![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/4/4a/Quartz_oisan.jpg/640px-Quartz_oisan.jpg&w=640&q=50)
ದ್ರವ್ಯ
From Wikipedia, the free encyclopedia
ದ್ರವ್ಯ ಯಾವುದರಿಂದ ಭೌತ ಜಗತ್ತು ಹಾಗೂ ವಸ್ತುಗಳು ಆಗಿವೆಯೋ, ಯಾವುದು ಇಂದ್ರಿಯಗ್ರಾಹ್ಯವೋ ಆ ಭೌತವಸ್ತುವನ್ನು ದ್ರವ್ಯ ಎನ್ನುತ್ತಾರೆ. ಇದಕ್ಕೆ ಗುರುತ್ವ ಇದೆ.[1] ದ್ರವ್ಯವು ಅನಿಲ, ಘನ, ದ್ರವ ಮತ್ತು ಪ್ಲಾಸ್ಮಾ ಎಂಬ ನಾಲ್ಕು ಸ್ಥಿತಿಗಳಲ್ಲಿರುತ್ತದೆ.
Quick Facts
![]() ![]() ![]() ![]() | |
ದ್ರವ್ಯಕ್ಕೆ ನಾಲ್ಕ್ಯು ಸ್ಥಿತಿಗಳಿವೆ. ಮೇಲಿನಿಂದ ಕೆಳಕ್ಕೆ : ಸ್ಪಟಿಕ (ಘನ), ನೀರು (ದ್ರವ), ನೈಟ್ರೋಜನ್ ಡೈಆಕ್ಸೈಡ್ (ಅನಿಲ), ಮತ್ತು ಪ್ಲಾಸ್ಮಾ ಗೋಳ (ಪ್ಲಾಸ್ಮಾ) ಗಳ ಚಿತ್ರ |
Close
ಸಕಲ ಜೀವಿಗಳು, ಆಕಾಶ ಕಾಯಗಳು. ಗಾಳಿ ಮಳೆ ಮುಂತಾದ ಭೌತ ಧಾತುಗಳು ಎಲ್ಲವೂ ದ್ರವ್ಯದ ವಿವಿಧ ರೂಪಗಳು. ದ್ರವ್ಯದ ಚರಮಘಟಕಗಳೆಂದರೆ ಮೂರು ಪ್ರಾಥಮಿಕ ಕಣಗಳು: ಎಲೆಕ್ಟ್ರಾನ್ (e-), ಪ್ರೋಟಾನ್ (ಠಿ) ಮತ್ತು ನ್ಯೂಟ್ರಾನ್ (ಟಿ), ನ್ಯೂಟ್ರಾನ್ ಹಾಗೂ ಪ್ರೋಟಾನುಗಳ ವಿಭಿನ್ನ ಸಂಯೋಜನೆಗಳ ಫಲವಾಗಿ ಇಂದು ನಮಗೆ ತಿಳಿದಿರುವ ವಿವಿಧ ಪರಮಾಣ್ವಕ ಬೀಜಗಳು ಲಭ್ಯವಾಗಿವೆ. ಪ್ರತಿಯೊಂದು ಎಲೆಕ್ಟ್ರಾನ್ 1.6(10-19 ಕೂಲಂಬ್ ಧನಾವೇಶಯುತವಾಗಿದೆ. ಇದರ ರಾಶಿ ಪ್ರೋಟಾನಿನ ಸರಿಸುಮಾರು 0.0005 ರಷ್ಟು ಉಂಟು.