ಕುಂಭ ಮೇಳ
From Wikipedia, the free encyclopedia
ಕುಂಭ ಮೇಳ (ದೇವನಾಗರಿ: कुम्भ मेला) ಹಿಂದೂಧರ್ಮದ ಒಂದು ಸಾಮೂಹಿಕ ತೀರ್ಥಯಾತ್ರೆ. ಕುಂಭ ಮೇಳವನ್ನು ನಾಲ್ಕು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಅರ್ಧ ಕುಂಭ ಮೇಳವನ್ನು ಆರು ವರ್ಷಗಳಿಗೊಮ್ಮೆ ಹರಿದ್ವಾರ ಹಾಗು ಪ್ರಯಾಗದಲ್ಲಿ ಆಚರಿಸಲಾಗುತ್ತದೆ [1], ಪೂರ್ಣ ಕುಂಭ ಹನ್ನೆರಡು ವರ್ಷಗಳಿಗೊಮ್ಮೆ ,[2] ನಾಲ್ಕು (ಪ್ರಯಾಗ (ಅಲ್ಲಹಾಬಾದ್), ಹರಿದ್ವಾರ, ಉಜ್ಜೈನಿ, ಹಾಗು ನಾಸಿಕ) ಸ್ಥಳಗಳಲ್ಲಿ ಆಚರಿಸಲಾಗುತ್ತದೆ. ಮಹಾ ಕುಂಭ ಮೇಳ ೧೨ 'ಪೂರ್ಣ ಕುಂಭ ಮೇಳಗಳ' ನಂತರ, ಅಂದರೆ ೧೪೪ ವರ್ಷಗಳಿಗೊಮ್ಮೆ ಅಲಹಾಬಾದ್ ನಲ್ಲಿ ಆಚರಿಸಲಾಗುತ್ತದೆ.[2][3][4]
ಈ ಹಿಂದಿನ ಅರ್ಧ ಕುಂಭಮೇಳ ಜನವರಿ೨೦೦೭ ರಲ್ಲಿ ೪೫ ದಿನಗಳಕಾಲ ನಡೆಯಿತು. ಇದರಲ್ಲಿ ೧೭ ದಶಲಕ್ಷಹಿಂದೂ ಯಾತ್ರಿಕರು ಪಾಲ್ಗೊಂಡರು, ಈ ಅರ್ಧ ಕುಂಭ ಮೇಳ ಪ್ರಯಾಗದಲ್ಲಿ ನಡಯಿತು, ಹಾಗು ಜನವರಿ ೧೫ ಮಕರ ಸಂಕ್ರಾಂತಿಯಾ, ಅತಿ ಮಂಗಳಕರ ದಿನದಂದು, ೫ ದಶಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಂಡರು.[5]
ಆ ಹಿಂದಿನ ಮಹಾ ಕುಂಭ ಮೇಳ , ೨೦೦೧ ನಡೆಯಿತು. ಇದರಲ್ಲಿ ೬೦ ದಶಲಕ್ಷ ಜನ ಪಾಲ್ಗೊಂಡು,ಇದನ್ನು ಜಗತ್ತಿನಲ್ಲೇ ಅತ್ಯಂತ ದೊಡ ಜನ ಸಮೂಹವನ್ನಾಗಿಸಿದರು.[6][7][8][9]