ಗುಜರಾತ್
ಭಾರತದ ರಾಜ್ಯ / From Wikipedia, the free encyclopedia
ಗುಜರಾತ್ (ગુજરાત - ಗುಜರಾತಿ ಭಾಷೆಯಲ್ಲಿ ) ಭಾರತದ ಪ್ರಮುಖ ಕೈಗಾರಿಕೆಗಳನ್ನೊಳಗೊಂಡ ರಾಜ್ಯ. ಈ ರಾಜ್ಯ ಅರಬ್ಬೀ ಸಮುದ್ರ, ಪಾಕಿಸ್ತಾನದ ಸೀಮೆಗೆ ಸಮೀಪದಲ್ಲಿದೆ. ರಾಜ್ಯದ ರಾಜಧಾನಿ ಗಾಂಧಿನಗರ (ಗುಜರಾತ್). ಅಹ್ಮದಾಬಾದ್ ಗುಜರಾತಿನ ವಾಣಿಜ್ಯ ರಾಜಧಾನಿ. ಅರಬ್ಬೀ ಸಮುದ್ರದ ತೀರದಲ್ಲಿ, ಉ. ಅ. 20° 1’ - 24° 7’ ಮತ್ತು ಪು. ರೇ. 68° 4’ - 74° 4’ ನಡುವೆ ಇದೆ. ಉತ್ತರದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ರಾಜಸ್ಥಾನ, ಪೂರ್ವದಲ್ಲಿ ಮಧ್ಯಪ್ರದೇಶ ಮತ್ತು ದಕ್ಷಿಣದಲ್ಲಿ ಮಹಾರಾಷ್ಟ್ರ ಪಶ್ಚಿಮ, ನೈರುತ್ಯ ಮತ್ತು ದಕ್ಷಿಣದಲ್ಲಿ ಅರಬ್ಬೀ ಸಮುದ್ರ ಮತ್ತು ಖಂಭತ್ ಹಾಗೂ ಕಚ್ ಖಾರಿ ಸುತ್ತುವರೆದಿವೆ. ಈ ರಾಜ್ಯದ ವಿಸ್ತೀರ್ಣ 1,96,024 ಚ.ಕಿಮೀ. ಜನಸಂಖ್ಯೆ 6,03,83,628 (2011).ಗುಜರಾತಿನ ಒಂದು ವೈಶಿಷ್ಟ್ಯವೆಂದರೆ ಅದರ ಕರಾವಳಿ ಭಾರತದ ಬೇರಾವ ರಾಜ್ಯಕ್ಕೂ ಇಷ್ಟು ಉದ್ದವಾದ ಸಮುದ್ರತೀರವಿಲ್ಲ. ಇದು ಗುಜರಾತಿನ ವಾಯುಗುಣ, ಆರ್ಥಿಕತೆ ಮತ್ತು ಸಾಮಾಜಿಕ ವ್ಯವಸ್ಥೆಗಳ ಮೇಲೆ ಬಹಳ ಹೆಚ್ಚಿನ ಪ್ರಭಾವ ಬೀರಿದೆ. ಭಾರತದ ಒಟ್ಟು ವಿಸ್ತೀರ್ಣದಲ್ಲಿ ಶೇ. 6.1 ರಷ್ಟಿರುವ ಈ ರಾಜ್ಯದ ಜನಸಂಖ್ಯೆ ಭಾರತದ್ದರ ಶೇ.4.8 ರಷ್ಟಿದೆ.
ಗುಜರಾತ್ | |
ರಾಜಧಾನಿ - ಸ್ಥಾನ |
ಗಾಂಧಿನಗರ - 23.21° N 72.68° E |
ಅತಿ ದೊಡ್ಡ ನಗರ | ಅಹಮದಾಬಾದ್ |
ಜನಸಂಖ್ಯೆ (2008) - ಸಾಂದ್ರತೆ |
56,793,000 (10ನೇ) - 258/km² |
ವಿಸ್ತೀರ್ಣ - ಜಿಲ್ಲೆಗಳು |
196,024 km² (7ನೇ) - 25 |
ಸಮಯ ವಲಯ | IST (UTC+5:30) |
ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
ಮೇ ೧,೧೯೬೦ - ಓಮ್ ಪ್ರಕಾಶ್ ಕೋಹ್ಲಿ - ವಿಜಯ್ ರೂಪಾನಿ - Unicameral (182) |
ಅಧಿಕೃತ ಭಾಷೆ(ಗಳು) | ಗುಜರಾತಿ |
Abbreviation (ISO) | IN-GJ |
ಅಂತರ್ಜಾಲ ತಾಣ: http://www.gujaratindia.com/ | |
ಗುಜರಾತ್ ರಾಜ್ಯದ ಮುದ್ರೆ |