From Wikipedia, the free encyclopedia
ಅಮೃತ ಎಂದರೆ ಅಮರತ್ವ ಎಂದು ಅರ್ಥ. ಇದು ಗ್ರೀಕ್ ಭಾಷೆಯ "ಅಂಬ್ರೋಸಿಯ" ಎಂಬ ಶಬ್ದದಿಂದ ಉತ್ಪತ್ತಿಯಾದುದು[1]. ಗ್ರೀಕ್ ಭಾಷೆಯಲ್ಲಿಯೂ ಇದಕ್ಕೆ ಅಮರತ್ವ ಎಂದೇ ಅರ್ಥವಿದೆ[2].ಈ ಶಬ್ದದ ಪ್ರಥಮ ಉಲ್ಲೇಖ ಋಗ್ವೇದದಲ್ಲಿ ದೊರೆಯುತ್ತದೆ.ಇದು ದೇವತೆಗಳಿಗೆ ಅಮರತ್ವವನ್ನು ತಂದುಕೊಟ್ಟ ಪಾನೀಯವಾದ ಸೋಮಕ್ಕೆ ಸಮಾನಾರ್ಥಕವಾಗಿ ಉಪಯೋಗಿಸಲಾಗಿದೆ.
ಅಮೃತ ದೇವದಾನವರು ಕ್ಷೀರಸಮುದ್ರವನ್ನು ಮಥಿಸಿದಾಗ ಲಕ್ಷ್ಮಿ, ಚಂದ್ರ, ಐರಾವತ, ಉಚ್ಚೈಃಶ್ರವಸ್, ಹಾಲಾಹಲ ಮುಂತಾದುವುಗಳ ಜೊತೆಗೆ ಉದ್ಭವಿಸಿದುದು[3]. ಚಂದ್ರ ಅಮೃತಭರಿತ ಎಂದು ಹಿಂದೂಗಳ ನಂಬಿಕೆ. ಕದ್ರುವಿನಿಂದ ತನ್ನ ತಾಯಿಯನ್ನು ಮುಕ್ತಗೊಳಿಸುವುದಕ್ಕಾಗಿ ಗರುಡ ಇದನ್ನು ದೇವಲೋಕದಿಂದ ಅಪಹರಿಸಿದ. ಶ್ರೀ ಕೃಷ್ಣನೂ ಇದನ್ನು ಉದಂಕ ಮಹರ್ಷಿಯ ತೃಪ್ತ್ಯರ್ಥವಾಗಿ ತರಿಸಿಕೊಟ್ಟ. ಇದನ್ನು ಕುಡಿದವರು ಮರಣವನ್ನು ಗೆಲ್ಲಬಲ್ಲರೆಂದೂ ಇದು ಸ್ವರ್ಗದಲ್ಲಿನ ದೇವತೆಗಳ ಪಾನೀಯವೆಂದೂ ನಂಬಿಕೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.