ನೆಕ್ಲೇಸ್
From Wikipedia, the free encyclopedia
ನೆಕ್ಲೇಸ್ ಹಾರವು ಕುತ್ತಿಗೆಗೆ ಧರಿಸಿರುವ ಆಭರಣವಾಗಿದೆ. ಮುಂಚಿನ ಕಾಲದಲ್ಲಿ ಮಾನವರು ಅಲಂಕಾರಕ್ಕಾಗಿ ನೆಕ್ಲೇಸ್ಳನ್ನು ಧರಿಸುತ್ತಿದ್ದರು.[1] ಅವರು ಸಾಮಾನ್ಯವಾಗಿ ಧಾರ್ಮಿಕ, ಮಾಂತ್ರಿಕ ಅಥವಾ ವಿಧ್ಯುಕ್ತ ಅಂತ್ಯಕ್ರಿಯೆಯ ಉದ್ದೇಶಗಳಿಗಾಗಿ ಹಾಗೂ ಸಂಪತ್ತು ಮತ್ತು ಸ್ಥಾನಮಾನದ ಸಂಕೇತಗಳಾಗಿ ನೆಕ್ಲೇಸ್ಗಳನ್ನು ಬಳಸುತ್ತಿದ್ದರು, ಅವುಗಳನ್ನು ಸಾಮಾನ್ಯವಾಗಿ ಅಮೂಲ್ಯವಾದ ಲೋಹಗಳು ಮತ್ತು ಕಲ್ಲುಗಳಿಂದ ತಯಾರಿಸಲಾಗುತ್ತದೆ.
ನೆಕ್ಲೇಶ್ ಹಾರದ ಮುಖ್ಯ ಅಂಶವೆಂದರೆ ಕುತ್ತಿಗೆಗೆ ಸುತ್ತಿಕೊಳ್ಳುವ ಬ್ಯಾಂಡ್, ಸರಪಳಿ ಅಥವಾ ಬಳ್ಳಿಯಾಗಿದೆ. ಇವುಗಳನ್ನು ಹೆಚ್ಚಾಗಿ ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂನಂತಹ ಅಮೂಲ್ಯ ಲೋಹಗಳಲ್ಲಿ ತಯಾರಿಸುತ್ತಾರೆ. ನೆಕ್ಲೇಸ್ ಹಾರಗಳಲ್ಲಿ ಹೆಚ್ಚಾಗಿ ಹೆಚ್ಚುವರಿ ವಸ್ತುಗಳು ಸೇರಿರುತ್ತವೆ. ಇವುಗಳಲ್ಲಿ ಸಾಮಾನ್ಯವಾಗಿ ಪೆಂಡೆಂಟ್ಗಳು, ಲಾಕೆಟ್ಗಳು, ತಾಯತಗಳು, ಶಿಲುಬೆಗಳು ಹಾಗೂ ವಜ್ರ, ಮುತ್ತುಗಳು, ಮಾಣಿಕ್ಯಗಳು, ಪಚ್ಚೆಗಳು, ಗಾರ್ನೆಟ್ಗಳು ಮತ್ತು ನೀಲಮಣಿಗಳಂತಹ ಅಮೂಲ್ಯ ಮತ್ತು ಅರೆ-ಅಮೂಲ್ಯ ವಸ್ತುಗಳು ಸೇರಿತುತ್ತವೆ. ಹಲವು ಬಗೆಯ ವಸ್ತುಗಳಿಂದ ತಯಾರಿಸಲಾಗುವ ನೆಕ್ಲೇಸ್ಗಳನ್ನು ಅನೇಕ ವಿಷಯಗಳಿಗೆ ಬಳಸಲಾಗುತ್ತದೆ.