![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/6/64/Qatar%252C_Doha%252C_Qatar%252C_Persian_Gulf.jpg/640px-Qatar%252C_Doha%252C_Qatar%252C_Persian_Gulf.jpg&w=640&q=50)
ದೊಹಾ
ಕತಾರ್ನ ರಾಜಧಾನಿ ಮತ್ತು ದೊಡ್ಡ ನಗರ / From Wikipedia, the free encyclopedia
ದೊಹಾ (ಅರೇಬಿಕ್: الدوحة, ad-Dawḥa ಅಥವಾ ad-Dōḥa ,ಅಕ್ಷರಶಃ: "ದೊಡ್ಡ ಮರ") ಇದು ಕತಾರ್ ರಾಜ್ಯದ ರಾಜಧಾನಿ ನಗರ ಎನಿಸಿದೆ.. ಪರ್ಸಿಯನ್ ಕೊಲ್ಲಿಯಲ್ಲಿ ಸ್ಥಿತವಾಗಿರುವ ಈ ಪ್ರದೇಶದಲ್ಲಿ 2008 ರ [1]ಜನಗಣತಿ ಪ್ರಕಾರ 998,651 ಜನಸಂಖ್ಯೆ ಇತ್ತು.ಅದಲ್ಲದೇ ಇದು ಕತಾರ್ ನ ಮುನ್ಸಿಪಾಲ್ಟಿಗಳಲ್ಲೊಂದಾಗಿದೆ. ದೊಹಾ ಕತಾರ್ ನ ಅತ್ಯಂತ ದೊಡ್ಡ ನಗರವಾಗಿದ್ದು ದೇಶದ 80% ರಷ್ಟು ಜನಸಂಖ್ಯೆ ಇದರ ಸುತ್ತಮುತ್ತ ಮತ್ತು ಉಪನಗರಗಳಲ್ಲಿ ವಾಸವಾಗಿದೆ.ಅದಲ್ಲದೇ ಇದೂ ದೇಶದ ಆರ್ಥಿಕ ಕೇಂದ್ರವಾಗಿದೆ.
ದೊಹಾವು ಕತಾರ್ ನ ಸರ್ಕಾರಿ ಆಡಳಿತ ಕೇಂದ್ರಸ್ಥಾನವಾಗಿದ್ದು ಇದು ಶೇಖ್ ಹಮದ್ ಬಿನ್ ಖಲಿಫಾ ಅಲ್ ಥಾನಿ ಅವರ ಆಡಳಿತಕ್ಕೊಳಪಟ್ಟಿದೆ. ದೊಹಾವನ್ನು ಶೈಕ್ಷಣಿಕ ನಗರವೆಂದು ಕರೆಯಲಾಗುತ್ತಿದ್ದು, ಸಂಶೋಧನೆ ಮತ್ತು ಶಿಕ್ಷಣದ ಕ್ಷೇತ್ರಗಳಿಗೆ ತವರು ಮನೆಯಾಗಿದೆ. ವಿಶ್ವ ವ್ಯಾಪಾರ ಸಂಘಟನೆಯ ಸಚಿವರ ಮಟ್ಟದ ನಿಯೋಗದ ಸಭೆಯ ಮಾತುಕತೆಗಳು ಇಲ್ಲಿಯೇ ನಡೆದವು.ಅಲ್ಲದೇ ದೊಹಾ ಡೆವಲ್ಪ್ ಮೆಂಟ್ ರೌಂಡ್ ನಡೆದ ಮೊದಲ ತಾಣ ಇದಾಗಿದೆ. ದೊಹಾ ನಗರದಲ್ಲಿ 2006 ರ ಏಶಿಯನ್ ಗೇಮ್ಸ್ ಗಳು ಆಯೋಜನವಾಗಿದ್ದವು.ಇದು ಆಗ ಆಯೋಜಿತ ಕ್ರೀಡೆಗಳಲ್ಲಿಯೇ ಅತಿ ದೊಡ್ಡ ಏಶಿಯನ್ ಗೇಮ್ಸ್ ಎಂದು ಹೆಸರಾಗಿತ್ತು. ಇದು 2022 FIFA ವರ್ಲ್ಡ್ ಕಪ್ ನ ಕ್ರೀಡೆಗಳಿಗೆ ವಿಶಾಲ ಪ್ರಮಾಣದಲ್ಲಿ ಸ್ಥಳಾವಕಾಶ ಒದಗಿಸಿ ಆತಿಥೇಯವಾಗಿತ್ತು.