ಅಸನ್ಸೋಲ್
From Wikipedia, the free encyclopedia
ಅಸನ್ಸೋಲ್ ಬಂಗಾಳಿ:আসানসোল ಕಲ್ಲಿದ್ದಲು ಗಣಿಗಾರಿಕೆ ಮತ್ತು ಕೈಗಾರಿಕೆಯ ಮುಖ್ಯನಗರವಾಗಿದೆ ಹಾಗೂ ಭಾರತದ ಅತ್ಯಂತ ಚಟುವಟಿಕೆಯ ವಾಣಿಜ್ಯಕೇಂದ್ರಗಳಲ್ಲಿ ಒಂದಾಗಿದೆ. ಪಶ್ಚಿಮ ಬಂಗಾಳದಲ್ಲಿ ಕೋಲ್ಕತಾ ನಂತರ ಎರಡನೇ ದೊಡ್ಡ ನಗರವಾಗಿದೆ.[1] ಇದು ರಾಜ್ಯದ ಪಶ್ಚಿಮ ಹೊರವಲಯದ ಬರ್ಧಮಾನ್ ಜಿಲ್ಲೆಯಲ್ಲಿರುವ ಅಸನ್ಸೋಲ್ ಉಪವಿಭಾಗದಲ್ಲಿದೆ. ಇದು ಸಾಮಾನ್ಯವಾಗಿ ಅಧಿಕ ತಲಾದಾಯದೊಂದಿಗೆ ದೊಡ್ಡ ಕಾರ್ಮಿಕ ಶಕ್ತಿಯನ್ನು ಹೊಂದಿದೆ.ಶಿಕ್ಷಣ ಸಂಸ್ಥೆಗಳು,ಉತ್ತಮ ಸಾರಿಗೆ ಸಂಪರ್ಕಗಳು,ಅನೇಕ ವಸತಿ ಸಂಕೀರ್ಣಗಳು ಮತ್ತು ಕೈಗಾರಿಕೆ,ಸಂಸ್ಥೆಗಳು, ಸಾರಿಗೆ ಮತ್ತು ವಾಣಿಜ್ಯಕ್ಕೆ ಸೂಕ್ತವಾದ ಭೂಮಿಯನ್ನು ಹೊಂದಿದೆ. ಅದರ ಒಳನಾಡು ಪ್ರದೇಶ ಬಂಕುರಾ ಮತ್ತು ಪುರುಲಿಯ ಜಿಲ್ಲೆಗಳು ಮತ್ತು ಉತ್ತರ ಬಂಗಾಳವಾಗಿದ್ದು,ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳ ಭಾಗಗಳೊಂದಿಗೆ ಸಂಪರ್ಕ ಹೊಂದಿವೆ. ಅಸನ್ಸೋಲ್ ಶೀಘ್ರದಲ್ಲೇ ದೊಡ್ಡ ನಗರವಾಗಿ ಮೇಲ್ದರ್ಜೆಗೆ ಏರಲಿದೆ. UK ಮೂಲದ ನೀತಿ ಸಂಶೋಧನೆ ಸರ್ಕಾರೇತರ ಸಂಸ್ಥೆಯಾದ ಪರಿಸರ ಮತ್ತು ಅಭಿವೃದ್ಧಿ ಅಂತಾರಾಷ್ಟ್ರೀಯ ಸಂಸ್ಥೆ ಬಿಡುಗಡೆ ಮಾಡಿದ ವರದಿ ಪ್ರಕಾರ,ಅಸನ್ಸೋಲ್ ೪೨ನೇ ಶ್ರೇಯದೊಂದಿಗೆ ವಿಶ್ವದಲ್ಲಿ ಅತೀ ವೇಗದ ಬೆಳವಣಿಗೆಯ ೧೦೦ ನಗರಗಳ ಪಟ್ಟಿಯಲ್ಲಿರುವ ೧೧ ಭಾರತೀಯ ನಗರಗಳ ಪೈಕಿ ಒಂದಾಗಿದೆ.[2]
ಅಸನ್ಸೋಲ್
ಅಸನ್ಸೋಲ್ | |
---|---|
city | |
Population (2001) | |
• Total | ೪,೮೬,೩೦೪ (proper Asansol); ೧೦,೬೭,೩೬೯ (greater Asansol) |
Website | www.asansolmycity.com/ |