From Wikipedia, the free encyclopedia
ಗೋವರ್ಧನ್ ಮಠ,ವನ್ನು ಸಾಮಾನ್ಯವಾಗಿ ಭೊಗೊವರ್ಧನ ಮಠ, ಅಥವಾ ಗೋವರ್ಧನ ಮಠವೆಂದು ಕರೆಯುತ್ತಾರೆ. 8ನೇ ಶತಮಾನದಲ್ಲಿ ಆದಿಶಂಕರಾಚಾರ್ಯರು, ದಶನಾಮೀ ಸಂಪ್ರದಾಯದ ಮೂಲವನ್ನು ಅರಸುತ್ತಾ, ಹೊರಟು, ಪುರಿನಗರವನ್ನು ತಲುಪಿದರು. ಪುರಿಯು, ಪೂರ್ವಭಾರತದ ಒಡಿಶಾ ರಾಜ್ಯದಲ್ಲಿದೆ.[1] ಪೂಜ್ಯ ಆದಿಶಂಕರ ಭಗವದ್ಪಾದರು. ಭಾರತದೇಶದ ವೈದಿಕ ಧರ್ಮದ ವಿವಿಧ ಗುಂಪುಗಳ ಸನ್ಯಾಸಿಗಳನ್ನು ಒಂದೇ ವೇದಿಕೆಗೆ ತರಲು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಇದೊಂದು. ಗೋವರ್ಧನ ಮಠ, ಪುರಿ ಜಗನ್ನಾಥ ದೇವಾಲಯದ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ.ಪುರಿ ನಗರದಲ್ಲೇ ಇರುವ ಈ ಧಾರ್ಮಿಕ, ಅಧ್ಯಾತ್ಮಿಕ ಕೇಂದ್ರ ಮತ್ತು ಜಗನ್ನಾಥ ಮಂದಿರಕ್ಕೆ ಐತಿಹಾಸಿಕ ಸಂಬಂಧವಿದೆ. ಪ್ರಜ್ಞಾನಮ್ ಬ್ರಹ್ಮ: ಪೂರ್ವದಲ್ಲಿ ಗೋವರ್ಧನಪೀಠ. ಋಗ್ವೇದ ಶಾಖೆಯ ನಿರ್ವಹಣೆಯಲ್ಲಿದೆ. ಈ ಮಠದಲ್ಲಿ ಜಗನ್ನಾಥ (ಬೈರವ) ಮತ್ತು ದೇವಿ ವಿಮಲ(ಭೈರವಿ)ಯನ್ನು ಪೂಜಿಸಲಾಗುತ್ತದೆ. ಗೋವರ್ಧನನಾಥ ಕೃಷ್ಣ, ಮತ್ತು ಅರ್ಧನಾರೀಶ್ವರ ದೈವಗಳ ಮೂರ್ತಿಗಳನ್ನು ಆದಿಶಂಕರರು ಸ್ಥಾಪಿಸಿದ್ದಾರೆ. ಮಠಕ್ಕೆ ಭೇಟಿ ನೀಡುವ ಭಕ್ತಾದಿಗಳು ಆಧ್ಯಾತ್ಮದ ಜೀವನವನ್ನು ಅನುಭವಿಸಬಹುದಾಗಿದೆ. ಆಧುನಿಕ ದಿನಗಳ ಚಟುವಟಿಕೆಗಳಾದ ವೇದಶಿಕ್ಷಣ ಕೇಂದ್ರ, ಯೋಗಶಾಲೆ, ವಿವಿಧ ವಿಭಾಗದ ಕ್ರೀಡಾಳುಗಳನ್ನು ತರಬೇತುಗೊಳಿಸುವ ವ್ಯಾಯಾಮ ಶಾಲೆ, ಯಾತ್ರಾರ್ಥಿಗಳು ಮತ್ತು ಪುರಿಯ ನಿವಾಸಿಗಳಿಗೆ ಉಚಿತವಾಗಿ ಸೇವೆ ನೀಡುವಂತಹ ಔಷದಾಲಯ, ಮತ್ತು ೭೦ ಗೋವುಗಳನ್ನು ಒಳಗೊಂಡ ಗೋಶಾಲೆಯಿದೆ.
ಶ್ರೀ ಶ್ರೀ ಸ್ವಾಮಿ ನಿಶ್ಚಲಾನಂದ ಸರಸ್ವತಿ ಮಹಾರಾಜ್, ಬಿಹಾರದಲ್ಲಿ ೧೯೩೯ ರಲ್ಲಿ ಒಂದು ಶ್ರೇಷ್ಠ ಬ್ರಾಹ್ಮಣ ಮನೆತನದಲ್ಲಿ ಜನ್ಮವೆತ್ತಿದರು. ಸುಮಾರು ೫೦ ವರ್ಷಗಳಿಂದ ತಮ್ಮ ಅಧ್ಯಾತ್ಮ ಚಿಂತನೆಗಳಿಂದ್ದ ಶ್ರದ್ದಾಳುಗಳಿಗೆ ಸುಧರ್ಮ ಬೋಧನೆಯನ್ನು ನೀಡುತ್ತಾ ಬಂದಿದ್ದಾರೆ. ವಾರಣಾಸಿಯ ಗುರು, ಶ್ರೀ ಕರ್ಪತ್ರಿಜಿ ಮಹಾರಾಜ್ ಅವರ ಗುರುಗಳು. ೪ ಮಠಗಳ ಮುಖ್ಯಸ್ಥರು ಶಂಕರರ ಅವತಾರವೆಂದು ಪರಿಗಣಿಸಲ್ಪಡುತ್ತಾರೆ.ಸನ್ಯಾಸದ 4 ವಿಧಗಳಿಗೆ ಕುಟಿಚಕ, ಬಹುಚಕ, ಹಂಸ ಮತ್ತು ಪರಮಹಂಸ. ಇದರ ಜೊತೆಗೆ ದಶನಾಮಿ ಪದ್ಧತಿಯನ್ನು ಶಂಕರರು ಹೊರತಂದರು. ದಶನಾಮಿ ಸಂಪ್ರದಾಯದಂತೆ ಹೆಸರುಗಳು 1. ತೀರ್ಥ.2. ಆಶ್ರಮ. 3. ವನ. 4. ಅರಣ್ಯ. 5. ಗಿರಿ. 6. ಪರ್ವತ. 7. ಸಾಗರ. 8. ಸರಸ್ವತಿ. 9. ಭಾರತೀ. 10. ಪುರೀ ಈ ಬಗ್ಗೆ ವಿವರಣೆ ಮುಂದಿದೆ ಪ್ರಜ್ಞಾ ಬ್ರಹ್ಮ, ಎನ್ನುವ ಮಹಾವಾಕ್ಯ ಗೋವರ್ಧನ ನಾಥ, ಕೃಷ್ಣನ ವಿಗ್ರಹ,ಅರ್ಧನಾರೀಶ್ವರ ಶಿವನ ಮೂರ್ತಿಯನ್ನು ಪೂರ್ವದಲ್ಲಿಯೇ ಆದಿ ಶಂಕರರು ಸ್ಥಾಪಿಸಿದರು. [2]
ಪವಿತ್ರನಗರಗಳಾದ ಪುರಿ, ಅಲಹಾಬಾದ್, ಗಯಾ, ವಾರಾಣಸಿ ನಗರಗಳು, ಗೋವರ್ಧನ ಮಠದ ಪೀಠದವ್ಯಾಪ್ತಿಯಲ್ಲಿ ಬರುವ ಸ್ಥಳಗಳು : ಬಿಹಾರ, ಝಾರ್ ಖಂಡ್ ಛತ್ತೀಸ್ ಘರ್, ಆಂಧ್ರ ಪ್ರದೇಶ, ರಾಜಮಂಡ್ರಿ, ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಸಿಕ್ಕಿಂ, ಮೇಘಾಲಯ, ತ್ರಿಪುರ, ಮಿಜೋರಂ, ಉತ್ತರ ಪ್ರದೇಶ, ಪ್ರಯಾಗದವರೆಗೆ, ನೇಪಾಳ, ಬಾಂಗ್ಲಾ ದೇಶ, ಭೂತಾನ, ಮಠದ ವ್ಯಾಪ್ತಿಯಲ್ಲಿಬರುತ್ತವೆ.
ಶಂಕರಾಚಾರ್ಯರು ನಾಲ್ಕು ವೇದಗಳಿಗೆ ಒಂದೊಂದು ಮಠದಂತೆ ದೇಶದ ನಾಲ್ಕು ಕಡೆ ಪೀಠಗಳನ್ನು ಸ್ಥಾಪಿಸಿದರು.
ಗೋವರ್ಧನ ಮಠ ೪ ಮಠಗಳಲ್ಲೊಂದು.ಆದಿ ಶಂಕರರು ಸ್ಥಾಪಿಸಿದ (೮ ನೇ ಶತಮಾನದಲ್ಲಿ), ಸನಾತನ ಧರ್ಮದ ಪ್ರತಿಪಾದಕರಾದ ಶಂಕರರ ೪ ಪ್ರಮುಖ ಶಿಷ್ಯರಲ್ಲಿ
ಉತ್ತರ, ದಕ್ಷಿಣ, ಪೂರ್ವ, ಮತ್ತು ಪಶ್ಚಿಮ ದಿಶೆಗಳಲ್ಲಿನ ಮಠಗಳನ್ನು ಆದಿಶಂಕರ ಮಠಗಳೆಂದು ಕರೆದರೂ, ದಶನಾಮೀ ಸಂನ್ಯಾಸಿಗಳು ಅದ್ವೈತ ಸಿದ್ಧಾಂತದ ಪ್ರತಿಪಾದಕರ, ೪ ಪ್ರಮುಖ ಧಾಮಗಳು ಪುರಿ, (ಒಡಿಶಾ), ಶೃಂಗೇರಿ (ಕರ್ನಾಟಕ), ದ್ವಾರಕಾ (ಗುಜರಾತ್), ಉತ್ತರದ ಉತ್ತರಾಮ್ನಾಯ ಧಾಮ, ಜ್ಯೋತಿಮಠ್, ಜ್ಯೋಶಿಮಠ್, ಎನ್ನುವ ಹೆಸರಿನಿಂದಲೂ ಪ್ರಸಿದ್ಧವಾಗಿದೆ.
ಪದ್ಮಪಾದಾಚಾರ್ಯರು, ಪುರಿ ಮಠದ ಪ್ರಥಮ ಯತಿಗಳು. ಪುರಿಯಲ್ಲಿರುವ ಚಾರಿತ್ರ್ಯಕವಾಗಿ ಜಗನ್ನಾಥ ದೇವಾಲಯದ ಸಂಪರ್ಕವಿದೆ. ದ್ವಾರಕಾ ಮಠದ ಅಧಿಪತಿಗಳಾಗಿದ್ದ ಮುಂದಾಳತ್ವದಲ್ಲಿದ್ದ ಭಾರತಿ ಕೃಷ್ಣ ಸ್ವಾಮೀಜಿಯವರು ೧೯೨೫ರಲ್ಲಿ ಗೋವರ್ಧನ ಮಠದ ಮೇಲ್ವಿಚಾರಣೆಯನ್ನು ವ ಹಿಸಿಕೊಂಡರು, ಅವರು ಅಮೆರಿಕದೇಶಕ್ಕೆ 'ಸೆಲ್ಫ್ ರಿಯಲೈಸೇಶನ್ ಫೆಲೋಶಿಪ್ ಕಮ್ಮಟ',ದಲ್ಲಿ ಭಾಗವಹಿಸಲು ತೆರಳಿದಾಗ, ಶಂಕರಪುರುಷೋತ್ತಮ ತೀರ್ಥರು ಪುರಿಮಠದ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ತದನಂತರ ೧೯೬೦ ರಲ್ಲಿ ಭಾರತಿ ತೀರ್ಥರು ಮಹಾಸನ್ನಿಧಿಯನ್ನು ಹೊಂದಿದನಂತರ ೧೯೬೧ ರಲ್ಲಿ ಆಚಾರ್ಯ ಪದವಿ ಗ್ರಹಣಮಾಡಿದರು. ಮುಂದೆ ಭಾರತಿ ತೀರ್ಥರ ಮರಣೋತ್ತರ ಶಾಸನದಲ್ಲಿ ನಿರೂಪಿಸಿದ್ದಂತೆ, ನಿರಂಜನ ದೇವತೀರ್ಥರೆಂಬ ಹೆಸರಿನ ಅವರ ಶಿಷ್ಯರನ್ನು೧೯೬೪ ರಲ್ಲಿ ದ್ವಾರಕಾ ಮಠದ ಅಭಿನವ ಸಚ್ಚಿದಾನಂದ ತೀರ್ಥರು ನೇಮಿಸಿದರು. ಆದರೆ,ನಿರಂಜನದೇವತೀರ ರಾಜಕೀಯದಿಂದ ಕೂಡಿದ ನೇತೃತ್ವದಲ್ಲಿ ಹಿಂದೂ ಧರ್ಮಕ್ಕೆ ವಿರುದ್ಧವಾದ ವರ್ತನೆಗಳು,ಅವರ ಶಿಷ್ಯರು,ಹಾಗೂ ಭಕ್ತವೃಂದ್ದಕ್ಕೆ ನಿರಾಶೆಯನ್ನು ಉಂಟುಮಾಡಿತು. ಹೀಗಾಗಿ, ಅವರು ೧೯೯೨ ರಲ್ಲಿ ತಮ್ಮ ಸ್ಥಾನವನ್ನು ತ್ಯಾಗಮಾಡಬೇಕಾಯಿತು. ೧೯೯೦ ರಲ್ಲಿ ನಿಶ್ಚಲಾನಂದ ಸರಸ್ವತಿಯವರನ್ನು ಹೆಸರನ್ನು ಸೂಚಿಸಿ ವಿರಮಿಸಿದರು.
ಈಗಿನ ಯತಿಗಳು ೯ ವರ್ಷಗಳ ಹಿಂದೆ ಸಮುದ್ರಾರತಿಯನ್ನು ಪ್ರಚುರಗೊಳಿಸಿದರು ಪ್ರತಿದಿನದ ವಿಧಿಗಳು : ಮೊದಲು ಧ್ಯಾನ,ಮತ್ತು ಸಮುದ್ರಕ್ಕೆ ಮಂಗಳಾರತಿವಿಧಿಗಳನ್ನು ಪುರಿನಗರದ ಸ್ವರ್ಗದ್ವಾರ ರಸ್ತೆಯಲ್ಲಿರುವ ಶ್ರೀ ಮಠದ ಭಕ್ತಾದಿಗಳು ಪುಷ್ಯಮಾಸದ ಪೂರ್ಣಿಮೆಯ ದಿನದಂದು ನೆರೆವೇರಿಸುತ್ತಾರೆ. ಈ ಧಾಮ, ಪುರಿಯ ಸಮುದ್ರತಟಕ್ಕೆ ಸಮಿಪದಲ್ಲಿದೆ
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.