ಗುಲಾಮಗಿರಿ
From Wikipedia, the free encyclopedia
ಗುಲಾಮಗಿರಿ ಎಂಬುದು ಒಂದು ವ್ಯವಸ್ಥೆಯಾಗಿದ್ದು, ಇದರಡಿಯಲ್ಲಿ ಜನರನ್ನು ಸ್ವತ್ತಿನಂತೆ ಕಾಣಲಾಗುತ್ತದೆ. ಅಲ್ಲದೇ ಅವರನ್ನು ದುಡಿಮೆಗಾಗಿ ಬಲವಂತಪಡಿಸಲಾಗುತ್ತದೆ.[1] ಗುಲಾಮರನ್ನು ಬಂಧಿಸಿದಾಗಿನಿಂದ, ಕೊಂಡುಕೊಂಡಾಗಿನಿಂದ ಅಥವಾ ಹುಟ್ಟಿನಿಂದಲೆ ಅವರ ಇಚ್ಛೆಗೆ ವಿರುದ್ಧವಾಗಿ ಇಟ್ಟುಕೊಳ್ಳಬಹುದು. ಅಲ್ಲದೇ ಅವರು ದುಡಿಯಲು ನಿರಾಕರಿಸಿದಲ್ಲಿ ಅಥವಾ ಪ್ರತಿಫಲವನ್ನು ಅಪೇಕ್ಷಿಸಿದಲ್ಲಿ ಅವರ ಬದುಕುವ ಸ್ವತಂತ್ರವನ್ನು ಕಿತ್ತುಕೊಳ್ಳಬಹುದಾಗಿತ್ತು. ಗುಲಾಮಗಿರಿ, ಅನೇಕ ಸಂಸ್ಕೃತಿ[2] ಗಳಲ್ಲಿ ಅಸ್ತಿತ್ವದಲ್ಲಿದಂತಹ ಬರಹ ದಾಖಲೆಗಳನ್ನು ಹಿಂದಿನದ್ದೆಂದು ತಿಳಿಸುತ್ತದೆ. ಅಲ್ಲದೇ ಕೆಲವು ಐತಿಹಾಸಿಕ ಸಂದರ್ಭಗಳಲ್ಲಿ ಮಾಲೀಕರು ಗುಲಾಮರನ್ನು ಹತ್ಯೆಮಾಡುವುದು ಕಾನೂನು ಬದ್ಧವಾಗಿತ್ತು.[3]
ಇಂದು ಉಳಿದಿರುವ ಗುಲಾಮರ ಸಂಖ್ಯೆ ಹೆಚ್ಚೆಂದರೆ 12 ಮಿಲಿಯನ್[4] ನಿಂದ 27 ಮಿಲಿಯನ್ ಇರಬಹುದು,[5][6][7] ಆದರೂ ಬಹುಶಃ ಇದು ಇತಿಹಾಸದಲ್ಲಿ ಪ್ರಪಂಚದ ಜನಸಂಖ್ಯೆಯ ಅತ್ಯಂತ ಸಣ್ಣ ಭಾಗವಾಗಿದೆ.[8] ಇವರಲ್ಲಿ ಅನೇಕರು ಸಾಲ ಪಡೆದು ಗುಲಾಮರಾಗಿದ್ದರು, ಇವರೆಲ್ಲರೂ ದಕ್ಷಿಣ ಏಷ್ಯಾದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದರು, ಇವರುಗಳು ಸಾಲದಾತರಿಂದ ಹಣವನ್ನು ಪಡೆದು ಸಾಲದ ಬಂಧನಕ್ಕೊಳಪಟ್ಟಿದ್ದರು, ಕೆಲವೊಂದು ಬಾರಿ ಇವರ ಸೇವಕತನವು ಮುಂದಿನ ಹಲವಾರು ಪೀಳಿಗೆಗಳವರೆಗೂ ನಡೆಯುತ್ತಿತ್ತು.[9] ಮಾನವನ ವಿನಿಮಯ ವು ಮುಖ್ಯವಾಗಿ ಮಹಿಳೆಯನ್ನು ವೇಶ್ಯೆಯಾಗಿಸುವ ಮತ್ತು ಮಕ್ಕಳನ್ನು ವ್ಯಭಿಚಾರಕ್ಕೆ ತಳ್ಳುವ ವ್ಯಾಪಾರವಾಗಿದೆ.[10] ಇದು ತ್ವರಿತ ಗತಿಯಲ್ಲಿ ಬೆಳೆಯುತ್ತಿರುವ ಅಪರಾಧ ಉದ್ಯಮವಾಗಿದೆ. ಅಲ್ಲದೇ ಅಂತಿಮವಾಗಿ ಇದು ಮಾದಕ ವಸ್ತುವಿನ ವ್ಯಾಪಾರವನ್ನು ಮೀರಿ ಬೆಳೆಯುತ್ತಿದೆ ಎಂದು ಊಹಿಸಲಾಗಿದೆ.[10][11]