ಅಲ್-ಬಿರುನಿ
ಗಣಿತಜ್ಞ / From Wikipedia, the free encyclopedia
ಅರಬ್ ದೇಶದ ಅಲ್-ಬಿರುನಿಯವರು (ಕ್ರಿ.ಶ.೯೭೩-ಕ್ರಿ.ಶ.೧೦೫೦) ಈಗಿನ ಉಜ್ಬೇಕಿಸ್ಥಾನ್ನಲ್ಲಿ ಜನಿಸಿದರು. ವಿಜ್ಞಾನಕ್ಷೇತ್ರದ ಸಾಕಷ್ಟು ಕ್ಷೇತ್ರಗಳಲ್ಲಿ ಅಲ್-ಬಿರುನಿಯವರು ಪರಿಣಿತರಾಗಿದ್ದರು ಎಂಬುದಾಗಿ ಇತಿಹಾಸದಲ್ಲಿ ವರದಿಯಾಗಿದೆ. ಅವರು ೧೧೩ಪುಸ್ತಕಗಳನ್ನು ಬರೆದಿದ್ದರೂ ಅವುಗಳಲ್ಲಿ ಅನೇಕವು ಕಳೆದುಹೋಗಿವೆ. ಖಗೋಳವಿಜ್ಞಾನ, ಜ್ಯೋತಿಶ್ಶಾಸ್ತ್ರ, ಭೂಗೋಳ, ಗಣಿತಶಾಸ್ತ್ರ, ಯಂತ್ರವಿಜ್ಞಾನ (mechanics), ವೈದ್ಯಕೀಯ ವಿಜ್ಞಾನ, ಔಷಧಪ್ರಭಾವ ವಿಜ್ಞಾನ (pharmacology), ಪವನವಿಜ್ಞಾನ (meteorology), ಮತಧರ್ಮ (religion), ತತ್ವವಿಜ್ಞಾನ (philosophy), ಸಾಹಿತ್ಯ ಮತ್ತು ಮಾಂತ್ರಿಕವಿದ್ಯೆಗಳ (magic) ವಿಷಯಗಳ ಬಗ್ಗೆ ಅವರು ಆ ಪುಸ್ತಕಗಳನ್ನು ಬರೆದಿದ್ದರು.[1] ಅಲ್-ಬಿರುನಿಯವರ ಪುಸ್ತಕಗಳನ್ನು ಪರಿಶೀಲಿಸಿದಾಗ ಅವರು ಖಗೋಳವಿಜ್ಞಾನದ ಪಂಡಿತರಾಗಿದ್ದರು. ಅನೇಕ ಲೋಹಗಳ, ದ್ರವಗಳ ಮತ್ತು ಪ್ರಶಸ್ತಶಿಲೆಗಳ (gems) ಸಾಂದ್ರತೆಯನ್ನು ಅವರು ದಾಖಲಿಸಿದ್ದರು. ನಕ್ಷತ್ರಸ್ಥಾನ ಸೂಚಕದ (astrolabe) ಬಗ್ಗೆ ಮಾಹಿತಿ, ಸುಮಾರು ೭೦೦ತರಹದ ಔಷಧಗಳ ವಿವರಗಳು ಆ ಪುಸ್ತಕದಲ್ಲಿದ್ದವು.[2] ಭಾರತದ ಸಂಪ್ರದಾಯಗಳು, ಭಾಷೆಗಳು, ವಿಜ್ಞಾನ ಮತ್ತು ಭೂಗೋಳವಿಜ್ಞಾನದ ಬಗ್ಗೆ ಅವರು ಸಂಸ್ಕೃತದಲ್ಲಿ ಪರಿಣತಿ ಹೊಂದಿ ಆ ಭಾಷೆಯಲ್ಲಿ ಬರೆದಿದ್ದರು ಎಂಬುದಾಗಿ ದಾಖಲಾಗಿದೆ.