ಫೀನಿಕ್ಸ್,ಅರಿಜೋನ
From Wikipedia, the free encyclopedia
ಫೀನಿಕ್ಸ್ (pronounced /ˈfiːnɪks/ FEE-niks, ಒ'ಒಧಾಮ್ ಸ್ಕಿಕಿಕ್ ,ಯಾವ್ ಪೈವಾಸಿಂಕಾ ,ವೆಸ್ಟರ್ನ್ ಅಪಾಚೆ ಫಿನಿಗಿಸ್ ,ನವಜೊ ಹೂಜ್ದೊ ,ಮೊಜಾವೆ ಹಚ್ಪಾ'ಅನ್ಯಾ ನ್ಯಾವಾ [1])ಇದು ಅದರ ರಾಜಧಾನಿಯಾಗಿರುವುದಲ್ಲದೇ ಅತಿ ದೊಡ್ಡ U.S. ಸ್ಟೇಟ್ ನ ವಿಶಾಲ ನಗರವಾಗಿದೆ.ಅರಿಜೊನವು ಯುನೈಟೆಡ್ ಸ್ಟೇಟ್ಸ್ ನಲ್ಲಿನ ಅಧಿಕ ಜನಸಂಖ್ಯೆಯುಳ್ಳ ಐದನೆಯ ದೊಡ್ಡ ನಗರ ಎನಿಸಿದೆ.ಅಲ್ಲದೇ ಅತ್ಯಧಿಕ ಜನಸಂಖ್ಯೆಯುಳ್ಳ ರಾಜಧಾನಿಯಾಗಿದೆ. ಫೀನೀಕ್ಸ್ ಸುಮಾರು 1,601,587 ಜನರಿಗೆ ಆಶ್ರಯ ನೀಡಿದ ನೆಲೆವಾಸವಾಗಿದೆ ಎಂದು U.S.ನ ಜನಗಣತಿ ಬ್ಯುರೊ 2009 ರಲ್ಲಿ ದಾಖಲಿಸಿದೆ.ಇದು ಫೀನಿಕ್ಸ್ ಮೆಟ್ರೊಪಾಲಿಟಿನ್ ಏರಿಯಾದ ಪ್ರಮುಖ ಪ್ರದೇಶವೆನಿಸಿದೆ.(ಇದನ್ನು ವ್ಯಾಲ್ಲಿ ಆಫ್ ದಿ ಸನ್ ಎಂದೂ ಹೇಳಲಾಗುತ್ತದೆ.)ಯುನೈಟೆಡ್ ಸ್ಟೇಟ್ಸ್ ನಲ್ಲಿ 12 ನೆಯ ಅತಿದೊಡ್ಡ ಮೆಟ್ರೊಪಾಲಿಟಿನ್ ಪ್ರದೇಶವಾಗಿದೆಯಲ್ಲದೇ ಒಟ್ಟು ಸುಮಾರು 4.3 ದಶಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆ ಇದೆ. ಇದಲ್ಲದೇ ಫೀನಿಕ್ಸ್ ಮಾರಿಕೊಪಾ ಕೌಂಟಿಯ ಒಂದು ಕೌಂಟಿ ಪ್ರದೇಶವಾಗಿದೆ.ಅಷ್ಟೇ ಅಲ್ಲದೇ ಯುನೈಟೆಡ್ ಸ್ಟೇಟ್ಸ್ ನಲ್ಲಿನ ಅತಿ ದೊಡ್ಡ ಪ್ರಮಾಣದ ಪ್ರಾದೇಶಿಕ ಗಾತ್ರದ ವಿಶಾಲತೆ ಪಡೆದಿದೆ.GR6
City of Phoenix | |
---|---|
City | |
Nickname: "Valley of the Sun" | |
Country | United States |
State | Arizona |
County | Maricopa |
Incorporated | February 5, 1881 |
Government | |
• Type | Council-Manager |
• Mayor | Phil Gordon (D) |
Area | |
• City | ೫೧೯ sq mi (೧೩೪೦ km2) |
• Land | ೫೧೮.೮ sq mi (೧೩೪೪ km2) |
• Water | ೦.೨ sq mi (೦.೫ km2) |
Elevation | ೧,೧೧೭ ft (೩೪೦ m) |
Population (2009) | |
• City | ೧೬,೦೧,೫೮೭ ( ೫th) |
• Density | ೨,೯೩೭.೮/sq mi (೧,೧೮೮.೪/km2) |
• Metro | ೪೩,೬೪,೦೩೪ |
• Demonym | Phoenician |
Time zone | UTC-7 (MST) |
• Summer (DST) | UTC-7 (no DST) |
Area code(s) | 602, 480, 623, 520 |
FIPS code | 04-55000 |
Major Airport | Phoenix Sky Harbor International Airport- PHX (Major/International) |
Website | http://www.phoenix.gov/ |
ಫೀನಿಕ್ಸ್ ನಗರವು 1861 ರಲ್ಲಿ ಪ್ರತಿಷ್ಟಾಪಿತಗೊಂಡ ನಂತರ 1881 ರಲ್ಲಿ ಒಂದು ನಗರವಾಗಿ ಸಮಗ್ರತೆ ಪಡೆಯಿತು.ಇದು ಮೊದಲು ಸಾಲ್ಟ್ ರಿವರ್ (ಉಪ್ಪು ನದಿ)ಮತ್ತು ಗಿಲಾ ರಿವರ್ ಗಳ ಸಂಗಮ ಪ್ರದೇಶದಲ್ಲಿ ತಲೆ ಎತ್ತಿದೆ. ಬರಬರುತ್ತಾ ಈ ನಗರವು ನಾರ್ತ್ ಅಮೆರಿಕಾದಲ್ಲಿ ಪ್ರಮುಖ ಸಾರಿಗೆ ಕೇಂದ್ರವಾಗಿ ಬೆಳೆಯಿತು.ಮಹತ್ವದ ಸಾರಿಗೆ ವ್ಯವಸ್ಥೆ,ಹಣಕಾಸಿನ ಆಡಳಿತ,ಔದ್ಯಮಿಕ,ಸಾಂಸ್ಕೃತಿಕ ಮತ್ತು ಆರ್ಥಿಕ ವಲಯವಾಗಿ ನೈಋತ್ಯ ಭಾಗದ ಯುನೈಟೆಡ್ ಸ್ಟೇಟ್ಸ್ ನಲ್ಲಿನ ಕೇಂದ್ರಸ್ಥಾನವಾಗಿದೆ. ನಗರವು ಅತ್ಯಂತ ಪ್ರಖ್ಯಾತ ಮತ್ತು ಗಣನೀಯ ರಾಜಕೀಯ ಸಂಸ್ಕೃತಿಗೆ ಕಾರಣವಾಗಿದೆ.ಅಮೆರಿಕಾದ ಪ್ರಭಾವಿ ರಾಜಕಾರಣಿಗಳು ಮತ್ತು ಅಸಂಖ್ಯಾತ ಪ್ರಮುಖ ಗೌರವಾನ್ವಿತ ವ್ಯಕ್ತಿಗಳಿರುವ ನಗರವೆನಿಸಿದೆ.ಅವರಲ್ಲಿಬಾರ್ರಿ ಗೊಲ್ಡ್ ವಾಟರ್,ವಿಲಿಯಮ್ ರೆಖಿಸ್ಟ್,ಜಾನ್ ಮೆಕೇನ್,ಜಾನೆಟ್ ನಾಪೊಲಿಟಾನೊ,ಕಾರ್ಲ್ ಹೈಡನ್ ಮತ್ತು ಸಾಂಡ್ರಾ ಡೇ ಒ ಕೊನ್ನೂರ್ ಮುಂತಾದವರು ಸೇರಿದ್ದಾರೆ. ಈ ನಗರದ ವಾಸಿಗಳನ್ನು ಫೀನಿಸಿಯನ್ಸ್ ಎಂದೂ ಕರೆಯಲಾಗುತ್ತದೆ.
ಸೊನೊರಾನ್ ಮರಭೂಮಿಯ ಈಶಾನ್ಯ ಭಾಗದಲ್ಲಿ ನೆಲೆಯಾಗಿರುವ ಫೀನಿಕ್ಸ್, ಯುನೈಟೆಡ್ ಸ್ಟೇಟ್ಸ್ ನ ಉಳಿದೆಲ್ಲ ನಗರಗಳಿಗಿಂತ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಪ್ರಮುಖ ನಗರವಾಗಿದೆ. ಇತ್ತೀಚಿನ ಒಂದು ವರ್ಷದ ಸರಾಸರಿ ಉಷ್ಣಾಂಶವು ಕಳೆದ ಮೂರು ತಿಂಗಳ ಅವಧಿಯಲ್ಲಿ 100 °F (37.8 °C)ರಷ್ಟಾಗಿತ್ತು.ಇದು ಆ ಋತುವಿನಲ್ಲಿ 120 °F (48.9 °C)ಕ್ಕಿಂತಲೂ ಅಧಿಕ ದಾಖಲಾಗಿತ್ತು.[2]