ದಿಶಾಧ್ವನಿಕ ಶಬ್ದಚಿತ್ರ
From Wikipedia, the free encyclopedia
ಈ ದಿಶಾಧ್ವನಿಕ ಶಬ್ದಚಿತ್ರಣ ವು ಸಾಮಾನ್ಯವಾಗಿ ಸ್ಟಿರಿಯೊ ಅಥವಾ ಧ್ವನಿಯ ಪುನರುತ್ಥಾನದ ಕ್ರಿಯೆಯೆನಿಸಿದೆ.ಎರಡು ಅಥವಾ ಅದಕ್ಕಿಂತ ಹೆಚ್ಚು ಸ್ವತಂತ್ರ ಆಡಿಯೊ ಚಾನಲ್ ಗಳಿಂದ ಶಬ್ದದ ಪ್ರತಿಧ್ವನಿಗೆ ಪೂರಕವಾಗಲಿದೆ.ಇಲ್ಲಿ ಸುಸಾಂಗತ್ಯ ಸಂಗೀತ ಧ್ವನಿಗಾಗಿ ಧ್ವನಿವರ್ಧಕಗಳನ್ನು (ಲೌಡ್ ಸ್ಪೀಕರ್)ಬಳಸಲಾಗುತ್ತದೆ.ಹೀಗೆ ವಿವಿಧೆಡೆಯಿಂದ ಈ ಸಮ್ಮೀತಿಯ ಶಬ್ದಚಿತ್ರಣವು ಶ್ರವಣಕ್ಕೆ ನೈಸರ್ಗಿಕವಾಗಿ ಬರುವಂತೆ ಮಾಡುವ ವಿಧಾನವೇ ಸ್ಟೀರಿಯೊಫೊನಿಕ್ ಎನ್ನಲಾಗಿದೆ. ಇದಕ್ಕೆ ಹೋಲಿಕೆ ಎನ್ನುವಂತೆ ಇದನ್ನು ಬಹುತೇಕ ಮೊನೊಫೊನಿಕ್ ಅಥವಾ "ಮೊನೊ" ಪೂರಕ ಧ್ವನಿತ್ವದ ಪರಿಣಾಮವಾಗಿದೆ.ಈ ಆಡಿಯೊ ಒಂದು ವಾಹಕ ರೂಪವಾಗಿರುತ್ತದೆ.ಅಂದರೆ ಧ್ವನಿಯ ವಲಯದ (ಈ ಪುರಾತನ ದೃಶ್ಯ ವಲಯದ ವಿಜಿವಲ್ ಫೀಲ್ಡ್ ತೋರಿಸುತ್ತದೆ.)
ಈ ಸ್ಟಿರಿಯೊ ರೆಕಾರ್ಡಿಂಗ್ ನ್ನು ಎಫ್ ಎಂ ಪ್ರಸಾರ ಮತ್ತು ಡಿಜಿಟಲ್ ಆಡಿಯೊ ಪ್ರಸಾರ (DAB)ಗಳಲ್ಲಿಯಲ್ಲದೇ ವಿವಿಧ ಟೆಲೆವಿಜನ್ ವಿಧಾನಗಳಲ್ಲಿ ಉಪಯೋಗಿಸಲಾಗುತ್ತದೆ. ಸ್ಟಿರಿಯೊಗಳಲ್ಲಿ ಧ್ವನಿಮುದ್ರಣದಲ್ಲಿ ಧ್ವನಿ ಎಂಜನೀಯರ್ ಪರಿಣತರು ವಿವಿಧ ವಿಧಾನಗಳನ್ನು ಬಳಸುತ್ತಾರೆ.ಎರಡು ದಿಶೆಗಳಲ್ಲಿ ಮೈಕ್ರೊಫೊನ್ ಗಳನ್ನು ಬಳಸಲಾಗುತ್ತದೆ.ಇದರೊಂದಿಗೆ ಸಮಾನಾಂತರ ಆಡಿಯೊಗಳಲ್ಲಿ ಸರ್ವದಿಕ್ಕುಗಳಲ್ಲಿ ಮೈಕ್ರೊಫೊನ್ ಗಳು ಅಥವಾ ಅತ್ಯಧಿಕ ಸಂಕೀರ್ಣ ತಂತ್ರಜ್ಞಾನವನ್ನು ಇದಕ್ಕೆ ಬಳಸಲಾಗುತ್ತದೆ. ಹಲವು ಮೊನೊಫೊನಿಕ್ ಧ್ವನಿಮುದ್ರಣಗಳಾದ ಮೂಲ ಬ್ರಾಡ್ವೆ ಕಾಸ್ಟ್ ನ ಒಕ್ಲಾಹೊಮಾ !ದ ಧ್ವನಿಮುದ್ರಿಕೆಗಳನ್ನು ಇದೇ ಪದ್ದತಿಯಲ್ಲಿ ಅಳವಡಿಸಲಾಗಿದೆ. ಆಗ (1943) ಕಾರೌಸೆಲ್ (1945) ಅಲ್ಲದೇ ಸೌತ್ ಪ್ಯಾಸಿಫಿಕ್ (1949)ಇವುಗಳನ್ನು ಮತ್ತೆ ಧ್ವನಿಮುದ್ರಣಗಗೊಳಿಸಲಾಗಿರುವಂತೆ "ಮೋಸ"ದ ಧ್ವನಿಮುದ್ರಣವೆನ್ನುವಂತಾಗಿತ್ತು.ಈ ಸ್ಟಿರಿಯೊಗಳನ್ನು ಮೂಲದಲ್ಲಿಂದಲೇ ಸಿದ್ದಪಡಿಸಲಾಗಿದೆ ಎಂಬ ಭಾಸ ಉಂಟಾಗುತಿತ್ತು.
ಮೊದಲ ಸ್ಟಿರಿಯೊ ಧ್ವನಿಗ್ರಹಣವನ್ನು ಟೆಲೆಫೊನಿಕ್ ವಿಧಾನದ ಮೂಲಕ ಕ್ಲೆಮೆಂಟ್ ಅಡೆರ್ ಅವರು 1881 ರಲ್ಲಿ ಇದನ್ನು ಪುನರ್ ಧ್ವನಿಗ್ರಹಣ ಸೃಷ್ಟಿಸಿದ್ದರು. ಈಗ ಈ BBC ಯು ಮೊದಲ ಬಾರಿಗೆ ರೇಡಿಯೊದ ಸ್ಟಿರಿಯೊ ಪ್ರಸಾರವನ್ನು ಡಿಸೆಂಬರ್ 1925 ರಲ್ಲಿ ಮಾಡಿತ್ತು. ನಂತರ 1930 ರಲ್ಲಿ EMI ನ ಅಲನ್ ಬ್ಲುಮ್ಲೆಯಿನ್ ಅವರು ಸ್ಟಿರಿಯೊ ರೆಕಾರ್ಡ್ಸ್,ಸ್ಟಿರಿಯೊ ಫಿಲ್ಮ್ಸ್ ಮತ್ತು ಸುತ್ತಮುತ್ತಲಿನ ಸರ್ವದಿಕ್ಕು ಶಬ್ದಕ್ಕಾಗಿ ಹಕ್ಕುಸ್ವಾಮ್ಯಪಡೆದರು.[1] ಬೆಲ್ ಲ್ಯಾಬ ರೊಟೀರೀಸ್ ನ ಹಾರ್ವೆ ಫ್ಲೆಚರ್ ಅವರು ಸ್ಟಿರಿಯೊಫೊನಿಕ್ ರೆಕಾರ್ಡಿಂಗ್ ಮತ್ತು ಮರುಪ್ರಸಾರದ ತಂತ್ರಜ್ಞಾನ ಬಳಸುವ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಂಡರು. ಮೊದಲ ಬಾರಿಗೆ ಕಮರ್ಸಿಯಲ್ ಮೊಶನ್ ಪಿಕ್ಚರ್ ಅಂದರೆ ವಾಲ್ಟ್ ಡಿಸ್ನಿಯ ಫಾಂಟಾಸಿಯಾ ವನ್ನು (1940)ಸ್ಟಿರಿಯೊಫೊನಿಕ್ ಧ್ವನಿ ಮೇಲೆ ಪ್ರದರ್ಶಿಸಲಾಯಿತು. ಹೀಗೆ 1950-ರ ಮಧ್ಯದ ಅವಧಿಗೆ ವಿವಿಧಚಾನಲ್ ಧ್ವನಿ ಅಳವಡಿಕೆಯು ದೊಡ್ಡ ಮೊತ್ತದ ಚಿತ್ರಗಳಿಗೆ ಹಾಲಿಯುಡ್ ನಲ್ಲಿ ಪ್ರಖ್ಯಾತವಾಯಿತು.[2] ರೆಮಿಂಗ್ಟನ್ ರೆಕಾರ್ಡ್ಸ್ 1953 ರಲ್ಲಿ ಅದರ ಕೆಲವು ಸಂಗೀತ ಚಟುವಟಿಕೆಗಳನ್ನು ಧ್ವನಿಮುದ್ರಿಸಿಕೊಂಡಿತು.ಇದರ ಮೊದಲ ಸ್ಟಿರಿಯೊಫೊನಿಕ್ ಫೊನೊಗ್ರಾಫ್ ಡಿಸ್ಕ್ಸ್ ಗಳನ್ನು ಸಾರ್ವಜನಿಕರಿಗಾಗಿ 1958 ರಲ್ಲಿ ಬಿಡುಗಡೆ ಮಾಡಿತು. U.S.ನ ಫೆಡೆರಲ್ ಕಮ್ಯುನಿಕೇಶನ್ಸ್ ಕಮೀಶನ್ ಸ್ಟಿರಿಯೊಫೊನಿಕ್ ಎಫ್ ಎಂ ಪ್ರಸಾರವನ್ನು ತಂತ್ರಜ್ಞಾನದ ಗುಣಮಟ್ಟದ ಮೇಲೆ 1961 ಏಪ್ರಿಲ್ ನಲ್ಲಿ ಘೋಷಿಸಿತು.ಅದೇ ರೀತಿ ನಿಯಮಿತವಾಗಿ ಸ್ಟಿರಿಯೊಫೊನಿಕ್ ಎಫ್ ಎಂ ರೇಡಿಯೊಗಳಿಗಾಗಿ ಅದೇ ವರ್ಷ ಲೈಸನ್ಸ್ ನೀಡಲು ನಿರ್ಧರಿಸಿತು. ನಂತರ 1984 ರಲ್ಲಿ ವಿವಿಧ ಚಾನಲೆ ಟೆಲಿವಿಜನ್ ಧ್ವನಿಯನ್ನು FCCಅಳವಡಿಸಿಕೊಂಡಿತು.ಯುನೈಟೈಡ್ ಸ್ಟೇಟ್ಸ್ ನ ಗುಣದರ್ಜೆ ಪ್ರಕಾರ ಸ್ಟಿರಿಯೊ ಟೆಲೆವಿಜನ್ ಪ್ರಸಾರ ಕೈಗೊಳ್ಳಲಾಯಿತು.