ಆಂಟ್ ಲಯನ್ ಪಿಪೀಲಿಕಾಸಿಂಹ ಅಥವಾ ಮಿರ್ಮಿಲಿಯಾನ್. ಇದು ಮಿರ್ಮಿಲಿಯಾನಿಡೆ ಕುಟುಂಬಕ್ಕೂ ನ್ಯೂರಾಪ್ಟೆರ ಉಪವರ್ಗಕ್ಕೂ ಸೇರಿದ ಕೀಟ. ಪ್ರೌಢಜೀವಿ ಕೊಡತಿಹುಳುವನ್ನು ಹೋಲುತ್ತದೆ. ಆದರೆ ಗಿಡ್ಡಗಿರುವ ಗದೆಯಾಕಾರದ ಕುಡಿಮೀಸೆಗಳೂ ಕಿರಿದಾದ ರೆಕ್ಕೆಗಳೂ ಇದ್ದು, ಬಾಯಿಯ ಕೊರೆಯುವ ಉಪಾಂಗಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ[1]. ಮರಳುಮಿಶ್ರಿತ ಭೂಮಿಯಲ್ಲಿ ಇವು ಮೊಟ್ಟೆಗಳನ್ನಿಡುತ್ತವೆ. ಲಾರ್ವಗಳಿಗೆ ಚಪ್ಪಟೆಯಾದ ಮೊಟ್ಟೆಯಾಕಾರದ ದೇಹ. ಅಗಲವಾದ ಗುದ್ದಲಿಯಾಕಾರದ ತಲೆ, ತೆಳುವಾದ ಕಾಲುಗಳು ಇರುತ್ತವೆ. ಹೊರಬಂದೊಡನೆ ಲಾರ್ವಗಳು ಆಲಿಕೆಯಾಕಾರದ ಗುಳಿ ತೋಡಿ, ಅದರ ತಳಭಾಗದಲ್ಲಿ ಹುದುಗಿಕೊಂಡು ಹೊರಭಾಗಕ್ಕೆ ದವಡೆಗಳನ್ನು ಮಾತ್ರ ಚಾಚಿರುತ್ತವೆ. ಇರುವೆ ಅಥವಾ ಇತರ ಸಣ್ಣ ಪ್ರಾಣಿಗಳು ಈ ಆಲಿಕೆಗೆ ಅಕಸ್ಮಾತ್ತಾಗಿ ಜಾರಿಬಿದ್ದಾಗ ಅವನ್ನು ಪಿಪೀಲಿಕಾಸಿಂಹ ಹಿಡಿದು ಬಲವಾದ ದವಡೆಗಳ ಸಹಾಯದಿಂದ ಅವುಗಳ ರಸವನ್ನು ಹೀರುತ್ತದೆ. ಮೂರುತಿಂಗಳ ಅನಂತರ ಲಾರ್ವಗಳು ಕೋಶಾವಸ್ಥೆ ತಲುಪುತ್ತವೆ. ಕೋಶಾವಸ್ಥೆಯ ಹುಳು ರೇಷ್ಮೆಯಂಥ ಸ್ರಾವದಿಂದ ತನ್ನ ಸುತ್ತ ಗೂಡು ಕಟ್ಟುತ್ತದೆ.[2]

Quick Facts Scientific classification, Subfamilies ...
Antlions
Temporal range: 251–0 Ma
PreꞒ
O
S
D
C
P
T
J
K
Pg
N
Mesozoic – Recent
Adult Distoleon tetragrammicus
Scientific classification
Subfamilies

Acanthaclisinae
Brachynemurinae
Dendroleontinae
Dimarinae
Echthromyrmicinae
Glenurinae
Myrmecaelurinae
Myrmeleontinae
Nemoleontinae
Palparinae
Pseudimarinae
Stilbopteryginae

Synonyms

Myrmeleonidae (lapsus)
Palaeoleontidae
and see text

Close

ಉಲ್ಲೇಕನಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.