ಕೊಪ್ಪಳ
From Wikipedia, the free encyclopedia
ಕೊಪ್ಪಳ ಜಿಲ್ಲೆ ೧-೪-೧೯೯೮ ರಂದು ಆರಂಭವಾದ ಕರ್ನಾಟಕ ರಾಜ್ಯದ ಹೊಸ ಜಿಲ್ಲೆಗಳಲ್ಲಿ ಒಂದಾಗಿದೆ.[1] ೭೧೯೦ ಚ.ಕಿಮಿ ವಿಸ್ತೀರ್ಣ ಮತ್ತು ೨೦೧೧ ರ ಜನಗಣತಿಯ ಪ್ರಕಾರ ೧೩.೮೯ ಲಕ್ಷ ಜನಸಂಖ್ಯೆ[1] ಕೊಪ್ಪಳ ಜಿಲ್ಲೆ ಹೊಂದಿರುತ್ತದೆ. ಗಂಗಾವತಿ, ಕೊಪ್ಪಳ,ಯಲಬುರ್ಗಾ, ಕುಷ್ಟಗಿ[1] ಮತ್ತು ೨೦೧೭ರಲ್ಲಿ ಹೊಸದಾಗಿ ಘೋಷಣೆಯಾದ ಕುಕನೂರು, ಕನಕಗಿರಿ ಹಾಗು ಕಾರಟಗಿ[2] ಈ ಜಿಲ್ಲೆಯಲ್ಲಿರುವ ತಾಲೂಕುಗಳು. ಐತಿಹಾಸಿಕವಾಗಿ, ಸಾಂಸ್ಕ್ರತಿಕವಾಗಿ ಕೊಪ್ಪಳ ಪ್ರಸಿದ್ಧವಾಗಿದೆ.[1]
ಈ ಲೇಖನದಲ್ಲಿ ಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
ಕೊಪ್ಪಳ
Koppala | |
---|---|
ನಗರ | |
Country | ಭಾರತ |
ರಾಜ್ಯ | ಕರ್ನಾಟಕ |
ಪ್ರಾಂತ್ಯ | ಬಯಲುಸೀಮೆ |
ಜಿಲ್ಲೆ | ಕೊಪ್ಪಳ ಜಿಲ್ಲೆ |
Area | |
• Total | ೨೮.೭೮ km೨ (೧೧.೧೧ sq mi) |
Elevation | ೫೨೯ m (೧,೭೩೬ ft) |
Population (2011) | |
• Total | ೭೦,೬೯೮ |
• ಸಾಂದ್ರತೆ | ೧,೯೫೧.೩೬/km೨ (೫,೦೫೪�೦/sq mi) |
ಭಾಷೆ | |
• ಅಧಿಕೃತ | ಕನ್ನಡ |
ಸಮಯ ವಲಯ | ಯುಟಿಸಿ+5:30 (IST) |
PIN | 583 231 |
Telephone code | 08539 |
ವಾಹನ ನೋಂದಣಿ | KA-37 |
ಜಾಲತಾಣ | www.koppal.nic.in |
ಕೊಪ್ಪಳವು ಕರ್ನಾಟಕ ರಾಜ್ಯದ ಈಶಾನ್ಯ ಭಾಗದಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ನಡುವಿನ ಪ್ರದೇಶದಲ್ಲಿದೆ. ಹಿಂದಿನ ರಾಯಚೂರು ಜಿಲ್ಲೆಯನ್ನು ವಿಭಜಿಸಿ ೧೯೯೭ರಲ್ಲಿ ಹೊಸ ಜಿಲ್ಲೆ ಕೊಪ್ಪಳವನ್ನು ರಚಿಸಲಾಯಿತು. ಜಿಲ್ಲೆಯಲ್ಲಿ ೨೦ ಹೋಬಳಿಗಳು, ೬೧೮ ಗ್ರಾಮಗಳಿವೆ. ಈ ಜಿಲ್ಲೆಯನ್ನು ಉತ್ತರದಲ್ಲಿ ಬಾಗಲಕೋಟೆ ಮತ್ತು ರಾಯಚೂರು, ಪೂರ್ವದಲ್ಲಿ ರಾಯಚೂರು ಮತ್ತು ಬಳ್ಳಾರಿ, ದಕ್ಷಿಣದಲ್ಲಿ ಬಳ್ಳಾರಿ ಹಾಗೂ ಪಶ್ಚಿಮದಲ್ಲಿ ಗದಗ ಜಿಲ್ಲೆಗಳು ಸುತ್ತುವರಿದಿವೆ. ವಿಸ್ತೀರ್ಣ, ೫೫೭೦ ಚ ಕಿಮೀ.[1].
ಕರ್ನಾಟಕದ ರಾಜ್ಯದ ೩೧ ಜಿಲ್ಲೆಗಳಲ್ಲಿ ಕೊಪ್ಪಳ ಜಿಲ್ಲೆ ಒಂದಾಗಿದ್ದು ಈ ಜಿಲ್ಲೆಯು ದಕ್ಷಿಣ ಭಾರತದ ಕುಂಭ ಮೇಳ ಎಂದು ಹೆಸರಾಯಿತು ಏಕೆಂದರೆ ಈ ಜಿಲ್ಲೆಯಲ್ಲಿ ಶ್ರೀ ಗವಸಿದ್ಧೇಶ್ವರ ಮಠ ಇದು ಅತ್ಯಂತ ಹೆಚ್ಚು ಕಾಲ ಪ್ರಶಿದ್ದ ಪಡೆದಿತ್ತು ಆದ್ದರಿಂದ ಇದು ಪ್ರತಿವರ್ಷ ಸಾವಿರಾರು ಮಂದಿ ಜಾತ್ರೆ ಸಂದರ್ಭದಲ್ಲಿ ಸೇರಿರುತ್ತಾರೆ ಎಂದು ಹೇಳಬಹುದು