ಪದಗಳ ಮತ್ತು / ಅಥವಾ ಚಿತ್ರಗಳ ಸಂಗ್ರಹಕ್ಕೆ ಮಧ್ಯಮ ಜ್ಞಾನ ಅಥವಾ ಕಾಲ್ಪನಿಕ ಕಥೆಯನ್ನು ಪ್ರತಿನಿಧಿಸಲು, ಸಾಮಾನ್ಯವ From Wikipedia, the free encyclopedia
ಪುಸ್ತಕ ಒಂದು ಪಾರ್ಶ್ವದಲ್ಲಿರುವ ಕೀಲಿಗೆ ಒಟ್ಟಾಗಿ ಬಂಧಿಸಲಾದ ಕಾಗದ, ಚರ್ಮಕಾಗದ, ಅಥವಾ ಹೋಲುವ ವಸ್ತುಗಳ ಹಾಳೆಗಳ ಸಮೂಹ. ಪುಸ್ತಕದಲ್ಲಿನ ಒಂದು ಹಾಳೆಯ ಪ್ರತಿ ಪಾರ್ಶ್ವವನ್ನು ಪುಟ ಎಂದು ಕರೆಯಲಾಗುತ್ತದೆ. ಪುಸ್ತಕದ ಪುಟಗಳ ಮೇಲೆ ಬರಹ ಅಥವಾ ಚಿತ್ರಗಳನ್ನು ಮುದ್ರಿಸಬಹುದು ಅಥವಾ ಬರೆಯಬಹುದು. ಕಂಪ್ಯೂಟರ್ ಪರದೆ, ಸ್ಮಾರ್ಟ್ಫೋನ್ ಅಥವಾ ವಿ-ಓದು ಸಾಧನದ ಮೇಲೆ ಪುಸ್ತಕವನ್ನು ಹೋಲುವಂತೆ ಸಂವಿಭಾಗಿಸಲಾದ ವಿದ್ಯುನ್ಮಾನ ಚಿತ್ರವನ್ನು ವಿದ್ಯುನ್ಮಾನ ಪುಸ್ತಕ ಅಥವಾ ವಿ-ಪುಸ್ತಕ ಎಂದು ಕರೆಯಲಾಗುತ್ತದೆ.
"ಪುಸ್ತಕಗಳು" ಪದ ಸಾಹಿತ್ಯದ ಕೃತಿಸಂಗ್ರಹವನ್ನು, ಅಥವಾ ಸಾಹಿತ್ಯದ ಒಂದು ಮುಖ್ಯ ವಿಭಾಗವನ್ನೂ (ಉದಾ. ಮಕ್ಕಳ ಸಾಹಿತ್ಯ) ಸೂಚಿಸಬಹುದು. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ, ಮ್ಯಾಗಜ಼ೀನ್ಗಳು, ವಿದ್ವತ್ಪೂರ್ಣ ವಿಷಯದ ಪತ್ರಿಕೆಗಳು, ಅಥವಾ ಸುದ್ದಿಪತ್ರಿಕೆಗಳಂತಹ ಸರಣಿ ನಿಯತಕಾಲಿಕಗಳಿಂದ ವ್ಯತ್ಯಾಸ ಮಾಡಲು ಪುಸ್ತಕವನ್ನು ಪ್ರಬಂಧ ಎಂದು ಕರೆಯಲಾಗುತ್ತದೆ. ಕಾದಂಬರಿಗಳಲ್ಲಿ ಮತ್ತು ಕೆಲವೊಮ್ಮೆ ಇತರ ಬಗೆಯ ಪುಸ್ತಕಗಳಲ್ಲಿ (ಉದಾ. ಜೀವನ ಚರಿತ್ರೆಗಳು), ಪುಸ್ತಕವನ್ನು ಹಲವಾರು ದೊಡ್ಡ ವಿಭಾಗಗಳಾಗಿ ವಿಭಜಿಸಬಹುದು. ಪುಸ್ತಕಗಳ ಅತ್ಯಾಸಕ್ತಿಯ ಓದುಗ ಅಥವಾ ಸಂಗ್ರಹಕಾರ ಅಥವಾ ಪುಸ್ತಕವನ್ನು ಪ್ರೀತಿಸುವವನನ್ನು ಪುಸ್ತಕಪ್ರೇಮಿ ಅಥವಾ ಆಡುಮಾತಿನಲ್ಲಿ "ಪುಸ್ತಕಹುಳು" ಎಂದು ಕರೆಯಲಾಗುತ್ತದೆ.
ಪುಸ್ತಕಗಳನ್ನು ಮಾರುವ ಮತ್ತು ಖರೀದಿಸುವ ಸ್ಥಳವನ್ನು ಪುಸ್ತಕ ಮಳಿಗೆ ಅಥವಾ ಪುಸ್ತಕದಂಗಡಿ ಎಂದು ಕರೆಯಲಾಗುತ್ತದೆ. ಪುಸ್ತಕಗಳನ್ನು ಕೆಲವು ಕಿರಾಣಿ ಅಂಗಡಿಗಳು, ಔಷಧಿ ಅಂಗಡಿಗಳು ಮತ್ತು ಪತ್ರಿಕಾ ಮಾರಾಟಗಾರರಲ್ಲಿಯೂ ಮಾರಾಟಮಾಡಲಾಗುತ್ತದೆ. ಪುಸ್ತಕಗಳನ್ನು ಗ್ರಂಥಾಲಯಗಳಿಂದ ಎರವಲು ಪಡೆಯಲೂಬಹುದು. ೨೦೧೦ರ ವೇಳೆಗೆ, ಸರಿಸುಮಾರು ೧೩೦,೦೦೦,೦೦೦ ವಿಶಿಷ್ಟ ಶೀರ್ಷಿಕೆಗಳನ್ನು ಪ್ರಕಟಿಸಲಾಗಿದೆ ಎಂದು ಗೂಗಲ್ ಅಂದಾಜಿಸಿದೆ.[1] ಕೆಲವು ಹೆಚ್ಚು ಶ್ರೀಮಂತ ರಾಷ್ಟ್ರಗಳಲ್ಲಿ, ವಿ-ಪುಸ್ತಕಗಳ ಬಳಕೆಯ ಕಾರಣ ಮುದ್ರಿತ ಪುಸ್ತಕಗಳ ಮಾರಾಟ ಕಡಿಮೆಯಾಗಿದೆಯಾದರೂ, ವಿ-ಪುಸ್ತಕಗಳ ಮಾರಾಟ ೨೦೧೫ರ ಮೊದಲಾರ್ಧದಲ್ಲಿ ಇಳಿತವಾಗಿದೆ.
ಪ್ರಾಚೀನ ನಾಗರಿಕತೆಗಳಲ್ಲಿ ಬರಹ ವ್ಯವಸ್ಥೆಗಳನ್ನು ಸೃಷ್ಟಿಸಲಾದಾಗ, ಕಲ್ಲು, ಜೇಡಿಮಣ್ಣು, ಮರದ ತೊಗಟೆ, ಲೋಹದ ಹಾಳೆಗಳಂತಹ ವಿವಿಧ ಬಗೆಯ ವಸ್ತುಗಳನ್ನು ಬರೆಯುವುದಕ್ಕಾಗಿ ಬಳಸಿರಬಹುದು. ಅಂತಹ ಲೇಖಗಳ ಅಧ್ಯಯನ ಇತಿಹಾಸದ ಪ್ರಮುಖ ಭಾಗವನ್ನು ರೂಪಿಸುತ್ತದೆ. ಶಾಸನಗಳ ಅಧ್ಯಯನವನ್ನು ಶಾಸನಶಾಸ್ತ್ರ ಎಂದು ಕರೆಯಲಾಗುತ್ತದೆ. ಅಕ್ಷರ ಬರವಣಿಗೆ ಈಜಿಪ್ಟ್ನಲ್ಲಿ ಹೊರಹೊಮ್ಮಿತು. ಪ್ರಾಚೀನ ಐಗುಪ್ತರು ಹಲವುವೇಳೆ ಜಂಬುಕಾಗದದ ಮೇಲೆ ಬರೆಯುತ್ತಿದ್ದರು. ಪಠ್ಯಗಳನ್ನು ಬಲದಿಂದ ಎಡಕ್ಕೆ, ಎಡದಿಂದ ಬಲಕ್ಕೆ, ಅಥವಾ ಪರ್ಯಾಯ ಸಾಲುಗಳು ವಿರುದ್ಧ ದಿಕ್ಕುಗಳಲ್ಲಿ ಓದುವಂತೆ ಬರೆಯಲಾಗುತ್ತಿತ್ತು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.