ಕಡಲೇಕಾಯಿ
From Wikipedia, the free encyclopedia
From Wikipedia, the free encyclopedia
ಕಡಲೇಕಾಯಿ ಕಡಲೆಕಾಯಿ ಎಂದೂ ಕರೆಯಲ್ಪಡುವ ನೆಲಗಡಲೆ ಸಾಮಾನ್ಯವಾಗಿ ಅಗ್ಗವಾಗಿ ಲಭ್ಯವಿದೆ ಮತ್ತು ಆದ್ದರಿಂದ ಅವುಗಳನ್ನು ಹೆಚ್ಚು ವೆಚ್ಚವಾಗದ ಯಾವುದನ್ನೂ ಸೂಚಿಸಲು ಬಳಸಲಾಗುತ್ತದೆ. ಆದರೆ ಆರೋಗ್ಯ ಪ್ರಯೋಜನಗಳಿಗೆ ಬಂದಾಗ ಅವರು ಪಂಚ್ ಅನ್ನು ಪ್ಯಾಕ್ ಮಾಡುತ್ತಾರೆ.
ಫ್ಯಾಬೇಸೆ ಕುಟುಂಬಕ್ಕೆ ಸೇರಿರುವ ಒಂದು ಸಸ್ಯ ಪ್ರಜಾತಿ. ಮಧ್ಯ ಮತ್ತು ದಕ್ಷಿಣ ಅಮೇರಿಕಗಳ ಮೂಲದಲ್ಲಿರುವ ಈ ಗಿಡದ ಬೀಜವನ್ನು ಮುಖ್ಯವಾಗಿ ಎಣ್ಣೆ ತಯಾರಿಸಲು ಮತ್ತು ಆಹಾರದಲ್ಲಿ ಉಪಯೋಗಿಸುತ್ತಾರೆ. ಹಳ್ಳಿಗಾಡಿನ ಜನರು ಸಾಮಾನ್ಯವಾಗಿ ತಮ್ಮ ತಮ್ಮ ಹೊಲಗಳಲ್ಲಿ ತಮ್ಮ ಮನೆಗಳಿಗೆ ಬೇಕಾಗುವಷ್ಟು ಇದನ್ನು ಬೆಳೆದುಕೊಳ್ಳುತ್ತಾರೆ, ಇದು ಚಳಿಗಾಲಕ್ಕೆ ಸರಿಯಾಗಿ ತಿನ್ನಲು ಸಿಗುತ್ತದೆ. ಕಡಲೆಕಾಯಿ ಗಿಡದ ಸಸ್ಯ ಶಾಸ್ತ್ರ ಹೆಸರು 'ಆರಾಚಿಸ್ ಹೈಪೋಜಿಯಾ ಲೆಗುಮ್ '(Arachis hypogaea legume). ಕಡಲೆಕಾಯಿ ಬಿತ್ತನೆಯಲ್ಲಿ ೫೦%ಕ್ಕೆ ಹೆಚ್ಚಾಗಿ ಇರುತ್ತದೆ. ಬೀಜದಲ್ಲಿ ಪ್ರೋಟಿನ್ ೩೦% ಶೇಕಡ ಇದ್ದು, ಎಣ್ಣೆ ತೆಗೆದ ಮೇಲೆ ೫೦% ರಷ್ಟು ಇರುತ್ತದೆ. ಹಸಿ ಮಣ್ಣು(loose soil) ಇರುವ ನೆಲಗಳು ಇದಕ್ಕೆ ಅನುಕೂಲ. ಉಷ್ಣಮಂಡಲ ಭೂಮಿಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇಂಡಿಯಾ, ಚೈನಾ, ದಕ್ಷಿಣ ಏಷಿಯಾ, ಆಗ್ನೇಯ ಏಷಿಯಾ ಖಂಡ/ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಗುವಳಿಯಲ್ಲಿದೆ.
ಕಡಲೆಕಾಯಿ ಬೀಜವನ್ನು ಬಿತ್ತಿದ ಮೇಲೆ , ಅಂಕುರ ಸಮಯದಲ್ಲಿ ವಾತಾವರಣದಲ್ಲಿ ತಾಪಮಾನ ೧೪-೧೬೦C ಇರಬೇಕಾಗುತ್ತದೆ. ಕಾಯಿ ಬರುವ ಸಮಯದಲ್ಲಿ ತಾಪಮಾನ ೨೩-೨೫೦C ಇದ್ದರೆ ಒಳ್ಳೆಯದು. ಪೈಯಿರಿನ ಸಮಯದಲ್ಲಿ ವರ್ಷಪಾತ ೧೨.೫-೧೭.೫ ಸೆಂ.ಮೀ,ಇರಬೇಕು. ಇದ್ದರೆ ಫಸಲು ಹೆಚ್ಚಾಗಿ ಬರುತ್ತದೆ. ಬಿತ್ತುವ ಸಮಯದಲ್ಲಿ ೧೨.೫-೧೭.೫ ಸೆಂ.ಮೀ, ಬೆಳೆ ಸಮಯದಲ್ಲಿ ೩೭-೬೦ ಸೆಂ.ಮೀ. ಮಳೆ ಇದ್ದರೆ ಹಿತಕರವಾಗುತ್ತದೆ. ಕಡಲೆಕಾಯಿ ಪೈರನ್ನು ಎಲ್ಲಾ ಋತುಗಳಲ್ಲಿ ಸಾಗುವಳಿ ಮಾಡಬಹುದು. ಆದರೆ ಮಳೆಕಾಲದಲ್ಲಿ(ಖರೀಪ್ ಸೀಜನ್)ಹೆಚ್ಚಾಗಿ ೮೦% ವರೆಗೆ ಸಾಗುವಳಿ ಮಾಡುವುದುಂಟು. ದಕ್ಷಿಣ ಭಾರತದಲ್ಲಿ ಖರೀಫ್ ಮತ್ತು ರಬೀ ಎರಡು ಋತುಗಳಲ್ಲೀ ಸಾಗುವಳಿ ಮಾಡುತ್ತಾರೆ. ನೀರಾವರಿ ಇರುವ ಪ್ರದೇಶದಲ್ಲಿ ಜನವರಿ-ಮಾರ್ಚಿ ತಿಂಗಳುಗಳ ಮಧ್ಯ ಕಾಲದಲ್ಲಿ ,ಕಡಿಮೆ ಸಮಯಕ್ಕೆ ಫಸಲಿಗೆ ಬರುವ ಜಾತಿ ಬೀಜಗಳನ್ನು ಬಿತ್ತುತ್ತಾರೆ. ಕಡಲೆಕಾಯಿ ಬೀಜದಲ್ಲಿ ಪ್ರೋಟಿನ್, ಎಣ್ಣೆ, ಕಾರ್ಬೋಹೈಡ್ರೇಟು ಮತ್ತು ವಿಟಮಿನುಗಳು ಹೆಚ್ಚಾಗಿರುತ್ತವೆ. ಆದ್ದರಿಂದ ಕಡಲೆಕಾಯಿ ಬಲವರ್ಧಕ ಆಹಾರವಾಗಿದೆ. ಕಡಲೆಕಾಯಿ ಕಾಳು (kernel:ಹೊಟ್ಟನ್ನು ತೆಗೆದ ಬೀಜ)ದಲ್ಲಿ ೪೫-೫೦%ಎಣ್ಣೆ,೨೫-೩೦% ಪ್ರೋಟಿನುಗಳಿರುತ್ತವೆ. ಫಸಲು ಕಾಲ ೯೦-೧೫೦ದಿನಗಳು. ಗುಂಚೆ ತರಹೆ(Bunch type)ಪಯಿರು ೯೦-೧೨೦ದಿವಸಕ್ಕೆ, ಹರಡುವಿಕೆ(spread type)ಪಯಿರು ೧೩೦-೧೫೦ ದಿವಸಕ್ಕೆ ಫಸಲು ಬರುತ್ತವೆ. ಮೇಲೆ ಹೇಳಿದ ಎರಡು ಪ್ರಭೇದಗಳನ್ನು ಮಳೆಕಾಲದಲ್ಲಿ ಸಾಗುವಳಿ ಮಾಡುತ್ತಾರೆ. ಆಗ ಸಂಕರ ಪ್ರಭೇಧ ಬೀಜಗಳನ್ನು ಸಾಗುವಳಿ ಮಾಡುವುದರಿಂದ ಹೆಚ್ಚಿನ ಫಸಲು ಬರುತ್ತದೆ. ಸಾಧಾರಣ ತರಹದಿಂದ ೫೦೦-೬೦೦ ಕೆ.ಜಿ ಎಕರೆ ಇಳುವರಿ ಆದರೆ ಹೈಬ್ರೀಡ್ ಬೀಜಗಳನ್ನು ಬಳಸುವುದರಿಂದ ಎಕರೆ ೯೦೦-೧೨೦೦ಕೆ.ಜಿ ಇಳುವರಿ ಬರುತ್ತದೆ. ಕಾಯಿಯಲ್ಲಿ ಹೊಟ್ಟು(shell,husk)೨೫-೩೦%,ಕಾಳು ೭೦-೭೫% ಇರುತ್ತವೆ.
ಕೇಲವು ಹೈಬ್ರಿಡ್ ಕಡಲೆಕಾಯಿ ಪ್ರಭೇದಗಳ ಬಗ್ಗೆ ಕೆಳಗೆ ಬರೆಯಲಾಗಿದೆ.
ಇದು ಹೆಚ್ಚಿನ ಇಳುವರಿ ಕೊಡುವ ರಕಂ/ಜಾತಿಯ ಗಿಡವಾಗಿದೆ. ಜೇಡ, ಫೀಡಗಳನ್ನು ತಡೆ ಹಿಡಿಯುತ್ತದೆ. ಖರೀಫ್ ಕಾಲದಲ್ಲಿ ಸಾಗುವಳಿ ಮಾಡಿವರು. ಫಸಲು ಕಾಲ ೧೨೦ ದಿವಸಗಳು. ಬಿಸಿಲು ಕಾಲದಲ್ಲಿಯು ಸಾಗುವಳಿ ಮಾಡಬಹುದು. ಈ ಜಾತಿಯ ಬೀಜವನ್ನು ಮಹಾರಾಷ್ಟ್ರದಲ್ಲಿ ಸಾಗುವಳಿ ಮಾಡಿದಾಗ ಹೆಕ್ಟೇರಿಗೆ ೩ ರಿಂದ ೪ ಟನ್ನುಗಳ ಇಳುವರಿ ಬಂದಿದೆ. [[ಆಂಧ್ರ ಪ್ರದೇಶ]ಮತ್ತು ಕರ್ನಾಟಕದಲ್ಲಿ ಟ್ರಯಲ್ ರನ್ ಸಾಗುವಳಿಯಲ್ಲಿ ಹೆಕ್ಟೇರಿಗೆ ೨.೫ಟನ್ನು ಗಳ ಇಳುವರಿ ಬಂದಿದೆ. ಕಾಯಿಯಲ್ಲಿ ಕಾಳು ೭೦%,ಮತ್ತು ಹೊಟ್ಟು ೩೦% ಇರುತ್ತವೆ.
ಇದು ಹೆಚ್ಚಿನ ಇಳುವರಿ ಕೊಡುವ ಜಾತಿ. ಫಸಲು ಕಾಲ ೧೨೦ದಿನಗಳು. ಬೇಸಗೆ ಕಾಲದಲ್ಲಿ ಸಾಗುವಳಿ ಮಾಡುವುದಕ್ಕೆ ಅನುಕೂಲಕರವಾದದ್ದು. ಮಳೆ ಕಡಿಮೆ ಬೀಳದಿದ್ದರೂ ಪರವಾಗಿಲ್ಲ. ತೊಂದರೆಯೆನಿಲ್ಲ. ಒಂದು ಹೆಕ್ಟೇರಿಗೆ ಅಂದಾಜಾಗಿ ೩-೪ ಟನ್ನುಗಳ ಇಳುವರಿ ಬರುತ್ತದೆ. ಕಾಯಿಯಲ್ಲಿ ಕಾಳು ೭೦% ಮತ್ತು ಹೊಟ್ಟು ೩೦%.
ಇದು ಗುಂಚೆರಕಂಕು ಸೇರಿದ ಪ್ರಭೇದ. ಫಸಲು ಕಾಲ ೯೬-೧೨೩ ದಿನಗಳು. ಜೇಡ, ಫೀಡಗಳನ್ನು ತಡೆ ಹಿಡಿಯುತ್ತದೆ. ಇಳುವರಿ ಒಂದು ಹೆಕ್ಟೇರಿಗೆ ೩ ಟನ್ನು ಸಿಗುತ್ತದೆ. ಈ ಜಾತಿ ಯನ್ನು ಹೆಚ್ಚಾಗಿ ಆಂಧ್ರ, ಕರ್ನಾಟಕ, ಕೇರಳ,ಮತ್ತು ತಮಿಳುನಾಡುನಲ್ಲಿ ಸಾಗುವಳಿ ಮಾಡುವರು.
ICGV 91114: ಇದು ಗುಂಚೆ ಜಾತಿಗೆ ಹೊಂದಿದ/ಸೇರಿದ ಗಿಡ. ಫಸಲು ಸಮಯ ೧೦೦ದಿವಸಗಳು. ನೀರು ಕಡಿಮೆ(ಮಳೆ ಕಡಿಮೆ ಆದರು)ಆದರು ತಾಳಿಕೊಳ್ಳುತ್ತದೆ. ಫಸಲು ಇಳುವರಿ ಒಂದು ಹೆಕ್ಟೇರಿಗೆ ೨.೫ ನಿಂದ ೩.೦ಟನ್ನುಗಳು. ಬೀಜ ದೊಡ್ಡದಾಗಿ ಇರುತ್ತವೆ.
ICGV 89104: ಇದು ಕೂಡ ಗುಂಚೆ ಪ್ರಭೇದಕ್ಕೆ ಸೇರಿದ ಗಿಡ. ಫಸಲು ಕಾಲ ೧೧೦-೧೨೦ ದಿನಗಳು. ಅಪ್ಲೋಟಾಕ್ಸಿ, ಅಸ್ಪರಿಗಿಲ್ಲಸ್, ಫಂಗಸ್ ಅಂತಹ ವ್ಯಾಧಿಗಳನ್ನು ತಡೆದು ಕೊಳ್ಳುತ್ತದೆ. ಇಳುವರಿ ಒಂದು ಹೆಕ್ಟೇರಿಗೆ ೨.೦ ಟನ್ನುಗಳು. ಕಾಯಿಯಲ್ಲಿ ಕಾಳು ೬೮% ಇರುತ್ತದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.