ತೋಕ್ಯೋ (東京), ಅಧಿಕೃತವಾಗಿ ತೋಕ್ಯೋ ಮಹಾನಗರ(東京都, とうきょうと, ತೋಕ್ಯೋತೊ),[1] ಜಪಾನ್ ದೇಶದ ರಾಜಧಾನಿ ಮತ್ತು ಜಪಾನಿನ ೪೭ ರಾಜ್ಯ (都道府県, ತೊದೋಫುಕೆನ್) ಗಳಲ್ಲಿ ಅತೀದೊಡ್ಡದಾದದ್ದು. ಜಪಾನಿನ ಮುಖ್ಯ ದ್ವೀಪವಾಗಿರವ ಹೋಂಶು (本州) ವಿನ ಪೂರ್ವಭಗದಲ್ಲಿರುವ ಕಾನ್ತೋ(関東) ಉಪರಾಜ್ಯ(地方, ಚಿಹೋ)ದಲ್ಲಿ ಟೋಕ್ಯೊ ಸ್ಥಿತವಾಗಿದೆ. ಟೋಕ್ಯೊ ನಗರದ ೨೩ ವಿಶೇಷ ವಾರ್ಡ್ ಗಳಲ್ಲಿ ೧೪ ದಶಲಕ್ಷಕಿಂತಲೂ ಹೆಚ್ಚು ಜನರು ವಾಸವಾಗಿದ್ದು, ನಗರದ ಹೊರಭಾಗಗಳನ್ನು ಸೇರಿಸಿ ಒಟ್ಟು ೩೮ ದಶಲಕ್ಷಕಿಂತಲೂ ಹೆಚ್ಚು ಜನರು ತೋಕ್ಯೋ ರಾಜ್ಯದಲ್ಲಿ ವಾಸವಾಗಿದ್ದಾರೆ.

Quick Facts
ತೋಕ್ಯೋ Prefecture
ಜಪಾನಿ ಭಾಷೆ : 東京都
ತೋಕ್ಯೋ-ತೋ
ಜಪಾನ್ ದೇಶದ ಭೂಪಟದಲ್ಲಿ ತೋಕ್ಯೋ ಎತ್ತಿತೋರಿಸಲಾಗಿದೆ
ರಾಜಧಾನಿ -
ಪ್ರದೇಶ ಕಾಂತೋ
ದ್ವೀಪ ಹೊಂಶು
ರಾಜ್ಯಪಾಲ ಶಿನ್ತಾರೋ ಇಶಿಹಾರ
ವಿಸ್ತೀರ್ಣ 2,187.08 (621.81) km² (೪೫ನೆಯ)
 - % ನೀರು 1.0%
ಜನಸಂಖ್ಯೆ  (ಅಕ್ಟೋಬರ್ ೧, ೨೦೦೭)
 - ಒಟ್ಟು 12,790,000 (ವಿಶೇಷ ವಾರ್ಡ್ ಗಳಲ್ಲಿ 8,652,700 ) (1ನೆಯ)
 - ಸಾಂದ್ರತೆ 5796 (13,890.25) /km²
ಅಂತರಜಾಲ ತಾಣ metro.tokyo.jp
ರಾಜ್ಯದ ಚಿನ್ಹೆಗಳು
 - ಹೂವು ಸಕುರಾ
 - ಮರ ಗಿಂಕ್ಗೊ ಬಿಲೊಬ
 - ಪಕ್ಷಿ ಕಪ್ಪು ತಲೆಯ ಗಲ್ಲ್ (Larus ridibundus)
ತೋಕ್ಯೋ ಮಹಾನಗರದ ಚಿನ್ಹೆ
ತೋಕ್ಯೋ ಮಹಾನಗರದ ಅಧಿಕೃತ ಚಿನ್ಹೆ.
Close

ಹೆಸರು

ತೋಕ್ಯೋವು ಮೆಯ್ಜಿ (明治) ಪುನಃಸ್ಥಾಪನೆಯ ಮೊದಲು ಎದೊ (江戸) ಎಂದು ಹೆಸರಾಗಿತ್ತು. ಎದೊ(江戸) ಎಂಬ ಪದವು 江(ಎ, ಖಾರಿ) ಮತ್ತು 戸(ತೊ, ಬಾಗಿಲು) ಕಾನ್ಜಿಗಳ ಸಂಧಿಯಿಂದ ಬಂದಿರುವುದಾಗಿದ್ದು ಇದರ ಅರ್ಥವು ತೋಕ್ಯೋ ಖಾರಿಯಲ್ಲಿ ಪೆಸಿಫಿಕ್ ಮಹಾಸಾಗರಕ್ಕೆ ಸೇರುವ ಸುಮಿದ ನದೀಯ (隅田川, ಸುಮಿದ ಕವ) ನದೀಮುಖವನ್ನು ಸೂಚಿಸುತ್ತದೆ.[2] ವರ್ಷ ೧೮೬೮ ರ ಮೆಯ್ಜಿ ಪುನಃಸ್ಥಾಪನೆಯಾದ ಮೇಲೆ ನಿಹೋನಿನ ರಾಜಮನೆತನವು ಕ್ಯೋತೊವನ್ನು ಬಿಟ್ಟು ಅಂದಿನ ತೋಕುಗಾವ-ರಾಜಧಾನಿಯಾಗಿದ್ದ ಎದೊವಿನಲ್ಲಿ ನೆಲೆಯನ್ನು ಹೂಡಿದರು; ಇದರ ನಂತರ ಎದೊವಿನ ಹೆಸರನ್ನು ತೋಕ್ಯೋವಿಗೆ (東京, 東 "ತೋ" ಪೂರ್ವ, 京 "ಕ್ಯೋ" ರಾಜಧಾನಿ) ಬದಲಾಯಿಸಲಾಯಿತು.[2] ಮೆಯ್ಜಿ ಕಾಲದ ಹೊಸತರಲ್ಲಿ '東京' ಪದದ ಉಚ್ಛಾರಣೆಯನ್ನು 'ತೋಕೆಯಿ' ಎಂದು ಕೂಡ ಮಾಡಲಾಗುತ್ತಿತ್ತು; ಆ ಕಾಲದ ಹಲವು ಆಂಗ್ಲ ದಾಖಲೆಗಳಲಿ 'Tokei' ಎಂಬ ಬಳಿಕೆಯೂ ಇತ್ತು; ಆದರೆ ಈ ಉಚ್ಛಾರಣೆಯು ಇಂದು ಬಳಿಕೆಯಲ್ಲಿಲ್ಲ.[3]

ಭೂಗೋಳ ಮತ್ತು ಆಡಳಿತ ವಿಭಾಗಗಳು

ತೋಕ್ಯೋವಿನ ೨೩ ವಿಶೇಷ ವಾರ್ಡ್‍ಗಳು ಇಂತಿವೆ:

  • ಅದಾಚಿ
  • ಅರಕಾವ
  • ಬುಂಕ್ಯೊ
  • ಚಿಯೊದಾ
  • ಚುವೊ
  • ಇದೋಗಾವ
  • ಇತಾಬಾಶಿ
  • ಕಾತ್ಸುಶಿಕ
  • ಕಿತ
  • ಕೋತೋ
  • ಮೆಗುರೊ
  • ಮಿನಾತೊ
  • ನಕಾನೊ
  • ನೆರಿಮಾ
  • ಓತಾ
  • ಸೆತಗಾಯ
  • ಶಿಬುಯಾ
  • ಶಿನಗಾವ
  • ಶಿನ್ಜುಕು
  • ಸುಗಿನಾಮಿ
  • ಸುಮಿದಾ
  • ತಾಯಿತೋ
  • ತೊಶಿಮ

ನಗರಗಳು

ತೋಕ್ಯೋವಿನಲ್ಲಿ ಇರುವ ೨೬ ನಗರಗಳು:

  • ಅಕಿರುನೋ
  • ಅಕಿಶಿಮ
  • ಚೋಫು
  • ಫುಚೂ
  • ಫುಸ್ಸ
  • ಹಚಿಯೋಜಿ
  • ಹಮುರ
  • ಹಿಗಾಶಿಕುರುಮೆ
  • ಹಿಗಾಶಿಮುರಯಾಮ]
  • ಹಿಗಾಶಿಯಮಾತೊ
  • ಹಿನೊ
  • ಇನಾಗಿ
  • ಕಿಯೋಸೆ
  • ಕೊದಾಯಿರ
  • ಕೊಗನೇಯಿ
  • ಕೊಕೊಬುನ್ಜಿ
  • ಕೊಮಾಯೆ
  • ಕುನಿತಾಚಿ
  • ಮಾಚಿದ
  • ಮಿತಾಕ
  • ಮುಸಾಶಿಮುರಯಾಮ
  • ಮುಸಾಶಿನೋ
  • ನಿಶಿತೋಕ್ಯೊ
  • ಓಮೆ
  • ತಚಿಕಾವ
  • ತಾಮಾ

ನಗರನೋಟ

Thumb
ತೋಕ್ಯೋ ನಗರ ಮತ್ತು ಮೌಂಟ್ ಫುಜಿ ಪಕ್ಷಿ ನೋಟ.
Thumb
ಮಾರುನೋಚಿಯಿಂದ ಕಾಣುವ ತೋಕ್ಯೋ ಇಂಪೀರಿಯಲ್ ಅರಮನೆಯ ಪಕ್ಷಿ ನೋಟ.
Thumb
ತೋಕ್ಯೋ ಇಂಪೀರಿಯಲ್ ಅರಮನೆಯಲ್ಲಿ ಸಕುರಾ.

ಸಹೋದರಿ ನಗರಗಳು

ಟೋಕ್ಯೊ ಮಹಾನಗರವು ೧೧ ಸಹೋದರಿ ನಗರಗಳನ್ನು ಹೊಂದಿದೆ.[4]

ಉಲ್ಲೇಖಗಳು

ಹೊರಗಿನ ಸಂಪರ್ಕಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.