ಚಲನಶಕ್ತಿ
From Wikipedia, the free encyclopedia
ಭೌತಶಾಸ್ತ್ರದಲ್ಲಿ ಯಾವುದೇ ಒಂದು ವಸ್ತುವಿನ ಚಲನಶಕ್ತಿಯು ಆ ವಸ್ತುವಿನ ಚಲನೆ ಅಥವಾ ಗತಿಯಿಂದ ಪಡೆಯುವಂತ ಶಕ್ತಿಯಾಗಿರುತ್ತದೆ. ಚಲನಶಕ್ತಿಯು ಒಂದು ವಸ್ತುವನ್ನು ನಿಶ್ಚಲ ಸ್ಥಿತಿಯಿಂದ ಗೊತ್ತಾದ ವೇಗಕ್ಕೆ ವೇಗೋತ್ಕರ್ಷಗೊಳಿಸಲು ಮಾಡಬೇಕಾಗುವ ಕೆಲಸ ಎಂದು ವ್ಯಾಖ್ಯಾನಿಸಲಾಗಿದೆ. ವೇಗೋತ್ಕರ್ಷಗೊಂಡಾಗ ಪಡೆದಿರುವಂತಹ ಶಕ್ತಿಯನ್ನು, ಆ ವಸ್ತುವು ತನ್ನ ವೇಗ ಬದಾಲಯಿಸುವವರೆಗೂ ಉಳಸಿಕೊಂಡಿರುತ್ತದೆ. ಆ ವಸ್ತುವನ್ನು ಪಡೆದ ವೇಗದಿಂದ ನಿಶ್ಚಲ ಸ್ತಿತಿಗೆ ತರಲು, ಅದೇ ಮೊತ್ತದ ಕೆಲಸ ಬೇಕಾಗುತ್ತದೆ.[1] ಶಾಸ್ತ್ರೀಯ ಯಂತ್ರಶಾಸ್ತ್ರದ ಪ್ರಕಾರ ಒಂದು ತಿರುಗದೇ ಇರುವಂತಹ, ವೇಗದಲ್ಲಿ ಚಲಿಸುತ್ತಿರುವ, ದ್ರವ್ಯರಾಶಿ ಇರುವ ವಸ್ತುವಿನ ಚಲನ ಶಕ್ತಿಯು ಆಗಿರುತ್ತದೆ. ಚಲನ ಶಕ್ತಿಯ ಮಾನಕ ಜೌಲ್ (Joule) ಆಗಿದೆ.
Quick Facts
Close