ಆಯ್ಸ್ಟನ್ ಮಾರ್ಟೀನ್
ಆಂಗ್ಲ ವಾಹನ ಉದ್ಯಮ ಕಂಪನಿ / From Wikipedia, the free encyclopedia
ಆಯ್ಸ್ಟನ್ ಮಾರ್ಟೀನ್ ಲಗೊಂಡ ಲಿಮಿಟೆಡ್. ಐಷಾರಾಮಿ ಸ್ಪೋರ್ಟ್ಸ್ಕಾರುಗಳ ಬ್ರಿಟೀಷ್ ತಯಾರಕರಾಗಿದ್ದು, ವಾರ್ವಿಕ್ಶೈರ್ನ ಗೇಡನ್ನಲ್ಲಿದೆ. ಈ ಕಂಪನಿಯ ಹೆಸರು, ಈ ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರಾದ ಲಿಯೋನೆಲ್ ಮಾರ್ಟಿನ್ ಮತ್ತು ಬಕ್ಕಿಂಗ್ಹ್ಯಾಮ್ಶೈರ್ನಲ್ಲಿರುವ [2]ಆಸ್ಟನ್ ಕ್ಲಿಂಟನ್ ಹತ್ತಿರವಿರುವ ಆಸ್ಟನ್ ಹಿಲ್ ಸ್ಪೀಡ್ ಹಿಲ್ ಕ್ಲೈಂಬ್ನಿಂದ ಬಂದಿದೆ.1994ರಿಂದ 2007ರ ವರೆಗೆ ಆಯ್ಸ್ಟನ್ ಮಾರ್ಟೀನ್ ಫೋರ್ಡ್ ಮೋಟಾರ್ ಕಂಪೆನಿಯ ಭಾಗವಾಗಿತ್ತು ಹಾಗೂ 2000ದಲ್ಲಿ ಕಂಪೆನಿಯ ಪ್ರೀಮಿಯರ್ ಆಟೋಮೋಟಿವ್ ಗ್ರೂಪ್ನ ಭಾಗವಾಗಿತ್ತು. ಇದನ್ನು ಮಾರ್ಚ್ 12, 2007ರಲ್ಲಿ ಡೇವಿಡ್ ರಿಚರ್ಡ್ಸ್ ಮುಖ್ಯಸ್ಥರಾಗಿರುವ, ಕುವೈತ್ನ ಇನ್ವೆಸ್ಟ್ಮೆಂಟ್ ದರ್ ಮತ್ತು ಅದೀಮ್ ಇನ್ವೆಸ್ಟ್ಮೆಂಟ್ ಹಾಗೂ ಇಂಗ್ಲೀಷ್ ಉದ್ಯಮಿಯಾದ ಜಾನ್ ಸಿಂಡರ್ಸ್ರ ಸಹಮಾಲೀಕತ್ವಕ್ಕೆ ಒಳಪಟ್ಟಿರುವ ಜಾಯಿಂಟ್ ವೆಂಚರ್ ಕಂಪೆನಿಯು 479 ಮಿಲಿಯನ್ ಪೌಂಡ್ಗಳಿಗೆ ಕೊಂಡುಕೊಂಡಿತು.[3] ಯುಎಸ್$925 ಮಿಲಿಯನ್ನಷ್ಟು ಬೆಲೆಬಾಳುವ ಕಂಪನಿಯನ್ನು ನಷ್ಟಶಂಕೆಯಲ್ಲಿ ಯುಎಸ್$77 ಮಿಲಿಯನ್ಗೆ ಆಯ್ಸ್ಟನ್ ಮಾರ್ಟೀನ್ನಲ್ಲಿ ಫೊರ್ಡ್ ಉಳಿಸಿಕೊಂಡಿತು.[4]
Aston Martin Logo | |
ಸಂಸ್ಥೆಯ ಪ್ರಕಾರ | Private Limited Company |
---|---|
ಸ್ಥಾಪನೆ | 1913 |
ಸಂಸ್ಥಾಪಕ(ರು) | Lionel Martin Robert Bamford |
ಮುಖ್ಯ ಕಾರ್ಯಾಲಯ | Gaydon, Warwickshire, United Kingdom |
ಪ್ರಮುಖ ವ್ಯಕ್ತಿ(ಗಳು) | Dr. Ulrich Bez, CEO Marek Reichman, Director of Design |
ಉದ್ಯಮ | Automotive |
ಉತ್ಪನ್ನ | Automobile |
ಮಾಲೀಕ(ರು) | David Richards John Sinders Investment Dar Adeem Investment[1] |
ಜಾಲತಾಣ | Aston Martin Website for United Kingdom Aston Martin Website for the World |