![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/c/c3/Kurunji._..jpg/640px-Kurunji._..jpg&w=640&q=50)
ಎರವಿಕುಲಂ ರಾಷ್ಟ್ರೀಯ ಉದ್ಯಾನ
From Wikipedia, the free encyclopedia
ಎರವಿಕುಲಂ ರಾಷ್ಟ್ರೀಯ ಉದ್ಯಾನವು ಭಾರತದಲ್ಲಿರುವ ಕೇರಳದ ಇಡುಕ್ಕಿ ಮತ್ತು ಎರ್ನಾಕುಲಂ ಜಿಲ್ಲೆಗಳ ಪಶ್ಚಿಮ ಘಟ್ಟಗಳ ಉದ್ದಕ್ಕೂ ಸ್ಥಿತವಾಗಿರುವ ೯೭ ಚದರ ಕಿ. ಮೀ. ನ ರಾಷ್ಟ್ರೀಯ ಉದ್ಯಾನವಾಗಿದೆ.[1][2] ಈ ಉದ್ಯಾನವನವು ೧೦°೦೫′ ಮತ್ತು ೧೦°೨೧′ ಉತ್ತರ ಹಾಗೂ ೭೭°೦′ ಮತ್ತು ೭೭°೧೦′ ಪೂರ್ವದ ನಡುವೆ ನೆಲೆಗೊಂಡಿದೆ. ಇದು ಕೇರಳದ ಮೊದಲ ರಾಷ್ಟ್ರೀಯ ಉದ್ಯಾನವನವಾಗಿದೆ. ಇದನ್ನು ೧೯೭೮ರಲ್ಲಿ ಸ್ಥಾಪಿಸಲಾಯಿತು.
![ಎರವಿಕುಲಂ ರಾಷ್ಟ್ರೀಯ ಉದ್ಯಾನ](http://upload.wikimedia.org/wikipedia/commons/thumb/c/c3/Kurunji._..jpg/640px-Kurunji._..jpg)
ಎರವಿಕುಲಂ ರಾಷ್ಟ್ರೀಯ ಉದ್ಯಾನವನ್ನು ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆ, ಮುನ್ನಾರ್ ವನ್ಯಜೀವಿ ವಿಭಾಗವು ನಿರ್ವಹಿಸುತ್ತದೆ. ಈ ವಿಭಾಗವು ಹತ್ತಿರದ ಮತ್ತಿಕೆಟ್ಟನ್ ಶೋಲಾ ರಾಷ್ಟ್ರೀಯ ಉದ್ಯಾನವನ, ಆನೆಮುಡಿ ಶೋಲಾ ರಾಷ್ಟ್ರೀಯ ಉದ್ಯಾನವನ, ಪಂಬಡುಂ ಶೋಲಾ ರಾಷ್ಟ್ರೀಯ ಉದ್ಯಾನ, ಚಿನ್ನಾರ್ ವನ್ಯಜೀವಿ ಅಭಯಾರಣ್ಯ ಮತ್ತು ಕುರಿಂಜೀಮಾಲಾ ಅಭಯಾರಣ್ಯಗಳನ್ನು ಸಹ ನಡೆಸುತ್ತದೆ.[3]