![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/2/26/Leprosy.jpg/640px-Leprosy.jpg&w=640&q=50)
ಕುಷ್ಠರೋಗ
From Wikipedia, the free encyclopedia
ಕುಷ್ಠ ಅಥವಾ ಹ್ಯಾನ್ಸೆನ್ ಖಾಯಿಲೆ (HD ),ಎಂದು ವೈದ್ಯ ಗೆರ್ಹಾರ್ಡ್ ಅರ್ಮೂಯೆರ್ ಹ್ಯಾನ್ಸೆನ್ ನಂತರ ಕರೆಯಲ್ಪಟ್ಟಿದೆ, ಇದು ದೀರ್ಘಕಾಲ ಖಾಯಿಲೆಯಾಗಿದ್ದು ಬ್ಯಾಕ್ಟಿರೀಯಾಗಳಾದ ಮೈಕೋಬ್ಯಾಕ್ಟೀರಿಯಂ ಲೆಪ್ರೆಯಿ ಮತ್ತು ಮೈಕೋಬ್ಯಾಕ್ಟೀರಿಯಂ ಲೆಪ್ರೋಮತೊಸಿಸ್ ದಿಂದ ಬರುವಂತಹುದು .[1][2] ಪ್ರಾಥಮಿಕವಾಗಿ ಈ ಖಾಯಿಲೆ, ಪೆರಿಫೆರೆಲ್ ನರಗಳ ಗ್ರಾನುಲೋಮಾಟೋಸ್ ಮತ್ತು ಮೇಲ್ಮೈ ಶ್ವಾಸೇಂದ್ರೀಯ ಪ್ರದೇಶದ ಮ್ಯುಕೋಸಾದ ಖಾಯಿಲೆ ಆಗಿರುತ್ತದೆ; ಚರ್ಮದ ಬಾಧೆ ಇದರ ಪ್ರಥಮಿಕ ಬಾಹ್ಯ ಚಿಹ್ನೆ.[3] ಕಷ್ಠವನ್ನು ಗುಣಪಡಿಸಿಕೊಳ್ಳದಿದ್ದಲ್ಲಿ, ಅದು ಅಭಿವೃದ್ಧಿಗೊಳ್ಳುತ್ತ ಹೋಗಿ ಚರ್ಮಕ್ಕೆ,ನರಗಳಿಗೆ,ಕಾಲುಗಳಿಗೆ ಮತ್ತು ಕಣ್ಣುಗಳಿಗೆ ಶಾಶ್ವತ ಹಾನಿಯನ್ನು ಉಂಟು ಮಾಡುತ್ತದೆ. ಪೌರಾಣಿಕ ಕಥೆಗಳಲ್ಲಿ ಕಂಡು ಬರುವಂತೆ ಕಷ್ಠ ರೋಗದಿಂದ ದೇಹದ ಭಾಗಗಳು ಉದುರಿಹೋಗುವುದಿಲ್ಲ,ಬದಲಾಗಿ ಅವು ಸ್ವಾಧೀನ ಕಳೆದುಕೊಳ್ಳುತ್ತವೆ ಅಥವಾ/ಮತ್ತು ರೋಗದ ಪರಿಣಾಮವಾಗಿ ರೋಗಗ್ರಸ್ಥವಾಗುತ್ತವೆ[4][5].
- ಹೆಬ್ರೂ ಬೈಬಲ್ನಲ್ಲಿನ ಪದಕ್ಕೆ ಮತ್ತು ವಿವಿಧ ಅರ್ಥಕ್ಕೆ ನೋಡಿ ತ್ಸಾರಾಥ್. ಬೇರೆ ರೀತಿಯ ಬಳಕೆಗೆ ನೋಡಿ ಕುಷ್ಠ (ಅಸಂದಿಗ್ಧಕರಣ).
Leprosy (Hansen's disease) | |
---|---|
Classification and external resources | |
![]() A 24-year-old man infected with leprosy. | |
ICD-10 | A30 |
ICD-9 | 030 |
OMIM | 246300 |
MedlinePlus | 001347 |
eMedicine | med/1281 derm/223 neuro/187 |
MeSH | C01.252.410.040.552.386 |
ಚಾರಿತ್ರಿಕವಾಗಿ ಕುಷ್ಠರೋಗವು ಮನು ಕುಲವನ್ನು ೪೦೦೦ [6] ವರ್ಷಗಳಿಂದ ಕಾಡಿದೆ, ಇದು ಪುರಾತನ ಚೈನಾ, ಈಜ್ಯಿಪ್ಟ್, ಮತ್ತು ಭಾರತದಂಥ ನಾಗರೀಕತೆಗಳಲ್ಲಿ ಸ್ಪಷ್ಟವಾಗಿ ಗೋಚರಿಸಿದೆ.[7] ಜೆರುಸಲೇಂನ ಹತ್ತಿರದ ಹಳೆಯ ಪಟ್ಟಣದಲ್ಲಿ ಸಮಾಧಿ ಮಾಡಿದ್ದ ಒಬ್ಬ ಮನುಷ್ಯನ ಹೆಣದ ಹೊದಿಕೆಯಿಂದ ತೆಗೆದ DNAಯನ್ನು ಪರೀಕ್ಷಿಸಿದಾಗ ಆತನಿಗೆ ಕುಷ್ಠರೋಗವು ಇದ್ದುದಾಗಿ ಪತ್ತೆಯಾಯಿತು, ಕಷ್ಠರೋಗವು ದೃಢಪಟ್ಟ ಮೊದಲ ವ್ಯಕ್ತಿ ಈತನಾಗಿರುತ್ತಾನೆ.[8] ೧೯೯೫ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ೨ ರಿಂದ ೩ ದಶ ಲಕ್ಷ ಜನರಿಗೆ ಕುಷ್ಠರೋಗದಿಂದಾಗಿ ಶಾಶ್ವತ ಅಂಗವಿಕಲತೆ ಉಂಟಾಗಿದೆ ಎಂದು ಅಂದಾಜಿಸಿದೆ.[9] ೨೦ ವರ್ಷಗಳಿಂದೀಚೆಗೆ ವಿಶ್ವದಾದ್ಯಂತ 15 ದಶ ಲಕ್ಷ ಜನರಿಗೆ ಕುಷ್ಠರೋಗವು ಗುಣ ಪಡಿಸಲಾಗಿದೆ.[10] ಎಲ್ಲಿ ಸಾಕಷ್ಟು ಔಷಧೋಪಚಾರ ಲಭ್ಯವಿರುತ್ತದೋ ಅಲ್ಲಿ ರೋಗಿಗಳನ್ನು ಬಲವಂತವಾಗಿ ಮೂಲೆಗುಂಪು ಅಥವಾ ಪ್ರತೇಕವಾಗಿರುವ ಅಗತ್ಯವಿಲ್ಲ, ಕಷ್ಠರೋಗಿಗಳ ಕಾಲೋನಿ ಅಥವಾ ಬಡಾವಣೆಗಳು ವಿಶ್ವದಾದ್ಯಂತ ಭಾರತ (ಇಲ್ಲಿ ಇನ್ನೂ 1,000ಕ್ಕೂ ಹೆಚ್ಚು ಕುಷ್ಠರೋಗಿಗಳ ಬಡಾವಣೆ ಅಥವಾ ಕಾಲೋನಿಗಳಿವೆ),[10] ಚೈನಾ,[11] ರೋಮಾನಿಯಾ,[12] ಈಜ್ಯಿಪ್ಟ್, ನೇಪಾಳ, ಸೋಮಾಲಿಯಾ, ಲಿಬರಿಯಾ, ವೀಯೆಟ್ನಾಂ,[13] ಮತ್ತು ಜಪಾನ್[14] ಮುಂತಾದ ರಾಷ್ಟ್ರಗಳಲ್ಲಿ ಇನ್ನೂ ಇದೆ. 1530ರಲ್ಲಿ ವಿವರಿಸಿರುವ ಪ್ರಕಾರ ಈ ಕುಷ್ಠರೋಗವನ್ನು ಅಂಟುಜಾಡ್ಯವೆಂದು ಮತ್ತು ಲೈಂಗಿಕ ಸಂಪರ್ಕದಿಂದ ಬರುವುದೆಂದು ನಂಬಲಾಗಿತ್ತು ಮತ್ತು ಔಷಧೋಪಚಾರವಾಗಿ ಪಾದರಸವನ್ನು ಮತ್ತು ರತಿರೋಗದ ಎಲ್ಲಾ ಮದ್ದುಗಳನ್ನು ಕೊಡಲಾಗುತಿತ್ತು. ಈಗಿನ ಆಲೋಚನೆಯ ಪ್ರಕಾರ ಕುಷ್ಠರೋಗದ ಪ್ರಾರಂಭಿಕ ಕೆಲವು ಉದಾಹರಣೆಗಳಲ್ಲಿ ರತಿರೋಗ ಇರಬಹುದೆಂದು ಭಾವಿಸಲಾಗಿದೆ.[15] ವಾಸ್ತವವಾಗಿ ಕುಷ್ಠರೋಗವು ರತಿರೋಗವೂ ಅಲ್ಲಾ ರೋಗಿಗೆ ಔಷಧೋಪಚಾರ ಪ್ರಾರಂಭವಾದ ನಂತರ ರೋಗ ಹರಡುವುದೂ ಇಲ್ಲ, ಕಾರಣ 95% ಜನರಿಗೆ ಪ್ರತಿರಕ್ಷಣೆ[16] ನೈಸರ್ಗಿಕವಾಗಿ ಇರುತ್ತದೆ ಮತ್ತು ರೋಗಿಗಳು ಕೂಡ ಎರಡು ವಾರದ ಔಷಧೋಪಚಾರಗಳ ನಂತರ ಅವರು ರೋಗ ಹರಡಿಸುವವರಾಗಿರುವುದಿಲ್ಲ. ಆದರೆ ಔಷಧಗಳನ್ನು ಕಂಡು ಹಿಡಿಯುವ ಮುಂಚೆ ಕುಷ್ಠರೋಗವು ಖಂಡಿತ ಸೋಂಕಿನ ರೋಗವಾಗಿತ್ತು.[17][18]
ಸಾಮಾಜಿಕ ಅಪಮಾನ ಅಥವಾ ಇನ್ನೊಂದು ರೀತಿಯಲ್ಲಿ ಕುಷ್ಠರೋಗದ ಅಪಮಾನ[19] ವು ಮುಂದುವರೆದ ಕುಷ್ಠರೋಗಕ್ಕೆ ಕಾರಣವಾಗುತ್ತದೆ ಹೇಗೆಂದರೆ ಆ ರೋಗ ಇದೆಯೆಂದು ತೋರಿಸಿಕೊಳ್ಳುವುದಕ್ಕೇ ಸಂಕೋಚವಾಗಿ ಅಥವಾ ಅಪಮಾನವೆಂದು ಭಾವಿಸಿ ಸುಮ್ಮನಿದ್ದು ಬಿಡುವುದೂ ರೋಗ ಉಲ್ಬಣಗೊಳ್ಳುವುದಕ್ಕೆ ಕಾರಣವಾಗುತ್ತದೆ. 1930ರಲ್ಲಿ ಡ್ಯಾಪ್ಸೋನ್ ಮತ್ತು ಅದರ ಉತ್ಪನ್ನಗಳು ಬಂದ ಮೇಲೆಯೇ ಕುಷ್ಠರೋಗಕ್ಕೆ ಪರಿಣಾಮಕಾರಿ ಔಷಧವು ಬಂದಂತಾಯಿತು. ಏನೇ ಆದರೂ, ಕುಷ್ಠರೋಗ ಬೆಸಿಲ್ಲಿ ಡ್ಯಾಪ್ಸೋನ್ಗೆ ವಿರೋಧವಿರುವುದರಿಂದ ಶೀಘ್ರವಾಗಿ ಅದು ವಿಕಸನ ಹೊಂದಿತು ಮತ್ತು ಡ್ಯಾಪ್ಸೋನ್ನ ಅತೀ ಬಳಕೆಯೂ ವ್ಯಾಪಕವಾಗಿ ಆಯಿತು. 1980ರ ಆರಂಭದಲ್ಲಿ, (MDT) ಮಲ್ಟಿ ಡ್ರಗ್ ಥೆರೆಪಿ ಅಥವಾ ಬಹು ವಿಧದ ಔಷಧೋಪಚಾರವು ಮತ್ತು ರೋಗನಿರ್ಣಯವು ಯಶಸ್ವೀಯಾಗಿ ಆಗುವವರೆಗೂ ಈ ಅತೀ ಬಳಕೆ ಆಗುತ್ತಲ್ಲೇ ಇತ್ತು.[20]
ಮಲ್ಟಿ ಬ್ಯಾಸಿಲ್ಲರಿ ಕುಷ್ಠರೋಗಕ್ಕೆ MDT ಅಥವಾ ಬಹು ವಿಧ ಔಷಧೋಪಚಾರದಲ್ಲಿ ರಿಫಾಂಪಿಸಿನ್, ಡ್ಯಾಪ್ಸೋನ್, ಮತ್ತು ಕ್ಲೋಫಾಜಿಮೈನ್ 12 ತಿಂಗಳವರೆಗೂ ಕೊಡಲಾಗುತ್ತದೆ. ಮಕ್ಕಳಿಗೆ ಮತ್ತು ವಯಸ್ಕರಿಗೆ ಗೊತ್ತು ಮಾಡಿದ ಪ್ರಮಾಣದಲ್ಲಿ ಔಷಧವನ್ನು ಗಾಳಿಗುಳ್ಳೆವುಳ್ಳ ಕಟ್ಟುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಾಗುತ್ತದೆ.[20] ಏಕ ಅಂಗ ಹಾನಿಯಾದ ಕುಷ್ಠರೋಗಿಗೆ ಏಕ ಪ್ರಮಾಣದ MDTಯನ್ನು ಕೊಡಲಾಗುತ್ತದೆ ಅದರಲ್ಲಿ ರಿಫಾಂಪಿಸಿನ್, ಆಫ್ಲಾಕ್ಸಿನ್, ಮತ್ತು ಮೈನೋಸೈಕ್ಲೀನ್ ಒಳಗೊಂಡಿರುತ್ತದೆ.
ಏಕ ಪ್ರಮಾಣದ ಔಷಧದ ದೆಸೆಯಿಂದ ಕೆಲವು ಪ್ರದೇಶಗಳಲ್ಲಿ ಕುಷ್ಠರೋಗದ ಸೋಂಕು ಹರಡುವಿಕೆ ಕಡಿಮೆಗೊಂಡಿದೆ ಕಾರಣ ಈ ಏಕ ಪ್ರಮಾಣದ ಔಷಧವು ಕಾಲ ಅಥವಾ ಅವಧಿಯ ಮೇಲೆ ಅವಲಂಬಿತವಾಗಿದೆ.
ಕುಷ್ಠರೋಗಿಗಳಿಗೆ ಮತ್ತು ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಕುಷ್ಠರೋಗ ದಿನಾಚರಣೆಯನ್ನು ಸೃಷ್ಟಿಸಲಾಯಿತು.