ಉಪಚಾರ
From Wikipedia, the free encyclopedia
ಹಿಂದೂ ಧರ್ಮದಲ್ಲಿ, ಉಪಚಾರ (ಸೇವೆ ಅಥವಾ ಸೌಜನ್ಯ)[1] ಶಬ್ದವು ಪೂಜೆಯ ಭಾಗವಾಗಿ ದೇವರಿಗೆ ಮಾಡಲಾದ ಅರ್ಪಣೆಗಳು ಮತ್ತು ಸೇವೆಗಳನ್ನು ಸೂಚಿಸುತ್ತದೆ.
ಉಪಚಾರಗಳು ಪ್ರಾರ್ಥನೆಯ ರೂಪಕ್ಕೆ ಅನುಗುಣವಾಗಿ ಬದಲಾಗುತ್ತಾವಾದರೂ, ಒಬ್ಬ ಗೌರವಾನ್ವಿತ ಅತಿಥಿಯನ್ನು ಸ್ವಾಗತಿಸುವ ಪ್ರಕ್ರಿಯೆಗೆ ಸದೃಶವಾದ ೧೬ ಉಪಚಾರಗಳ ಒಂದು ಸಾಮಾನ್ಯ ಪಟ್ಟಿ ಮುಂದಿದೆ:[2][3]
- ಆವಾಹನೆ: ದೇವರನ್ನು ಆಹ್ವಾನಿಸುವುದು
- ಆಸನ: ದೇವರಿಗೆ ಕೂಡಲು ಪೀಠವನ್ನು ನೀಡುವುದು
- ಪಾದ್ಯ: ಪಾದಗಳನ್ನು ತೊಳೆಯಲು ನೀರು ಕೊಡುವುದು
- ಅರ್ಘ್ಯ: ಪಾನೀಯವನ್ನು ನೀಡುವುದು
- ಆಚಮನೀಯ: ಬಾಯಿ ತೊಳೆಯಲು ನೀರು ಕೊಡುವುದು
- ಸ್ನಾನ ಅಥವಾ ಅಭಿಷೇಕ: ಸ್ನಾನ ಮಾಡುವುದು
- ವಸ್ತ್ರ: ಬಟ್ಟೆ ಅಥವಾ ಉಡುಪನ್ನು ನೀಡುವುದು
- ಯಜ್ಞೋಪವೀತ ಅಥವಾ ಮಂಗಳಸೂತ್ರ: ಪವಿತ್ರ ದಾರವನ್ನು ಧರಿಸುವುದು
- ಅನುಲೇಪನ ಅಥವಾ ಗಂಧ: ಸುಗಂಧದ್ರವ್ಯವನ್ನು ಸಿಂಪಡಿಸುವುದು
- ಪುಷ್ಪ: ಹೂವುಗಳನ್ನು ನೀಡುವುದು
- ಧೂಪ: ಧೂಪದ್ರವ್ಯವನ್ನು ಬೆಳಗುವುದು
- ದೀಪ ಅಥವಾ ಆರತಿ: ದೇವರ ಮುಂದೆ ಎಣ್ಣೆಯ ದೀಪವನ್ನು ಬೆಳಗುವುದು
- ನೈವೇದ್ಯ: ಆಹಾರ ಅರ್ಪಿಸುವುದು
- ನಮಸ್ಕಾರ ಅಥವಾ ಪ್ರಣಾಮ: ಗೌರವಯುತ ಸಾಷ್ಟಾಂಗವೆರಗುವಿಕೆ ಅಥವಾ ವಂದನೆ
- ಪರಿಕ್ರಮ ಅಥವಾ ಪ್ರದಕ್ಷಿಣೆ. ಸುತ್ತ ತಿರುಗುವುದು
- ವಿಸರ್ಜನೆ: ಬೀಳ್ಕೊಡುವುದು.