ಆಂಡಿ ರೊಡ್ಡಿಕ್
From Wikipedia, the free encyclopedia
ಆಂಡ್ರಿವ್ ಸ್ಟೀಫನ್ "ಆಂಡಿ" ರೊಡ್ಡಿಕ್ (1982 ರ ಆಗಸ್ಟ್ 30 ರಂದು ಜನನ), ಅಮೇರಿಕಾದ ವೃತ್ತಿಪರ ಟೆನಿಸ್ ಆಟಗಾರನಾಗಿದ್ದು, ಹಿಂದೆ ಪ್ರಪಂಚದ ನಂ1 ಸ್ಥಾನ ಪಡೆದಿದ್ದನು. ಈತ ಅತ್ಯಂತ ಹೆಚ್ಚು ಶ್ರೇಯಾಂಕದ ಅಮೇರಿಕನ್ ಆಟಗಾರನಾಗಿದ್ದಾನೆ. ಅಲ್ಲದೇ ATP ಟಾಪ್ 10 ನಲ್ಲಿ(ಅಗ್ರ ಪಟ್ಟಿಯಲ್ಲಿ) ಸ್ಥಾನಗಳಿಸಿರುವ ಏಕಮಾತ್ರ ಅಮೇರಿಕನ್ ಟೆನಿಸ್ ಆಟಗಾರನಾಗಿದ್ದಾನೆ. ATP ಶ್ರೇಯಾಂಕದ ಮೂಲಕ 2010 ಆಗಸ್ಟ್ 23 ರಷ್ಟರ ಹೊತ್ತಿಗೆ ಆತ ಪ್ರಪಂಚದಲ್ಲೇ 9 ನೇ ಸ್ಥಾನಗಳಿಸಿದ್ದ. ಜುವಾನ್ ಕಾರ್ಲೋಸ್ ಫೆರೇರೋನನ್ನು ಫೈನಲ್ಸ್ (ಅಂತಿಮ ಪಂದ್ಯದಲ್ಲಿ) ನಲ್ಲಿ ಸೋಲಿಸಿ 2003 ರ US ಓಪನ್ ನಲ್ಲಿ ಪ್ರಶಸ್ತಿ ಗೆದ್ದುಕೊಂಡಾಗ ಈತ ಗ್ರಾಂಡ್ ಸ್ಲಾಮ್ ಸಿಂಗಲ್ಸ್ ನ ಚಾಂಪಿಯನ್ ಎನಿಸಿಕೊಂಡ. ರೊಡ್ಡಿಕ್ ಇತರ ನಾಲ್ಕು ಗ್ರಾಂಡ್ ಸ್ಲಾಮ್ ಫೈನಲ್ಸ್ ಅನ್ನು ಪ್ರವೇಶಿಸಿದ್ದಾನೆ.(ವಿಂಬಲ್ಡನ್ನಲ್ಲಿ ಮೂರು ಬಾರಿ ಹಾಗು US ಓಪನ್ ನಲ್ಲಿ ಒಮ್ಮೆ ಆಡಿದ್ದಾನೆ), ಇವುಗಳಲ್ಲಿ ಎರಡು ಪಂದ್ಯಗಳನ್ನು ಪ್ರತಿಸಲ ರೋಜರ್ ಫೆಡರರ್ ನ ವಿರುದ್ಧ ಸೋತಿದ್ದಾನೆ. ಈತ ಮತ್ತು ಫೆಡರರ್ , 2002ರ ವರ್ಷದ ಕೊನೆಯಿಂದ 2009 ರ ವರೆಗೆ ಅನುಕ್ರಮವಾಗಿ ಟೆನಿಸ್ ವೃತ್ತಿಪರರ ಸಂಘದ ಟಾಪ್ 10 ರಲ್ಲಿ ಸ್ಥಾನವನ್ನು ಪಡೆದ ಏಕೈಕ ಆಟಗಾರರಾಗಿದ್ದಾರೆ. ರೊಡ್ಡಿಕ್ ತನ್ನ ಬಲಶಾಲಿಯಾದ ಸರ್ವ್ ಗಳಿಗೆ ಪ್ರಸಿದ್ಧನಾಗಿದ್ದಾನೆ. ಅಲ್ಲದೇ ವೃತ್ತಿಪರ ಟೆನಿಸ್ ನಲ್ಲಿ ಅತ್ಯಂತ ವೇಗದ ಸರ್ವ್ ದಾಖಲೆ ಹೊಂದಿದ್ದಾನೆ. ಈತನ ಅತ್ಯಂತ ವೇಗದ ಸರ್ವ 155 mph (249.5 km/h) ನಷ್ಟಿದೆ ಎಂದು ಅಂದಾಜು ಮಾಡಲಾಗಿದೆ.[2] ಗ್ರಾಂಡ್ ಸ್ಲಾಮ್ ಸಿಂಗಲ್ಸ್ ಆಟ(2003 US ಓಪನ್) ವನ್ನು ಗೆದ್ದುಕೊಂಡ ಅಮೇರಿಕಾದ ಪುರುಷ ಆಟಗಾರರಲ್ಲಿ ರೊಡ್ಡಿಕ್ ಕೊನೆಯವನಾಗಿದ್ದಾನೆ. ಈತ ಬ್ರೂಕ್ಲೀನ್ ಡೆಕ್ಕರ್ ಎಂಬುವವಳನ್ನು ಮದುವೆಯಾದನು. ಈಕೆ ಸ್ಪೋಟ್ಸ್ ಇಲ್ಯುಸ್ಟ್ರೇಟೆಡ್ ನಿಯತಕಾಲಿಕೆಯ ಈಜುಡುಗೆ ಧರಿಸುವ ಮಾಡೆಲ್ ಹಾಗು ನಟಿಯಾಗಿದ್ದಾಳೆ.[3]
ದೇಶ | ಅಮೇರಿಕ ಸಂಯುಕ್ತ ಸಂಸ್ಥಾನ |
---|---|
ವಾಸಸ್ಥಳ | Austin, Texas |
ಎತ್ತರ | 1.88 m (6 ft 2 in)[1] |
ವೃತ್ತಿನಿರತ ಆಟಗಾರನಾಗಿದ್ದು | 2000 |
ಆಟಗಳು | Right-handed; two-handed backhand |
ಪ್ರಶಸ್ತಿಯ ಮೊತ್ತ | $18,502,418 |
ವೃತ್ತಿಜೀವನ ದಾಖಲೆ | 512–162 (76.0%) |
ವೃತ್ತಿಜೀವನ ಪ್ರಶಸ್ತಿಗಳು | 29 |
ಉನ್ನತ ಶ್ರೇಣಿ | No. 1 (November 3, 2003) |
ಸದ್ಯದ ಶ್ರೇಣಿ | No. 9 (August 23, 2010) |
ಆಸ್ಟ್ರೇಲಿಯನ್ ಒಪನ್ | SF (2003, 2005, 2007, 2009) |
ಫ್ರೇಂಚ್ ಒಪನ್ | 4R (2009) |
ವಿಂಬಲ್ಡನ್ | F (2004, 2005, 2009) |
ಯುಎಸ್ ಒಪನ್ | W (2003) |
ವಿಶ್ವ ಟೂರ್ ಅಂತಿಮ ಪಂದ್ಯಗಳು | SF (2003, 2004, 2007) |
ವೃತ್ತಿಜೀವನ ದಾಖಲೆ | 58–38 |
ವೃತ್ತಿಜೀವನ ಪ್ರಶಸ್ತಿಗಳು | 4 |
ಉನ್ನತ ಶ್ರೇಣಿ | No. 50 (January 11, 2010) |
ಫ್ರೇಂಚ್ ಒಪನ್ | 1R (2001) |
ವಿಂಬಲ್ಡನ್ | 1R (2001) |
ಯುಎಸ್ ಒಪನ್ | 2R (1999, 2000) |
ಕೊನೆಯ ಬದಲಾವಣೆ: October 12, 2009. |