ಕಿರುಬಿಲ್ಲೆಗಳು, ಅಥವಾ ಥ್ರಾಂಬಸೈಟ್‌ಗಳು, (ಪ್ಲೇಟ್‍ಲೆಟ್‍ಗಳು) ಚಿಕ್ಕ, ವ್ಯಾಸದಲ್ಲಿ ೨-೩ µಮಿ ಇರುವ, ಅಸಮ ಆಕಾರದ, ಜೀವಕಣಕೇಂದ್ರವನ್ನು ಹೊಂದಿರದ, ಪೂರ್ವಗಾಮಿ ಮೆಗಕ್ಯಾರಿಯಸೈಟ್‌ಗಳ ವಿಚ್ಛೇದದಿಂದ ಉದ್ಭವಿಸಿದ ಜೀವಕೋಶಗಳು.[1] ಇವು ಸಣ್ಣ ಸಣ್ಣ ಪೆಪ್ಪರ್‌ಮಿಂಟ್‍ನ ಮಾದರಿಯಲ್ಲಿರುತ್ತವೆ. ಒಂದು ಕಿರುಬಿಲ್ಲೆಯ ಸರಾಸರಿ ಜೀವಾವಧಿ ೮ ರಿಂದ ೧೨ ದಿನಗಳು.[2] ಕಿರುಬಿಲ್ಲೆಗಳು ರಕ್ತಸ್ತಂಭನದಲ್ಲಿ ಮಹತ್ವದ ಪಾತ್ರವಹಿಸುತ್ತವೆ ಮತ್ತು ಬೆಳವಣಿಗೆ ಅಂಶಗಳ ನೈಸರ್ಗಿಕ ಮೂಲಗಳಾಗಿವೆ.[3]
ರಕ್ತದಲ್ಲಿ ಇವುಗಳ ಸಂಖ್ಯೆ ೧.೫ ಲಕ್ಷದಿಂದ ೪.೫ ಲಕ್ಷ ಕ್ಯು. ಮಿಲಿ. ಮೀಟರ್ ಇರುತ್ತದೆ. ಒಂದು ಘನ ಮಿಮೀ ರಕ್ತದಲ್ಲಿ ಸುಮಾರು 8 ಲಕ್ಷದಷ್ಟು ಇರುವ ಇವು ರಕ್ತಕಣಗಳಲ್ಲೆಲ್ಲ ಅತ್ಯಂತ ಸಣ್ಣವು. ಇವುಗಳಲ್ಲಿ ಅಣುಕೇಂದ್ರ ಇರುವುದಿಲ್ಲ. ಬಹುಶಃ ಇವು ಕೆಲವು ವಿಶಿಷ್ಟ ರಾಸಾಯನಿಕಗಳ ಉಗ್ರಾಣಗಳಾಗಿದ್ದು ಛಿದ್ರಣದಿಂದ ಆ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಮುಖ್ಯ ರಾಸಾಯನಿಕಗಳೆಂದರೆ ಥ್ರಾಂಬೊಪ್ಲಾಸ್ಟಿನ್, ಹಿಸ್ಟಮಿನ್, ಸಿರೋಟೋನಿನ್ ಮತ್ತು ಅಡ್ರೀನಲಿನ್. ದೇಹದಲ್ಲಿ ರಕ್ತಸ್ರಾವವಾದಾಗ, ನಿಲ್ಲಿಸುವಲ್ಲಿ, ಗಾಯಗೊಂಡ ರಕ್ತನಾಳಗಳ ಒಳಪದರದ ದುರಸ್ತಿಯಲ್ಲಿ ತಕ್ಷಣ ಭಾಗವಹಿಸುತ್ತವೆ.
ರಕ್ತ ಪರಿಚಲಿಸುತ್ತಿರುವಾಗ ಕಣಿತ್ರಗಳು (ಪ್ಲೇಟ್‌ಲೆಟ್‍ಗಳು) ಬಿಡಿಬಿಡಿಯಾಗಿಯೇ ಇರುವುದಾದರೂ ರಕ್ತದಿಂದ ತೇವವಾಗುವ ಸ್ಥಳದಲ್ಲಿ ಇವು ತಕ್ಷಣ ಒಂದಕ್ಕೊಂದು ಅಂಟಿಕೊಂಡು ಸಣ್ಣ ದೊಡ್ಡ ಗುಂಪುಗಳಾಗುತ್ತದೆ. ಶೀಘ್ರದಲ್ಲಿ ಇವು ಛಿದ್ರಿಸಿ ಇಲ್ಲಿ ತಿಳಿಸಿದ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ಥ್ರಾಂಬೋಪ್ಲಾಸ್ಟಿನ್ ಮತ್ತು ಸಿರೋಟೋನಿನ್‌ಗಳು ರಕ್ತಸ್ರಾವಸ್ತಂಭನಕ್ಕೆ ಕಾರಣವಾಗಿರುವ ರಾಸಾಯನಿಕಗಳೆಂದು ವ್ಯಕ್ತವಾಗಿವೆ. ಕಣಿತ್ರಗಳು ರಕ್ತದಲ್ಲಿ ಪರಿಚಲಿಸುತ್ತಿರುವಾಗಲೂ ನಿರಂತರವಾಗಿ ನಾಶವಾಗುತ್ತಲೇ ಇರುತ್ತವೆ. ನಾಶವಾಗುತ್ತಲೇ ಇರುವ ಕಣಿತ್ರಗಳ ಬದಲು ಸುಮಾರು ಅಷ್ಟೇ ಸಂಖ್ಯೆಯಲ್ಲಿ ನಿರಂತವಾಗಿ ಹೊಸ ಕಣಿತ್ರಗಳು ಉದ್ಭವಿಸುವುದರಿಂದ ರಕ್ತದಲ್ಲಿ ಅವುಗಳ ಸಂಖ್ಯಾ ಬದಲಾವಣೆ ಅಷ್ಟಾಗಿ ಕಂಡುಬರುವುದಿಲ್ಲ. ಮೂಳೆಮಜ್ಜೆ ಹಾಗೂ ಗುಲ್ಮದಲ್ಲಿ ಇರುವ ಬಹುಕೋಶ ಕೇಂದ್ರಗಳಿರುವ ಮತ್ತು ಅಮೀಬದಂಥ, ಚಟುವಟಿಕೆ ತೋರುವ ದೈತ್ಯಕೋಶಗಳ (ಜಯಂಟ್ ಸೆಲ್ಸ್) ಚಾಟುಗಳ ಛಿದ್ರತೆಯಿಂದ ಬಿಡುಗಡೆಯಾದ ಚೂರುಗಳಾಗಿ ಕಣಿತ್ರಗಳು ಉದ್ಭವಿಸುತ್ತವೆ.
೫೦,೦೦೦ ಕ್ಯು. ಮಿಲಿ ಮೀಟರ್ ಗಿಂತ ಕ್ಕಿಂತ ಕಡಿಮೆಯಾದಲ್ಲಿ, ಪರ್ಪೂರ ಎಂಬ ಕಾಯಿಲೆ ಬಂದು, ರಕ್ತಸ್ರಾವ ಸ್ಥಗಿತಗೊಳ್ಳಲು ತಡವಾಗುವುದಲ್ಲದೆ, ಮೂಗಿನಿಂದ ರಕ್ತ ಬರಲೂಬಹುದು. ಚರ್ಮದ ಕೆಳಗೆ, ಕೀಲುಗಳಲ್ಲಿ ಸ್ವಲ್ಪ ಪೆಟ್ಟಾದರೂ, ರಕ್ತಸ್ರಾವವಾಗುತ್ತದೆ.
ಉಲ್ಲೇಖಗಳು
Wikiwand in your browser!
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.