ಖಂಡೇಶಿ ಭಾಷೆ
From Wikipedia, the free encyclopedia
ಖಂಡೇಶಿ ಭಾಷೆಯು ಮಹಾರಾಷ್ಟ್ರ ರಾಜ್ಯದಲ್ಲಿ ಇಂಡೋ ಆರ್ಯನ್ ಭಾಷೆಯಲ್ಲಿ ಒಂದಾಗಿದ್ದು, [1] ಎಂಬ ಪ್ರದೇಶದಲ್ಲಿ ಈ ಭಾಷೆಯನ್ನು ಅತಿಯಾಗಿ ಬಳಸುವುದರಿಂದ ಈ ಭಾಷೆಗೆ ಪ್ರಾಂತೀಯವಾಗಿ ಖಂಡೇಶಿ ಭಾಷೆ ಎನ್ನಲಾಗಿದೆ. ಖಂಡೇಶ್ ಪದದ ಮೂಲದ ಬಗ್ಗೆ ವಿವಿಧ ಸಿದ್ಧಾಂತಗಳಿವೆ. ಒಂದು ಸಿದ್ಧಾಂತವು ಈ ಹೆಸರನ್ನು " ಖಾನ್ " ( ಈ ಪ್ರದೇಶದ ಮೊಘಲ್ ನಿಯೋಗಿಗಳು ಬಳಸುವ ಶೀರ್ಷಿಕೆ ) ಮತ್ತು "ದೇಶ" (ದೇಶ)ಎಂಬ ಪದಗಳಿಂದ ಬಂದಿದೆ ಎಂದು ಹೇಳುತ್ತದೆ. ಮತ್ತೊಂದು ಸಿದ್ಧಾಂತವು "ಕನ್ಹಾ" ಮತ್ತು "ದೇಶ್" ಪದಗಳಿಂದ ಈ ಹೆಸರನ್ನು ಪಡೆದುಕೊಂಡಿದೆ ಎಂದು ಸೂಚಿಸುತ್ತದೆ; "ಕನ್ಹಾ" ಎಂಬ ಕೃಷ್ಣನ ಹೆಸರು, ಈ ಪ್ರದೇಶದ ಅಹಿರ್ ಜನರು ಪೂಜಿಸುವ ಪ್ರಾಥಮಿಕ ದೇವ ಕೃಷ್ಣನಾಗಿದ್ದುದರಿಂದಲೂ ಈರೀತಿ ಕರೆಯಲಾಗಿದೆ ಎಂದು ತಿಳಿಸಿದೆ. ಇತರ ಸಿದ್ಧಾಂತಗಳು " ಕಾನ್ಬಾಯ್" (ಪ್ರಾದೇಶಿಕ ಸ್ತ್ರೀ ದೇವತೆ), "ಕಹಾನ್" (ಹೇ ಅಥವಾ ಹುಲ್ಲು) ಮತ್ತು " ಖಾನ್" ( "ಖಾನ್" ಪದದ ವಿಭಿನ್ನ ಮೂಲಗಳಿವೆ.) ಖಂಡೇಶ್ ಪದದ ವಿವಿಧ ವ್ಯುತ್ಪತ್ತಿಯ ವಿವರವಾದ ಅಧ್ಯಯನವು ಡಾ.ರಮೇಶ್ ಸೂರ್ಯವಂಶಿ ಅವರ [2] ಪುಸ್ತಕದಲ್ಲಿ ಕಂಡುಬರುತ್ತದೆ . ಖಂಡೇಶಿಯು ಭಿಲಿ ಮತ್ತು ಮರಾಠಿ ಪ್ರದೇಶಗಳ ನಡುವೆಯಲ್ಲಿ ವಿಂಗಡಿಸಲಾಗಿದ್ದು,ಡಂಗ್ರಿ ಮತ್ತು ಅಹಿರಾನಿಗಳು ಇದರ ಉಪಭಾಷೆಗಳಾಗಿವೆ. ಖಂಡೇಶ್ ಪ್ರದೇಶದಲ್ಲಿ ಐದು ರೀತಿಯ ಭಾಷಾಕುಟುಂಬಗಳನ್ನೂ ಸಹ ಕಾಣಬಹುದಾಗಿದ್ದು
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |