From Wikipedia, the free encyclopedia
ನಿಯಮಗಳ ಕ್ರಮಬದ್ಧ ಜೋಡಣೆಯೇ ಕಾನೂನು. ಕಾನೂನಿನ ವಿವಿಧ ಸಂಸ್ಥೆಗಳ ಮೂಲಕ ಕಾನೂನನ್ನು ಜಾರಿ ಮಾಡಲಾಗುತ್ತದೆ. ನಮ್ಮ ಜೀವನ ಮತ್ತು ಸಮಾಜವನ್ನು ಕಾನೂನು ಹಲವು ರೀತಿಗಳಲ್ಲಿ ಪರಿಣಾಮ ಬೀರುತ್ತದೆ. ಕರಾರು ಕಾನೂನು ಬಸ್ ಟಿಕೆಟ್ ಪಡೆಯುವುದರಿಂದ ಹಿಡಿದು ಆಸ್ತಿ ಕೊಳ್ಳುವುದರ ತನಕ ಸಹಾಯ ಮಾಡುತ್ತದೆ. ಆಸ್ತಿ ಕಾನೂನು ಒಂದು ಆಸ್ತಿಯ ಒಡೆತನದ ಹಕ್ಕು, ಹೊಣೆಗಾರಿಕೆ ಇತ್ಯಾದಿಗಳ ಬಗ್ಗೆ ವಿವರಿಸುತ್ತದೆ. ಅಪಕೃತ್ಯ ಕಾನೂನು ಖಾಸಗಿ ಮತ್ತು ಕಾನೂನು ಹಕ್ಕುಗಳಿಗೆ (private and legal rights) ಚ್ಯುತಿ (injury) ಬಂದಾಗ ಉಪಯೋಗಿಸಲಾಗುತ್ತದೆ. ಅಪರಾಧ ಕಾನೂನಿನಲ್ಲಿ ಮಾಡಿದ ತಪ್ಪುಗಳಿಗೆ ದಂಡನೀತಿಯ (penal code) ಪ್ರಕಾರ ಶಿಕ್ಷೆ ನೀಡಲಾಗುತ್ತದೆ. ಸಾಂವಿಧಾನಿಕ ಕಾನೂನು ಯಾವುದೇ ರಾಷ್ಟ್ರದಲ್ಲಿ ತನ್ನ ಸಂವಿಧಾನದ ಚೌಕಟ್ಟಿನೊಳಗೆ ಬೇರೆಯ ಕಾನೂನುಗಳನ್ನು ಸೃಷ್ಟಿ ಮಾಡುವ ಬಗ್ಗೆ ಮತ್ತು ಜನರ ಹಕ್ಕುಗಳನ್ನು ಕಾಪಾಡುವ ಬಗ್ಗೆ ವಿವರಿಸುತ್ತದೆ. ಆಡಳಿತ ಕಾನೂನು ಸರ್ಕಾರದ ಆಡಳಿತ ಸಂಸ್ಥೆಗಳ ಕಾರ್ಯ ಛಟುವಟಿಕೆ ಮತ್ತು ಕ್ರಮಗಳ ಬಗ್ಗೆ ವಿವರಿಸುತ್ತದೆ. ಸರ್ಕಾರಿ ಸಂಸ್ಥೆಗಳು ತಮ್ಮ ಕಾರ್ಯನೀತಿಗಳಲ್ಲಿ ನಿಯಮ ರೂಪಿಸುವುದು ಮತ್ತು ಪರಿಪಾಲನೆ ಮಾಡುವುದು ಎಲ್ಲವೂ ಸೇರಿರುತ್ತದೆ. ಅಂತರರಾಷ್ಟ್ರೀಯ ಕಾನೂನು ಸಾರ್ವಭೌಮ ರಾಷ್ಟ್ರಗಳ ನಡುವಿನ ಉದ್ಯಮ, ಸೇನೆ, ಪರಿಸರ ಮತ್ತು ಇತರ ವಿಷಯಗಳ ಬಗ್ಗೆ ವಿವರಿಸುತ್ತದೆ. ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ "ಕಾನೂನಿನ ಆಡಳಿತವು ಒಬ್ಬ ಮನುಷ್ಯನ ಆಡಳಿತಕ್ಕಿಂತ ಉತ್ತಮ" ಎಂದು ಹೇಳಿದ್ದಾನೆ.[2]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.