ಚೇಳು, ವೃಶ್ಚಿಕ
From Wikipedia, the free encyclopedia
ಚೇಳು ಗಳು ಪರಭಕ್ಷಕ ಜಾತಿಗೆ ಸೇರಿದ ಸಂಧಿಪದಿ (ಜಂತು)ಪ್ರಾಣಿಗಳಾಗಿವೆ.ಪ್ರಾಣಿ ವಿಂಗಡಣೆ ಸಂಧರ್ಭದಲ್ಲಿ ವರ್ಗೀಯ ವಿಂಗಡಣೆಯಲ್ಲಿ ಚೇಳುಗಳು ಅರಕ್ನಿಡ್ ಎಂಬ ಪ್ರಭೇದಕ್ಕೆ ಸೇರುತ್ತವೆ. ಅವುಗಳಿಗೆ ಎಂಟು ಪಾದಗಳಿವೆ.ಅವುಗಳ ಮುಂದಿರುವ ಇಕ್ಕಳದಂತಹ ವಾಸನೆ ಕಂಡು ಹಿಡಿಯುವ ಜೋಡಿ ನಖಗಳು ಹಾಗು ಪಟ್ಟಿಗಳುಳ್ಳ ಸಣ್ಣ ಬಾಲದ ತಿರುವು ಆಕಾರವು, ಅದರ ಹಿಂದೆಯೇ ವಿಷದ ಮುಳ್ಳನ್ನು ಹೊಂದಿರುತ್ತದೆ. ಚೇಳು ಅತ್ಯಂತ ವಿಷಕಾರಿ ಎಂದು ಸಾಮಾನ್ಯವಾಗಿ ಎಲ್ಲರಲ್ಲಿಯೂ ಭಯವಿದೆ.ಈ ಪ್ರಭೇದದ 25 ಜಾತಿಯ ಚೇಳುಗಳಿಗೆ ಮಾತ್ರ ಮಾನವನನ್ನು ಕೊಲ್ಲುವ ವಿಷದ ಪ್ರಮಾಣವಿದೆ. ವಿಭಿನ್ನ ಭೌತಿಕ,ಸ್ವರೂಪದ,ಜೈವಿಕರಾಸಾಯನಿಕ ಮತ್ತು ನೈಸರ್ಗಿಕ ಅಳವಡಿಕೆಗಳು ಇವುಗಳಿಗೆ ಭೂಮಿ ಮೇಲೆ ಅವಕಾಶ ನೀಡಿವೆ.ಚೇಳುಗಳು ಭೂಮಿ ಮೇಲೆ ಭೌಗೋಳಿಕೆ ಚಿನ್ಹೆ ಕಾಣಿಸಿದ ಸಿಲುರಿಯನ್ ಕಾಲದ ಅವಧಿಯಿಂದಲೂ ಅತ್ಯಂತ ಸಮೃದ್ಧವಾಗಿ ಭೂಮಿ ಮೇಲೆ ಕಾಣಿಸಿವೆ.ಆಶ್ಚರ್ಯವೆಂದರೆ ಇವುಗಳ ಆಕಾರ,ಸ್ವರೂಪದಲ್ಲಿ ಯಾವುದೇ ಅಂತಹ ಬದಲಾವಣೆ ಕಂಡು ಬಂದಿಲ್ಲ.೪೪೩ to ೪೧೬ million years ago[1]: 1
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (October 2009) |
Scorpion Temporal range: Silurian–Recent PreꞒ
Ꞓ
O
S
D
C
P
T
J
K
Pg
N
| |
---|---|
Asian forest scorpion in Khao Yai National Park, Thailand | |
Scientific classification | |
ಸಾಮ್ರಾಜ್ಯ: | Animalia |
ವಿಭಾಗ: | Arthropoda |
ಉಪವಿಭಾಗ: | Chelicerata |
ವರ್ಗ: | Arachnida |
Subclass: | Dromopoda |
ಗಣ: | Scorpiones C. L. Koch, 1837 |
Superfamilies | |
Buthoidea |
ಚೇಳುಗಳು ಎಲ್ಲಾ ಖಂಡದಲ್ಲೂ ವ್ಯಾಪಕವಾಗಿ ಹರಡಿವೆ,ಆದರೆ ಅಂಟಾರ್ಟಿಕಾ,ಹೊರತುಪಡಿಸಿದರೆ ಅತ್ಯುನ್ನತ ಅಕ್ಷಾಂಶದ ಟಂಡ್ರಾ ಗಡಿ ರೇಖೆಗಳಲ್ಲಿ ಅವು ಕಾಣುವುದಿಲ್ಲ. ಅವುಗಳನ್ನು ಮನುಷ್ಯರು ಇಂಗ್ಲೆಂಡ್ ಮತ್ತು ನ್ಯುಜಿಲೆಂಡ್ ಗಳಿಗೆ ಪರಿಚಯಿಸಿದರು. ಚೇಳುಗಳಲ್ಲಿ ಒಟ್ಟು 1752 ಪ್ರಭೇದಗಳಿವೆ ಎಂದು ವರ್ಣಿಸಲಾಗಿದೆ.[2] ಇವತ್ತಿನ ವರೆಗೆ ಅವುಗಳ ಕುಟುಂಬಕ್ಕೆ ಸೇರಿದ ಸುಮಾರು ಹದಿಮೂರು ವರ್ಗಗಳನ್ನು ಇದುವರೆಗೆ ಕಂಡು ಹಿಡಿಯಲಾಗಿದೆ. ಜೀವಿಗಳ ವರ್ಗೀಕರಣಶಾಸ್ತ್ರವು ಹಲವಾರು ಬದಲಾವಣೆಗಳನ್ನು ಕಂಡಿದೆ,ವಂಶವಾಹಿನಿಗಳ ಅಧ್ಯಯನಗಳು ಈ ಬಗ್ಗೆ ಇನ್ನಷ್ಟು ವಿವರಗಳ ಕಲೆ ಹಾಕಲು ಮುಂದಾಗಿದೆ.