ಡಾರ್ಟರ್ (ನೀರು ಕಾಗೆ)
From Wikipedia, the free encyclopedia
ಡಾರ್ಟರ್ ಅಥವಾ ಸ್ನೇಕ್ ಬರ್ಡ್ (snakebirds) ಗಳು ಮುಖ್ಯವಾಗಿ ಆನ್ಹಿಂಜಿಡೆ ಜಾತಿಗೆ ಸೇರಿದ ಉಷ್ಣವಲಯಕ್ಕೆ ವಿಶಿಷ್ಟವಾದ ನೀರುಹಕ್ಕಿಗಳಾಗಿವೆ. ಇವುಗಳಲ್ಲಿ 4 ಜಾತಿಯ ಪಕ್ಷಿಗಳನ್ನಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಮೂರು ಸರ್ವೇ ಸಾಮಾನ್ಯವಾಗಿ ಮತ್ತು ಎಲ್ಲೆಡೆ ಕಾಣಸಿಗುತ್ತದೆ. ಆದರೆ ನಾಲ್ಕನೆಯದು ಅತಿ ವಿರಳವಾಗಿದೆ ಎಂದು ಐಯುಸಿಎನ್ ವರ್ಗೀಕರಿಸಿ ಎಚ್ಚರಿಕೆ ನೀಡಿದೆ. ‘ಸ್ನೇಕ್ ಬರ್ಡ್’ (snakebird) ಎಂಬ ಪದವನ್ನು ಯಾವುದೇ ಪ್ರದೇಶದ ನಿರ್ದಿಷ್ಟ ಹಕ್ಕಿಗೆ ಸೂಚಿಸದೇ ಈ ಜಾತಿಗೆ ಸೇರುವ ವಿವಿಧ ಪಕ್ಷಿಗಳಿಗೆ ಸಾಮಾನ್ಯವಾಗಿ ಈ ಹೆಸರಿನಿಂದ ಕರೆಯಲಾಗುತ್ತದೆ. ಈ ರೀತಿಯ ಪಕ್ಷಿಗಳಿಗೆ ತೆಳುವಾದ ಉದ್ದನೆಯ ಕುತ್ತಿಗೆ ಇದ್ದು, ಈ ಕುತ್ತಿಗೆಯು ಹಾವಿನ ರೀತಿಯಲ್ಲಿ ಕಾಣುತ್ತವೆ. ಇವು ನೀರಿನಲ್ಲಿ ಈಜುವಾಗ ಇವುಗಳ ದೇಹವು ನೀರಿನಲ್ಲಿ ಮುಳುಗಿದ್ದು , ಕುತ್ತಿಗೆ ಮಾತ್ರ ಕಾಣುತ್ತಿರುತ್ತವೆ. ಇದು ಹಾವಿನ ರೀತಿ ಗೋಚರಿಸುತ್ತದೆ. ಅಥವಾ ಇವು ಜೋಡಿಯಾಗಿ ನೀರಿನಲ್ಲಿ ಹೋಗುತ್ತಿರುವಾಗ ತಿರುಗಿದಲ್ಲಿ ಅವುಗಳು ಬಂಧಿಯಾದಂತೆ ಕಾಣುತ್ತವೆ. ಡಾರ್ಟರ್ ಎಂಬ ಪದವನ್ನು ಭೌಗೋಳಿಕ ಹೆಸರಿನಲ್ಲಿ ನಿರ್ದಿಷ್ಟ ಜಾತಿಯ ಪಕ್ಷಿಗೆ ಕರೆಯಲಾಗುತ್ತದೆ. ಇದು ಈ ಪಕ್ಷಿಯ ಆಹಾರ ಸಂಗ್ರಹಣೆಯ ವಿಧಾನದ ಮೂಲಕ ಸೂಚಿಸಿದಂತಾಗುತ್ತದೆ. ಮೀನುಗಳನ್ನು ತನ್ನ ಚಿಕ್ಕ ಹಾಗೂ ಚೂಪನೆಯ ಕೊಕ್ಕಿನಿಂದ ಹೆಕ್ಕಿ ತಿನ್ನುತ್ತವೆ. ಅಮೆರಿಕಾದ ಡಾರ್ಟರ್ (ಎ.ಆನ್ಹಿಂಗಾ) ಅನ್ನು ಆನ್ಹಿಂಗಾ ಎಂದು ಗುರುತಿಸಲಾಗುತ್ತದೆ. ಇದನ್ನು ನೀರು ಕೋಳಿ ("water turkey") ಎಂದು ಉತ್ತರ ಸಂಯುಕ್ತ ರಾಷ್ಟ್ರಗಳಲ್ಲಿ ಕರೆಯಲಾಗುತ್ತದೆ. ಇದಕ್ಕೆ ಗೋಚರಿಸುವ ಕಾರಣವೆಂದರೆ, ಅಮೆರಿಕಾ ಡಾರ್ಟರ್ ವು ಸ್ವಲ್ಪಮಟ್ಟಿಗೆ ಕಾಡು ಕೋಳಿಗೆ ಹೋಲಿಕೆಯಾಗುವುದಿಲ್ಲ. ಅವುಗಳು ಭಾರಿ ದೊಡ್ಡ, ಉದ್ದ ಬಾಲವನ್ನು ಹೊಂದಿದ ಕಪ್ಪು ಹಕ್ಕಿಗಳಾಗಿದ್ದು, ಕೆಲವೊಮ್ಮೆ ಆಹಾರಕ್ಕಾಗಿ ಭೇಟೆಯಾಡುತ್ತವೆ.[2]
Darters Temporal range: Early Miocene – Recent 18–0 Ma PreꞒ
Ꞓ
O
S
D
C
P
T
J
K
Pg
N
| |
---|---|
Male African Darter Anhinga (melanogaster) rufa | |
Scientific classification | |
ಸಾಮ್ರಾಜ್ಯ: | Animalia |
ವಿಭಾಗ: | Chordata |
ವರ್ಗ: | Aves |
Subclass: | Neornithes |
ಕೆಳವರ್ಗ: | Neognathae |
ಮೇಲ್ಗಣ: | Neoaves |
ಗಣ: | (see text) |
ಉಪಗಣ: | Sulae |
ಮೇಲ್ಕುಟುಂಬ: | Phalacrocoracoidea |
ಕುಟುಂಬ: | Anhingidae Reichenbach, 1849[1] |
ಕುಲ: | Anhinga Brisson, 1760 |
Type species | |
Plotus anhinga Linnaeus, 1766 | |
Species | |
Anhinga anhinga | |
Synonyms | |
Family-level: Genus-level: |
ಅನ್ಹಿಂಗಾ ಇದು Tupi ajíŋa ಎಂಬ ಪದದಿಂದ ಹುಟ್ಟಿಕೊಂಡಿದೆ (ಇದನ್ನು ಅವಿಂಗಾ ಅಥವಾ áyinga or ayingá ) ಎಂದೂ ಕರೆಯುತ್ತಾರೆ). ಸ್ಥಳೀಯ ಪುರಾಣ ಕಥೆ ಪ್ರಕಾರ ಕೆಟ್ಟದ್ದನ್ನು ಮಾಡುವ ಅತಿಮಾನುಷ ಶಕ್ತಿಯುಳ್ಳ ಕಾಡಿನ ಪಕ್ಷಿಯಾಗಿದೆ. ಇದನ್ನು ‘ದೆವ್ವದ ಹಕ್ಕಿ’ ಎಂದೂ ಭಾಷಾಂತರ ಮಾಡಲಾಗಿದೆ. ಇದರ ಹೆಸರನ್ನು anhingá or ಅನ್ಹಿಂಗಾ ಅನ್ಹಿಂಗಾ ಅತವಾ ಅನ್ಹಂಗಾ ಎಂದು ಬದಲಾಯಿಸಲಾಗಿದೆ. ಮತ್ತು ಇದನ್ನು ಟುಪಿ ಪೋರ್ಚುಗೀಸ್ನಲ್ಲಿ Língua Geral ಎಂದು ಕರೆಯಲಾಗುತ್ತದೆ. ಆದಾಗ್ಯೂ ಮೊದಲು ಇದರ ಹೆಸರನ್ನು 1818ರಲ್ಲಿ ಇಂಗ್ಲಿಷ್ನಲ್ಲಿ ದಾಖಲಿಸಲಾಗಿದೆ. ಇದನ್ನು ಹಳೆಯ ವಿಶ್ವದ ಡಾರ್ಟರ್ ಎಂದು ಗುರುತಿಸಲಾಗುತ್ತದೆ. ಈಗ ಇದನ್ನು ಆಧುನಿಕವಾಗಿ ಅನ್ಹಿಂಗಾ ಎಂದು ಎಲ್ಲೆಡೆ ಬಳಸಲಾಗುತ್ತಿದೆ.[3]