಿಡೀಕರಣ ಸ್ಥಿತಿಗಳು | −1 (strongly acidic oxide) | ||||||||||||||
ವಿದ್ಯುದೃಣತ್ವ | 3.98 (Pauling scale) | ||||||||||||||
ಅಣುವಿನ ತ್ರಿಜ್ಯ | 50 pm | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | 42 pm | ||||||||||||||
ತ್ರಿಜ್ಯ ಸಹಾಂಕ | 71 pm (see covalent radius of fluorine) | ||||||||||||||
ವಾನ್ ಡೆರ್ ವಾಲ್ಸ್ ತ್ರಿಜ್ಯ | 147 pm | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | nonmagnetic | ||||||||||||||
ಉಷ್ಣ ವಾಹಕತೆ | (300 K) 27.7 m W·m−1·K−1 | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7782-41-4 | ||||||||||||||
ಉಲ್ಲೇಖನೆಗಳು | |||||||||||||||
ಇದು ವಿಸ್ತೃತಾವರ್ತಕೋಷ್ಟಕದ VII-A ಉಪಗುಂಪಿನಲ್ಲಿರುವ ಹ್ಯಾಲೊಜನ್ನುಗಳ ಪೈಕಿ ಮೊದಲನೆಯದು. ಅತ್ಯಧಿಕ ವಿದ್ಯುದ್ರುಣ ಮತ್ತು ಅತ್ಯಧಿಕ ಎಲೆಕ್ಟ್ರಾನ್ ಆಕರ್ಷಣ ಬಲ ಇರುವ ಧಾತು.[2] ತೀವ್ರ ಪಟು ಧಾತುವಾದ್ದರಿಂದ-ಇದಕ್ಕಿಂತ ಹೆಚ್ಚಿಗೆ ಪಟುವಾದ ಧಾತು ಇನ್ನೊಂದಿಲ್ಲ-ಇದು ನಿಸರ್ಗದಲ್ಲಿ ಮೂಲರೂಪದಲ್ಲಿ ಲಭಿಸುವುದಿಲ್ಲ. ಸಂಯುಕ್ತವಾಗಿ ಇದು ಫ್ಲೂರ್ಸ್ಟಾರ್ (CaF2). ಕ್ರಯೊಲೈಟ್ (Na3AlF6) ಮತ್ತು ಫ್ಲೂರ್ ಅಪಟೈಟ್ [CaF2 3Ca3(PO4)2] ಎಂಬವುಗಳಲ್ಲಿ ದೊರೆಯುತ್ತದೆ.[3][4] ಭೂಮಿಯಲ್ಲಿರುವ ಕ್ಯಾಲ್ಸಿಯಮ್ ಫ್ಲೂರೈಡ್ ಲವಣಗಳನ್ನು ಸಸ್ಯಗಳು ಹೀರಿಕೊಂಡು ಅವನ್ನು ಸೇವಿಸುವ ಪ್ರಾಣಿಗಳಿಗೆ ವರ್ಗಾಯಿಸುತ್ತದೆ. ಪ್ರಾಣಿಗಳ ಮೂಳೆ, ಹಲ್ಲು ಮತ್ತು ಉಗುರುಗಳಲ್ಲಿ ಈ ಸಂಯುಕ್ತ ವಸ್ತುವಿನ ಆಂಶ ಸೇರಿರುತ್ತದೆ. ಮನುಷ್ಯನ ಮಿದುಳಿನಲ್ಲಿ ಸುಮಾರು 3 ಮಿಲಿಗ್ರಾಮ್ ಸಂಯುಕ್ತ ಫ್ಲೂರೀನ್ ಉಂಟು.