ದಾವಣಗೆರೆ
ಕರ್ನಾಟಕದ ಒಂದು ಪಟ್ಟಣ / From Wikipedia, the free encyclopedia
ದಾವಣಗೆರೆ - ಕರ್ನಾಟಕ ರಾಜ್ಯದ ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ. ಇದು ರಾಜ್ಯದ ಏಳನೇ ದೊಡ್ಡ ನಗರವಾಗಿದೆ.[1] ದಾವಣಗೆರೆ ಜವಳಿ ಉದ್ಯಮಕ್ಕೆ ಜನಪ್ರಿಯ. ಇಲ್ಲಿನ ದಾವಣಗೆರೆ ಕಾಟನ್ ಮಿಲ್ಸ್ ಬಹಳ ಜನಪ್ರಿಯವಾಗಿದ್ದ ಹೆಸರು. ಅಲ್ಲದೆ, ಬೆಣ್ಣೆದೋಸೆಗೆ ದಾವಣಗೆರೆ ಪ್ರಸಿದ್ಧವಾಗಿದೆ.[2][3]
Quick Facts ದಾವಣಗೆರೆ, ದೇಶ ...
ದಾವಣಗೆರೆ | |
---|---|
ಕಾರ್ಪೊರೇಷನ್ ಸಿಟಿ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ದಾವಣಗೆರೆ ಜಿಲ್ಲೆ |
ಸರ್ಕಾರ | |
• ಮಾದರಿ | ನಗರ ಪೌರಸಂಸ್ಥೆ |
• ಪಾಲಿಕೆ | ದಾವಣಗೆರೆ ಮಹಾನಗರ ಪಾಲಿಕೆ |
• ಮೇಯರ್ | ಎಸ್. ಟಿ. ವೀರೇಶ್ |
• MLA (North Davangere) | ಎಸ್ ಎ ರವೀಂದ್ರನಾಥ್ |
• MLA (South Davangere) | ಶಾಮನೂರು ಶಿವಶಂಕರಪ್ಪ |
• District Collector | ಮಹಾಂತೇಶ ಬೀಳಗಿ.ಭಾ.ಆ.ಸೇ |
Area | |
• Total | ೭೭ km೨ (೩೦ sq mi) |
Population (2011-12) | |
• Total | ೪,೩೫,೧೨೮ |
• ಶ್ರೇಣಿ | 6th(Karnataka) |
• ಸಾಂದ್ರತೆ | ೫,೭೦೦/km೨ (೧೫,೦೦೦/sq mi) |
ಭಾಷೆ | |
• ಅಧಿಕೃತ | ಕನ್ನಡ |
ಸಮಯ ವಲಯ | ಯುಟಿಸಿ+5:30 (IST) |
ಪಿನ್ ಕೋಡ್ | 577001-577006 |
Telephone code | 91 8192 |
ವಾಹನ ನೋಂದಣಿ | KA-17 |
ಮಾತನಾಡುವ ಭಾಷೆಗಳು | ಕನ್ನಡ |
ಜಾಲತಾಣ | www |
Close
ದಾವಣಗೆರೆಯು ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಸ್ಥಳವಾಗಿದ್ದು, ಇಲ್ಲಿ ಹತ್ತಿ, ಮೆಕ್ಕೆಜೋಳ, ಕಡಲೆ, ಸೂರ್ಯಕಾಂತಿ, ಜೋಳ, ಭತ್ತ ಮತ್ತು ಇತರ ಪ್ರಮುಖ ವಾಣಿಜ್ಯ ಬೆಳೆಗಳನ್ನು ಕರ್ನಾಟಕದ ಇತರ ಜಿಲ್ಲೆಗಳಿಂದ ತಂದು ಮಾರುತ್ತಾರೆ.
ದಾವಣಗೆರೆ ಇತ್ತೀಚೆಗೆ ರಾಜ್ಯದ ಪ್ರಮುಖ ವಿದ್ಯಾಕೇಂದ್ರವಾಗಿ ಬೆಳೆದಿದ್ದು, ಇಲ್ಲಿ ಚಿತ್ರಕಲೆ, ವಸ್ತ್ರ ವಿನ್ಯಾಸ ಶಾಸ್ತ್ರ, ಎಂಜಿನಿಯರಿಂಗ್ (ಅಭಿಯಂತರ ಶಾಸ್ತ್ರ), ವೈದ್ಯಕೀಯ, ಕಲೆ, ವಾಣಿಜ್ಯ ಹಾಗು ಇತರ ವಿದ್ಯಾ ವಿಭಾಗಗಳನ್ನು ಹೊಂದಿರುವ ಮಹಾವಿದ್ಯಾಲಯಗಳಿವೆ.