ಕಾಲಜನ್
From Wikipedia, the free encyclopedia
ಕಾಲಜನ್ ನೈಸರ್ಗಿಕವಾಗಿ ಸಿಗುವ ಪ್ರೋಟೀನಿನ ಒಂದು ಗುಂಪು. ಪ್ರಕೃತಿಯಲ್ಲಿ ಇದು ಪ್ರಾಣಿಗಳಲ್ಲಿ ವಿಶೇಷವಾಗಿ ಕಾಣಿಸುತ್ತದೆ.[1] ಇದು ನವಿರಾದ ನಾರುಳ್ಳ (ಕನೆಕ್ಟಿವ್ ಟಿಸ್ಯು, ಟಿಸ್ಯು- ಅಂಗಾಂಶ) ಮುಖ್ಯವಾದ ಪ್ರೋಟೀನು. ಇದು ಸಸ್ತನಿಗಳಲ್ಲಿ ಹೇರಳವಾಗಿ ಸಿಗುವ ಪ್ರೋಟೀನ್.[2] ಸಸ್ತನಿಗಳ ಇಡೀ-ದೇಹದ ಪ್ರೋಟೀನ್ ಅಂಶದಲ್ಲಿ ಇದು ಶೇಕಡಾ 25ರಿಂದ 30ರಷ್ಟಿರುತ್ತದೆ. ಇದು ಸ್ನಾಯು ಅಂಗಾಂಶದ (ಮಸಲ್ ಟಿಸ್ಯು) ಎಂಡೋಮೈಸಿಯಮ್ ನ ಮುಖ್ಯವಾದ ಅಂಶ. ಸ್ನಾಯು ಸಂಬಂಧಿತ ಅಂಗಾಂಶದಲ್ಲಿ 1% ರಿಂದ 2% ಭಾಗ ಕಾಲಜನ್ ಇರುತ್ತದೆ; ಇದಲ್ಲದೆ,ಗಟ್ಟಿಮುಟ್ಟಾದ ಸ್ನಾಯು ತಂತುಗಳಿಂದ ಕೂಡಿದ ಸ್ನಾಯುಗಳ ತೂಕದ 6% ತೂಕಕ್ಕೆ ಕಾಲಜನ್ ಕಾರಣ.[3] ಆಹಾರ ಮತ್ತು ಉದ್ಯಮಗಳಲ್ಲಿ ಬಳಸುವ ಜೆಲಟಿನ್ ಯನ್ನು ಕಾಲಜಿನ್ ನಿಂದ ಉತ್ಪತ್ತಿ ಮಾಡಲಾಗುತ್ತದೆ.