ಪ್ರಶಸ್ತಿ ಪಡೆದವರು

Thumb
ಕೊಲಂಬಿಯಾದ ಅಧ್ಯಕ್ಷ ಜಾನ್ ಮ್ಯಾನುವೆಲ್ ಸ್ಯಾಂಟೋಸ್ (In Brazil)
  • 2016ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ:
  • ಕೊಲಂಬಿಯಾದ ಅಧ್ಯಕ್ಷ ಜಾನ್ ಮ್ಯಾನುವೆಲ್ ಸ್ಯಾಂಟೋಸ್ ಅವರು 2016ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಕೊಲಂಬಿಯಾದಲ್ಲಿನ ಐದು ದಶಕಗಳ ಆಂತರಿಕ ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿರುವ ಸ್ಯಾಂಟೋಸ್‌ ಅವರ ಶ್ರಮವನ್ನು ಪರಿಗಣಿಸಿ ಅವರನ್ನು ಶಾಂತಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ. ಕಳೆದ 52 ವರ್ಷಗಳಿಂದ ಸರ್ಕಾರ ಮತ್ತು ಬಂಡುಕೋರರ ನಡುವೆ ನಡೆಯುತ್ತಿದ್ದ ಸಶಸ್ತ್ರ ಸಂಘರ್ಷದ ವಿರುದ್ಧ 2016ರ ಆಗಸ್ಟ್‌ನಲ್ಲಷ್ಟೇ ಕದನ ವಿರಾಮ ಘೋಷಣೆ ಆಗಿದೆ. ಕದನ ವಿರಾಮ ಘೋಷಣೆ ಆಗುವಲ್ಲಿ ಸ್ಯಾಂಟೋಸ್‌ ಅವರ ಪಾತ್ರ ಹೆಚ್ಚಿದೆ. ಆದರೆ, ಆಕ್ಟೋಬರ್‌ 2ರಂದು ನಡೆದ ಜನಮತಗಣನೆಯಲ್ಲಿ ಕೊಲಂಬಿಯಾ ಪ್ರಜೆಗಳು ಕದನ ವಿರಾಮದ ಒಪ್ಪಂದವನ್ನು ತಿರಸ್ಕರಿಸಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಕದನ ವಿರಾಮ ಕೊನೆಗೊಳ್ಳಲಿದೆ. ಆದರೆ, ಶಾಂತಿ ನೆಲೆಸುವಲ್ಲಿ ಸ್ಯಾಂಟೋಸ್ ಅವರ ಪ್ರಯತ್ನವನ್ನು ಪ್ರಸಂಶಿಸಿದರೆ, ಇತರರೂ ಅವರಿಂದ ಪ್ರೇರಿತರಾಗಬಹುದು. ಹೀಗಾಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ.[1]

2015 ನೇ ಸಾಲಿನ ನೊಬೆಲ್ ಪ್ರಶಸ್ತಿ ಪುರಸ್ಕೃತರು

  • ನೊಬೆಲ್ ಶಾಂತಿ ಪ್ರಶಸ್ತಿ: ನ್ಯಾಷನಲ್ ಡಯಲಾಗ್ ಕ್ವಾರ್ಟರ್ ಎಂಬ ನಾಲ್ಕು ಸಂಸ್ಥೆಗಳ ಗುಂಪಿಗೆ 2011ರ ಜಾಸ್ಮಿನ್ ಕ್ರಾಂತಿಯ ಹಿನ್ನೆಲೆಯಲ್ಲಿ ಟುನಿಷಿಯಾದ ಬಹು ಸಾಂಸ್ಕೃತಿಕ ಪ್ರಜಾಪ್ರಭುತ್ವದ ಕಟ್ಟಡಕ್ಕೆ ತನ್ನ ನಿರ್ಣಾಯಕ ಕೊಡುಗೆಗಾಗಿ ನೊಬೆಲ್ ಶಾಂತಿ ಪುರಸ್ಕಾರ.
  • ನೊಬೆಲ್ ಶಾಂತಿ ಪ್ರಶಸ್ತಿ: ನ್ಯಾಷನಲ್ ಡಯಲಾಗ್ ಕ್ವಾರ್ಟರ್ ಎಂಬ ನಾಲ್ಕು ಸಂಸ್ಥೆಗಳ ಗುಂಪಿಗೆ 2011ರ ಜಾಸ್ಮಿನ್ ಕ್ರಾಂತಿಯ ಹಿನ್ನೆಲೆಯಲ್ಲಿ ಟುನಿಷಿಯಾದ ಬಹು ಸಾಂಸ್ಕೃತಿಕ ಪ್ರಜಾಪ್ರಭುತ್ವದ ಕಟ್ಟಡಕ್ಕೆ ತನ್ನ ನಿರ್ಣಾಯಕ ಕೊಡುಗೆಗಾಗಿ ನೊಬೆಲ್ ಶಾಂತಿ ಪುರಸ್ಕಾರ.[2]

2014 ನೇ ಸಾಲಿನ ನೊಬೆಲ್ ಪ್ರಶಸ್ತಿ ಪುರಸ್ಕೃತರು

  • ಮಲಾಲಾ ಮತ್ತು ಸತ್ಯಾರ್ಥಿಗೆ ನೊಬೆಲ್ ಶಾಂತಿ ಪುರಸ್ಕಾರ
  • October 10, 2014,
  • ಪಾರಿತೋಷಕ ವಿಜೇತ ಕೈಲಾಸ್ ಸತ್ಯಾರ್ಥಿ
  • ಶಾಂತಿ ಪ್ರತಿಪಾದಕ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ತತ್ತ್ವ ಚಿಂತನೆಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಕೈಲಾಶ್ ಸತ್ಯಾರ್ಥಿ ಈಗ ವಿಶ್ವದ ಗಮನ ಸೆಳೆದಿದ್ದಾರೆ. ಸಾವಿರಾರು ಬಾಲ ಕಾರ್ಮಿಕರ ದಾಸ್ಯಕ್ಕೆ ಮುಕ್ತಿ ಹಾಡಿದ ಕೈಲಾಶ್ ಅವರಿಗೆ 2014ನೇ ಸಾಲಿನ ನೊಬೆಲ್ ಶಾಂತಿ ಪಾರಿತೋಷಕ ಲಭಿಸಿದೆ.
  • ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ನಡೆಸುತ್ತಾ ಬಂದಿರುವ ಪಾಕಿಸ್ತಾನದ ಮಲಾಲ ಯೂಸಫಾಜೆ ಅವರೊಟ್ಟಿಗೆ ಕೈಲಾಶ್ ಅವರಿಗೂ ನೊಬೆಲ್ ಸಂಸ್ಥೆಯಿಂದ ಉನ್ನತ ಗೌರವಾದರ ಗಳಿಸಿದ್ದಾರೆ. ಕೈಲಾಶ್ ಅವರ ಬಚ್ ಪನ್ ಬಚಾವೋ ಆಂದೋಲನ್ ಸಂಸ್ಥೆ 1980ರಿಂದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ,ಮಕ್ಕಳಿಗೆ ಶಿಕ್ಷಣ ಹಕ್ಕು, ದಾಸ್ಯ ವಿಮೋಚನೆ ಮುಂತಾದ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ಇಲ್ಲಿವರೆಗೂ ಸರಿ ಸುಮಾರು 80,000ಕ್ಕೂ ಅಧಿಕ ಮಕ್ಕಳನ್ನು ಜೀತ ಪದ್ಧತಿಯಿಂದ ಮುಕ್ತಗೊಳಿಸಿ ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ. ಸರ್ವ ಶಿಕ್ಷ ಅಭಿಯಾನವನ್ನು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕೈಲಾಶ್ ಸಮರ್ಥವಾಗಿ ಬಳಸಿಕೊಂಡರು. ಬಾಲ ಕಾರ್ಮಿಕ ಪದ್ಧತಿ ಮಾನವ ಹಕ್ಕುಗಳ ಉಲ್ಲಂಘನೆ ಎಂಬುದನ್ನು ವಿವಿಧ ರೀತಿಯಲ್ಲಿ ಸಮಾಜಕ್ಕೆ ಮನವರಿಕೆ ಮಾಡಿಕೊಟ್ಟರು.
  • ಮಲಾಲಾ, ನೊಬೆಲ್ ಶಾಂತಿ ಪುರಸ್ಕಾರ
  • ವಿದ್ಯಾರ್ಥಿನಿಯಾಗಿರುವ 17 ವರ್ಷದ ಪಾಕಿಸ್ತಾನದ ಮಲಾಲ ಯೂಸಫ್ ಝಾಯಿ ಈ ಬಾರಿ ನೊಬೆಲ್‌ ಪಡೆದುಕೊಂಡಿದ್ದಾರೆ. ಅಲ್ಲದೇ ನೊಬೆಲ್‌ ಶಾಂತಿ ಪುರಸ್ಕೃತರಲ್ಲಿ ಅತ್ಯಂತ ಕಿರಿಯ ವಯಸ್ಸಿನಳು ಎಂಬ ಹಿರಿಮೆಯೂ ಪಾತ್ರರಾಗಿದ್ದಾರೆ. ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ತಡೆದ ಪಾಕಿಸ್ತಾನದ ತಾಲಿಬಾನ್ ಸಂಘಟನೆ ವಿರುದ್ಧ ಪ್ರತಿಭಟನೆಗೆ ನಿಂತ ಮಲಾಲಾ ಮೇಲೆ 2012ರಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಸಾವು ಬದುಕಿನ ನಡುವೆ ಹೋರಾಡಿ ಗೆದ್ದ ಮಲಾಲಾ ಪಾಕಿಸ್ತಾನಕ್ಕೆ ಮೊದಲ ನೊಬೆಲ್‌ ಪ್ರಶಸ್ತಿ [3]

ಪ್ರಶಸ್ತಿ ಪಡೆದವರು ೧೯೦೧ರಿಂದ

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.