ಕಪ್ಪೆ
From Wikipedia, the free encyclopedia
ಕಪ್ಪೆ [1]ಒಂದು ಉಭಯವಾಸಿ ಅನುರ ಗಣಕ್ಕೆ (ಆರ್ಡರ್) ಸೇರಿದ ಬಹುತೇಕ ಮಾಂಸಾಹಾರಿ ಜೀವಿ. ಇದಕ್ಕೆ ಬಾಲವಿರುವುದಿಲ್ಲ. ಕಪ್ಪೆಗಳು ಸಾಮಾನ್ಯವಾಗಿ ನೀರಿನಲ್ಲಿ ಮೊಟ್ಟೆ ಇಡುತ್ತವೆ ಮತ್ತು ಮೊಟ್ಟೆಗಳು ಗೊದಮೊಟ್ಟೆ ಮರಿಗಳಾಗಿ (ಟಾಡ್ಪೋಲ್) ಹೊರಹೊಮ್ಮುತ್ತವೆ. ಈ ಗೊದಮೊಟ್ಟೆ ಮರಿಗಳು ಕಪ್ಪೆಮರಿಗಳಾಗಿ ರೂಪಾಂತರ ಹೊಂದುವುದರೊಂದಿಗೆ ಅವುಗಳ ಜೀವನ ಚಕ್ರ ಪೂರ್ಣವಾಗುತ್ತದೆ. ಕೆಲವೊಂದು ಭೂಮಿಯ ಮೇಲೆ ಮೊಟ್ಟೆಗಳನ್ನಿಡುತ್ತವೆ.
Quick Facts Scientific classification, ಉಪಗಣಗಳು ...
Close
ಕಪ್ಪೆಗಳು ಸಿಹಿನೀರಿನಲ್ಲಿ ಅಲ್ಲದೆ ನೆಲದ ಮೇಲೂ ಬದುಕುತ್ತವೆ. ಕೆಲವು ಕಪ್ಪೆಗಳು ನೆಲದಾಳದಲ್ಲಿ ಮತ್ತು ಮರಗಳಲ್ಲಿ ಬದುಕಲು ಹೊಂದಿಕೊಂಡಿವೆ. ಇವು ಶೀತರಕ್ತದ ಪ್ರಾಣಿಗಳು. ಬಿಸುಪು ಪಡೆಯಲು ಇವು ಸೂರ್ಯನ ಬೆಳಕಿಗೊ ಅಥವಾ ಬಿಸುಪಿನ ಮೇಲ್ಮೈಗೊ ಹೋಗುತ್ತವೆ. ಹೆಚ್ಚು ಬಿಸಿಯಾದಾಗ ಅವು ನೆರಳಿಗೆ ಸರಿಯುತ್ತವೆ ಅಥವಾ ಚರ್ಮದ ಕನಿಷ್ಠ ಪ್ರದೇಶವನ್ನು ಗಾಳಿಗೆ ಒಡ್ಡುವ ಮೂಲಕ ತೇವಾಂಶ ಕಳೆದುಹೋಗುವಿಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತವೆ.