ಓಷಿಯಾನದಲ್ಲಿರುವ ದೇಶ From Wikipedia, the free encyclopedia
ನೌರು ಗಣರಾಜ್ಯವು ದಕ್ಷಿಣ ಶಾಂತಸಾಗರದಲ್ಲಿರುವ ಒಂದು ದ್ವೀಪರಾಷ್ಟ್ರ. ಇದು ವಿಶ್ವದ ಅತಿ ಪುಟ್ಟ ದ್ವೀಪರಾಷ್ಟ್ರ ಹಾಗೂ ಅತಿ ಪುಟ್ಟ ಸ್ವತಂತ್ರ ಗಣರಾಜ್ಯ. ಅಲ್ಲದೆ ಅಧಿಕೃತ ರಾಜಧಾನಿಯೇ ಇಲ್ಲದಿರುವಂತಹ ಪ್ರಪಂಚದ ಏಕೈಕ ರಾಷ್ಟ್ರ. ೨೧ ಚ.ಕಿ.ಮೀ. ವಿಸ್ತೀರ್ಣವುಳ್ಳ ನೌರುವಿನ ಜನಸಂಖ್ಯೆ ಸುಮಾರು ೧೩೫೦೦. ೧೯ನೆಯ ಶತಮಾನದ ಕೊನೆಯಲ್ಲಿ ನೌರು ಜರ್ಮನಿಯ ವಸಾಹತಾಯಿತು. ಮೊದಲ ವಿಶ್ವಯುದ್ಧದ ನಂತರ ನೌರು ಆಸ್ಟ್ರೇಲಿಯ , ನ್ಯೂಜಿಲಂಡ್ ಮತ್ತು ಯುನೈಟೆಡ್ ಕಿಂಗ್ಡಮ್ ಗಳ ಸಂಯುಕ್ತ ಆಡಳಿತಕ್ಕೆ ಒಳಪಟ್ಟಿತು. ದ್ವಿತೀಯ ವಿಶ್ವಯುದ್ಧದ ಸಮಯದಲ್ಲಿ ಜಪಾನ್ ನೌರುವನ್ನು ಆಕ್ರಮಿಸಿತು. ಆ ಯುದ್ಧದ ತರುವಾಯ ನೌರು ಮತ್ತೆ ಮೊದಲಿನ ಜಂಟಿ ಆಡಳಿತಕ್ಕೆ ಒಳಪಟ್ಟಿತು. ಮುಂದೆ ೧೯೬೮ರಲ್ಲಿ ನೌರು ಸ್ವಾತಂತ್ರ್ಯ ಪಡೆಯಿತು. ನೌರು ಒಂದು ಫಾಸ್ಫೇಟ್ ಶಿಲೆಯ ದ್ವೀಪ. ಸಾಗರದ ಪಕ್ಷಿಗಳು ಲಕ್ಷಾಂತರ ವರ್ಷಗಳ ಕಾಲ ಉದುರಿಸಿದ ಹಿಕ್ಕೆ ಒಟ್ಟುಗೂಡಿ ಹಾಗೂ ಗಟ್ಟಿಯಾಗಿ ಇಲ್ಲಿನ ಮೇಲ್ಮೈ ರಚನೆಯಾಯಿತು. ಈ ಫಾಸ್ಫೇಟ್ ಕೃಷಿಯಲ್ಲಿ ಉಪಯೋಗಿಸಲ್ಪಡುವ ಪ್ರಮುಖ ಗೊಬ್ಬರವಾದ್ದರಿಂದ, ಫಾಸ್ಫೇಟ್ ಗಣಿಗಾರಿಕೆಯೇ ನೌರುವಿನ ಅತಿ ದೊಡ್ಡ ಉದ್ಯಮವಾಗಿ ಬೆಳೆಯಿತು. ದೇಶದ ಏಕೈಕ ಆದಾಯದ ಮೂಲ ಫಾಸ್ಫೇಟ್ ಗೆ ದೊರೆಯುತ್ತಿದ್ದ ಗೌರವಧನ. ಹೀಗಾಗಿ ಹಠಾತ್ತಾಗಿ ಅಪಾರ ಸಂಪತ್ತನ್ನು ಗಳಿಸಿದ ನೌರು ಕೆಲ ದಶಕಗಳವರೆಗೆ ವಿಶ್ವದಲ್ಲಿ ಅತ್ಯುತ್ತಮ ಜೀವನಮಟ್ಟವನ್ನು ಹೊಂದಿತ್ತು. ಆದರೆ ಮುಂದಾಲೋಚನೆಯಿಲ್ಲದೆ ತನ್ನೆಲ್ಲ ಸಂಪತ್ತನ್ನು ದುಂದುಮಾಡಿದ ನೌರು ಫಾಸ್ಫೇಟ್ ನಿಕ್ಷೇಪ ಬರಿದಾದ ಮೇಲೆ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿತು. ಇಂದು ಕನಿಷ್ಠ ಜನೋಪಯೋಗಿ ಕೆಲಸಗಳನ್ನು ಮಾಡಲೂ ಸರಕಾರದ ಬಳಿ ಹಣವಿಲ್ಲ. ರಾಷ್ಟ್ರೀಯ ಬ್ಯಾಂಕ್ ದಿವಾಳಿಯಾಗಿದೆ. ಒಂದೊಮ್ಮೆ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ತಲಾವಾರು ಉತ್ಪನ್ನ ಹೊಂದಿದ್ದ ನೌರು ಈಗ ಬಡರಾಷ್ಟ್ರಗಳ ಸಾಲಿನಲ್ಲಿ ನಿಂತಿದೆ. ಇಂದು ಆಸ್ಟ್ರೇಲಿಯಾದಿಂದ ದೊರೆಯುವ ಸಹಾಯಧನವೇ ನೌರುಗೆ ಮುಖ್ಯ ಆಧಾರ. ಬೇರಾವುದೇ ಸಂಪನ್ಮೂಲಗಳಿಲ್ಲದ ನೌರು ಎಲ್ಲಾ ಅವಶ್ಯಕ ವಸ್ತುಗಳನ್ನು ಆಮದುಮಾಡಿಕೊಳ್ಳುತ್ತಿದೆ. ಕೊಂಚ ತೆಂಗಿನ ತೋಟಗಳನ್ನು ಹೊರತುಪಡಿಸಿದರೆ ಇತರ ಕೃಷಿ ಚಟುವಟಿಕೆಗಳಿಲ್ಲ. ಅವಿರತ ಫಾಸ್ಫೇಟ್ ಗಣಿಗಾರಿಕೆಯು ದೇಶದ ಹೆಚ್ಚಿನ ನೆಲವನ್ನು ಹಾಳುಗೆಡವಿದೆ. ಗಣಿಗಾರಿಕೆಯ ತ್ಯಾಜ್ಯವಸ್ತುಗಳಿಂದಾಗಿ ಮೀನುಗಾರಿಕೆಯೂ ಭಾರಿ ಹೊಡೆತ ಅನುಭವಿಸಿದೆ. ಒಟ್ಟಿನಲ್ಲಿ ನೌರು ಆಧುನಿಕ ಜಗತ್ತಿನ ದುರಂತ ಕಥೆಗಳಲ್ಲಿ ಒಂದು.
ನೌರು ಗಣರಾಜ್ಯ ರಿಪಬ್ಲಿಕ್ ನೌರೋ | |
---|---|
Flag | |
Motto: "ಗಾಡ್ಸ್ ವಿಲ್ ಫಸ್ಟ್" | |
Anthem: ನೌರು ಬ್ವಿಯೇಮ | |
Capital | ರಾಜಧಾನಿ ಇಲ್ಲ1 |
Largest city | ಯರೆನ್ |
Official languages | ಇಂಗ್ಲಿಷ್, ನೌರುವನ್ |
Demonym(s) | ನೌರುವನ್ |
Government | ಗಣರಾಜ್ಯ |
• ರಾಷ್ಟ್ರಾಧ್ಯಕ್ಷ | ಲುಡ್ವಿಗ್ ಸ್ಕಾಟಿ |
ಸ್ವಾತಂತ್ರ್ಯ | |
• ಅಸ್ಟ್ರೇಲಿಯ,ನ್ಯೂಜಿಲಂಡ್ ಮತ್ತು ಯು.ಕೆ. ಮೂಲಕ ವಿಶ್ವಸಂಸ್ಥೆಯ ವಿಶ್ವಸ್ಥಮಂಡಳಿಯಿಂದ | ಜನವರಿ 31 1968 |
• Water (%) | ಅತ್ಯಲ್ಪ |
Population | |
• ಜುಲೈ 2007 estimate | 13,528 (214ನೆಯದು) |
GDP (PPP) | 2005 estimate |
• Total | $60 ಮಿಲಿಯನ್ (224ನೆಯದು) |
• Per capita | $5,000 (2005 est.) (132ನೆಯದು) |
HDI (2003) | ಮಾಹಿತಿ ಇಲ್ಲ Error: Invalid HDI value · ಮಾಹಿತಿ ಇಲ್ಲ |
Currency | ಅಸ್ಟ್ರೇಲಿಯನ್ ಡಾಲರ್ (AUD) |
Time zone | UTC+12 |
Calling code | 674 |
Internet TLD | .nr |
1 Yaren is the largest settlement and often cited as capital, although Nauru has no officially designated capital. |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.