ಜೀವಸತ್ವಗಳು
From Wikipedia, the free encyclopedia
ಜೀವಸತ್ವವೆಂದರೆ (ವಿಟಮಿನ್) ಯಾವುದೇ ಜೀವಿಗೆ ಕೂಡಾ ಪೋಷಕಾಂಶದ ರೂಪದಲ್ಲಿ ಅಲ್ಪ ಪ್ರಮಾಣದಲ್ಲಿ ಅಗತ್ಯವಾಗಿರುವ ಸಾವಯವ ಸಂಯೋಗ.[1] ಆಂಗ್ಲ ಪದ 'ವಿಟಮಿನ್' (vitamin) ಎಂಬುದು ಮೊದಲಿಗೆ 1800ನೇ ಶತಮಾನದ ಮೊದಲ ಭಾಗದಲ್ಲಿ 'vital' ಹಾಗೂ 'mineral' ಎಂಬೆರಡು ಪದಗಳ ಮಿಶ್ರಪದವಾಗಿ ಜನಪ್ರಿಯವಾಗಿತ್ತಾದರೂ, ಪದದ ನಿಜವಾದ ಅರ್ಥವು ಆ ಸಮಯದಿಂದೀಚೆಗೆ ಸಾಕಷ್ಟು ಬದಲಾಗಿದೆ[2]. ಯಾವುದೇ ಜೀವಿಯು ಸಂಯೋಗವೊಂದನ್ನು ಸಾಕಷ್ಟು ಪ್ರಮಾಣದಲ್ಲಿ ಸಂಯೋಜಿಸಲು ಸಾಧ್ಯವಾಗದೇ ಆಹಾರದ ಮೂಲಕವೇ ಪಡೆದುಕೊಳ್ಳಬೇಕಾಗಿದ್ದರೆ ಅದನ್ನು ಜೀವಸತ್ವ ಎಂದು ಕರೆಯಲಾಗುತ್ತದೆ. ಹಾಗಾಗಿ ಪದವು ಸಂದರ್ಭಗಳು ಹಾಗೂ ನಿರ್ದಿಷ್ಟ ಜೀವಿಯ ಮೇಲೆ ಆಧಾರಿತವಾಗಿರುತ್ತದೆ. ಉದಾಹರಣೆಗೆ, ಆಸ್ಕಾರ್ಬಿಕ್ ಆಮ್ಲವು ಕೆಲ ಪ್ರಾಣಿಗಳಿಗೆ ಮಾತ್ರವೇ ಜೀವಸತ್ವ Cಯಾಗಿ ಪರಿಣಮಿಸುತ್ತದೆ, ಹಾಗೂ K, ಬಯೊಟಿನ್ ಮತ್ತು D ಜೀವಸತ್ವಗಳು ಮಾನವರ ಆಹಾರದಲ್ಲಿ ಕೆಲ ಸಂದರ್ಭಗಳಲ್ಲಿ ಮಾತ್ರವೇ ಅಗತ್ಯವಾಗಿರುತ್ತವೆ.[3] ಜೀವಸತ್ವ ಪದವನ್ನು ಆಹಾರದಲ್ಲಿ ಬಳಸುವ ಖನಿಜಾಂಶಗಳು, ಅತ್ಯಗತ್ಯವಾದ ಕೊಬ್ಬಿನ ಅಂಶದ ಆಮ್ಲಗಳು, ಅಥವಾ ಅಗತ್ಯವಾದ ಅಮೈನೋ ಆಮ್ಲಗಳಂತಹಾ ಇತರೆ ಅತ್ಯಗತ್ಯ ಪೋಷಕಾಂಶಗಳಿಗೆ ಅನ್ವಯಿಸುವುದಿಲ್ಲ, ಹಾಗೂ ಆರೋಗ್ಯವನ್ನು ಉತ್ತಮಗೊಳಿಸುವುದಕ್ಕೆ ಸಹಾಯ ಮಾಡುವುದಾದರೂ ಹೆಚ್ಚೇನೂ ಅಗತ್ಯವಿಲ್ಲದ ಇತರೆ ಅನೇಕ ಪೋಷಕಾಂಶಗಳನ್ನು ಕೂಡಾ ಹಾಗೆಂದು ಕರೆಯಲಾಗುವುದಿಲ್ಲ.[4]
ಜೀವಸತ್ವಗಳನ್ನು ಅವುಗಳ ಜೈವಿಕ ಹಾಗೂ ರಾಸಾಯನಿಕ ಚಟುವಟಿಕೆಗಳ ಮೇಲೆ ವರ್ಗೀಕರಿಸಲಾಗುತ್ತದೆಯೇ ಹೊರತು ಅವುಗಳ ರಚನೆಯ ಮೇಲಲ್ಲ. ಆದ್ದರಿಂದ, ಯಾವುದೇ "ಜೀವಸತ್ವ"ವು ನಿರ್ದಿಷ್ಟ ಜೀವಸತ್ವಕ್ಕೆ ಸಂಬಂಧಿಸಿದಂತೆ ಜೈವಿಕ ಚಟುವಟಿಕೆಗಳನ್ನು ತೋರಿಸುವ ಅನೇಕ ವಿಟಾಮೆರ್ ಸಂಯೋಗಗಳಿಂದ ಉಂಟಾಗಿರಬಹುದು. ಅಂತಹಾ ರಾಸಾಯನಿಕಗಳನ್ನು ಅಕಾರಾದಿಯಾಗಿ ಜೀವಸತ್ವದ "ಸಾಮಾನ್ಯ ವಿವರಕ" ಶೀರ್ಷಿಕೆಗಳಡಿಯಲ್ಲಿ ವರ್ಗೀಕರಿಸಲಾಗಿದೆ ಉದಾಹರಣೆಗೆ ರೆಟಿನಲ್, ರೆಟಿನಾಲ್, ಮತ್ತು ನಾಲ್ಕು ಪರಿಚಿತ ಕಾರೊಟೆನಾಯ್ಡ್ಗಳಂತಹಾ ಸಂಯೋಗಗಳನ್ನು ಒಳಗೊಂಡಿರುವ "ಜೀವಸತ್ವ A".[5] ವಿಟಮೆರ್ಗಳನ್ನು ಸಾಧಾರಣವಾಗಿ ದೇಹದಲ್ಲಿರುವ ಚಟುವಟಿಕೆಯಿಂದಿರುವ ಜೀವಸತ್ವದ ರೂಪಕ್ಕೆ ಪರಿವರ್ತಿಸಬಹುದು ಅಲ್ಲದೇ ಕೆಲವೊಮ್ಮೆ ಪರಸ್ಪರ ಪರಿವರ್ತನೆ ಕೂಡಾ ಸಾಧ್ಯವಾಗುತ್ತದೆ.
ಜೀವಸತ್ವಗಳು ವೈವಿಧ್ಯಮಯ ಜೀವರಾಸಾಯನಿಕ ಕಾರ್ಯಗಳನ್ನು ಹೊಂದಿವೆ. ಕೆಲವು ಹಾರ್ಮೋನ್ಗಳಂತೆ ಖನಿಜ ಚಯಾಪಚಯದ ನಿಯಂತ್ರಕದಂತೆ (e.g. ಜೀವಸತ್ವ D), ಅಥವಾ ಕೋಶ ಹಾಗೂ ಅಂಗಾಂಶಗಳ ಬೆಳವಣಿಗೆ ಮತ್ತು ಪ್ರಭೇದಕರಣದ ನಿಯಂತ್ರಕದಂತೆ (e.g. ಜೀವಸತ್ವ Aದ ಕೆಲವು ರೂಪಗಳು) ಕಾರ್ಯನಿರ್ವಹಿಸುವುದು. ಇತರೆ ರಾಸಾಯನಿಕಗಳು ಆಕ್ಸಿಡೀಕಾರಕವಿರೋಧಿಯಾಗಿ (e.g. ಜೀವಸತ್ವ E ಹಾಗೂ ಕೆಲವೊಮ್ಮೆ ಜೀವಸತ್ವ C) ಕಾರ್ಯನಿರ್ವಹಿಸುತ್ತವೆ.[6] ಹೆಚ್ಚಿನ ಸಂಖ್ಯೆಯ ಜೀವಸತ್ವಗಳು (e.g. B ಸಂಕೀರ್ಣ ಜೀವಸತ್ವಗಳು ) ಕಿಣ್ವ ಸಹವರ್ತಿ ಜೈವಿಕ-ಅಣುಗಳ (ಸಹಕಿಣ್ವಗಳು) ಪೂರ್ವಗಾಮಿಯಾಗಿ ಕಾರ್ಯನಿರ್ವಹಿಸಿ, ಚಯಾಪಚಯದಲ್ಲಿ ವೇಗವರ್ಧಕಗಳಾಗಿ ಹಾಗೂ ತಲಾಧಾರಗಳಾಗಿ ವರ್ತಿಸಲು ಸಹಾಯಕವಾಗಿರುತ್ತವೆ. ವೇಗವರ್ಧಕದ ಭಾಗವಾಗಿ ವರ್ತಿಸುವಾಗ, ಜೀವಸತ್ವಗಳು ಕಿಣ್ವಗಳು ಪೂರಕ ವರ್ಗಗಳ ಭಾಗವಾಗಿ ಬಿಗಿಯಾಗಿ ಬಂಧಿಸಲ್ಪಟ್ಟಿರಬಹುದಾಗಿದೆ: ಉದಾಹರಣೆಗೆ, ಕೊಬ್ಬಿನಾಂಶದ ಆಮ್ಲಗಳನ್ನು ತಯಾರಿಸುವಲ್ಲಿ ಬಳಸಲಾಗುವ ಕಿಣ್ವಗಳು ಬರೋಟಿನ್ ಹೊಂದಿರುತ್ತವೆ. ಜೀವಸತ್ವಗಳು ಕಿಣ್ವ ವೇಗವರ್ಧಕಗಳಾದ ಸಹಕಿಣ್ವಗಳಿಗೆ ಕೇವಲ ಅಲ್ಪಬಿಗಿತದಲ್ಲಿ ಬಂಧಿಸಲ್ಪಟ್ಟಿರಬಹುದಾಗಿರುತ್ತದೆ, ಇವುಗಳ ಬೇರ್ಪಟ್ಟ ಅಣುಗಳು ರಾಸಾಯನಿಕ ವರ್ಗಗಳನ್ನು ಅಥವಾ ಎಲೆಕ್ಟ್ರಾನ್ಗಳನ್ನು ಅಣುಗಳ ನಡುವೆ ಸಾಗಿಸುವ ಕಾರ್ಯವನ್ನು ಮಾಡುತ್ತವೆ. ಉದಾಹರಣೆಗೆ, ಫಾಲಿಕ್ ಆಮ್ಲವು ಇಂಗಾಲ ವರ್ಗದ ಅನೇಕ ರೂಪಗಳನ್ನು – ಮೀಥೈಲ್, ಫಾರ್ಮೈಲ್ ಮತ್ತು ಮಿಥೈಲೀನ್ಗಳನ್ನು - ಕೋಶಗಳಲ್ಲಿ ಸಾಗಿಸುತ್ತದೆ. ಕಿಣ್ವ ಪ್ರತಿಕ್ರಿಯೆಗಳಿಗೆ ಸಹವರ್ತಿಯಾಗಿರುವುದು ಜೀವಸತ್ವಗಳ' ಹೆಚ್ಚು ಪರಿಚಿತ ಕಾರ್ಯವಾಗಿದ್ದರೂ ಇತರೆ ಜೀವಸತ್ವ ಕಾರ್ಯಗಳೂ ಸಹಾ ಅಷ್ಟೇ ಪ್ರಮುಖವಾಗಿವೆ.[7]
1900ನೇ ಶತಮಾನದವರೆಗೂ, ಜೀವಸತ್ವಗಳನ್ನು ಕೇವಲ ಆಹಾರದ ಮೂಲಕ ಮಾತ್ರವೇ ಪಡೆಯಲಾಗುತ್ತಿದ್ದು, ಆಹಾರ ಶೈಲಿಯ ಬದಲಾವಣೆಯು(ಉದಾಹರಣೆಗೆ, ನಿರ್ದಿಷ್ಟ ಬೆಳೆಗಳ ಋತುವಿನ ಸಮಯದಲ್ಲಿ ಆಗಬಹುದಾದಂತಹವು) ಸೇವಿಸಿದ ಜೀವಸತ್ವಗಳ ವೈವಿಧ್ಯ ಹಾಗೂ ಪ್ರಮಾಣವನ್ನು ಬದಲಿಸುವ ಸಾಧ್ಯತೆ ಹೊಂದಿದ್ದವು. ಜೀವಸತ್ವಗಳನ್ನು ರಾಸಾಯನಿಕ ಉತ್ಪನ್ನಗಳಾಗಿ ಉತ್ಪಾದಿಸಿದ ಅಲ್ಪದರದ ಗುಳಿಗೆಗಳ ರೂಪದಲ್ಲಿ ಅನೇಕ ದಶಕಗಳಿಂದ ಲಭ್ಯವಿದ್ದು,[8] ಆಹಾರದಲ್ಲಿನ ಸೇವನೆಯ ಕೊರತೆಗಳನ್ನು ನೀಗಿಸುವ ಮಾರ್ಗವಾಗಿ ಉಪಯುಕ್ತವಾಗಿವೆ.