ಸಾಮಾನ್ಯ ಇಂದ್ರಿಯಗಳಿಂದ ಮರೆಯಾಗಿರುವ ಮಾಹಿತಿಯನ್ನು ಗುರುತಿಸಲು ಎಕ್ಸ್ಟ್ರಾಸೆನ್ಸರಿ ಗ್ರಹಿಕೆ ಬಳಸಿಕೊಳ್ಳು From Wikipedia, the free encyclopedia
ಒಬ್ಬ ಅತೀಂದ್ರಿಯ ಶಕ್ತಿಯುಳ್ಳ ವ್ಯಕ್ತಿ ಯು(pronounced /ˈsaɪkɨk/; ಗ್ರೀಕ್ ನ ಪದ ψυχικός ಸೈಕಿಕೋಸ್—"ಮನಸ್ಸಿನ, ಮಾನಸಿಕತೆಯ", ಇದನ್ನು ಸೂಕ್ಷ್ಮ ಸಂವೇದನೆ ಎಂದೂ ಸಹ ಕರೆಯಲಾಗುತ್ತದೆ[1]) ಸಾಧಾರಣ ಇಂದ್ರಿಯಗಳಿಂದ ಮರೆಮಾಚಲಾದ ಮಾಹಿತಿಯನ್ನು ಗ್ರಹಿಸುವ ಸಾಮರ್ಥ್ಯವನ್ನು ಇಂದ್ರಿಯಾತೀತ ಗ್ರಹಣೆಯ(ವಿಶಿಷ್ಟ ಗ್ರಹಿಕೆಯ) (ಎಕ್ಸ್ಟ್ರಾಸೆನ್ಸರಿ ಪರ್ಸೆಪ್ಶನ್(ESP) ಮೂಲಕ ಪ್ರಕಟಿಸುತ್ತಾನೆ, ಅಥವಾ ಇತರರು ಈತನಿಗೆ ಇಂತಹ ಸಾಮರ್ಥ್ಯವಿದೆಯೆಂದು ಹೇಳುತ್ತಾರೆ.(ಕಾಲ್ಪನಿಕ-ವಾಸ್ತವಿಕ ಮಧ್ಯದ ಗ್ರಹಿಕೆಯ ಬಲ) ಈ ಪದವು ರಂಗಭೂಮಿಯ ಕಲಾವಿದರಿಗೂ ಸಹ ಅನ್ವಯವಾಗುತ್ತದೆ, ಇವರು ಇಂದ್ರಜಾಲ, ಕೋಲ್ಡ್ ರೀಡಿಂಗ್, ಹಾಗು ಹಾಟ್ ರೀಡಿಂಗ್ ನಂತಹ ತಂತ್ರಗಳನ್ನು ಬಳಸಿಕೊಂಡು ಇಂತಹ ಸಾಮರ್ಥ್ಯಗಳನ್ನು ಪ್ರಸ್ತುತಪಡಿಸುತ್ತಾರೆ. ಇದು ಜಗತ್ತಿನ ಮೇಲೆ ಭೌತಿಕವಾಗಿ ಪ್ರಭಾವ ಬೀರುವ ಮನಸ್ಸಿನ ಸಾಮರ್ಥ್ಯಕ್ಕೂ ಸಹ ಸೂಚ್ಯವಾಗಿದೆ. ಜೊತೆಗೆ ಊರಿ ಗೆಲ್ಲರ್ ರಂತಹವರು ಪ್ರದರ್ಶಿಸುತ್ತಾರೆಂದು ಹೇಳಲಾಗುವ ದೂರಸ್ಥಚಲನೆಯ ಶಕ್ತಿಗಳಿಗೂ ಸೂಚಿತವಾಗುತ್ತದೆ. ಅತೀಂದ್ರಿಯ ಶಕ್ತಿಯುಳ್ಳವರು ಕಾದಂಬರಿ ಹಾಗು ವೈಜ್ಞಾನಿಕ ಕಾದಂಬರಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಾರೆ, ಉದಾಹರಣೆಗೆ ಸ್ಟೀಫನ್ ಕಿಂಗ್ ರ ದಿ ಡೆಡ್ ಜೋನ್ , ಅಥವಾ ಮಾರ್ವೆಲ್ ಕಾಮಿಕ್ಸ್, ಟೆಲಿಪತ್ ಹಾಗು ಅತೀಂದ್ರಿಯ ಶಕ್ತಿಯುಳ್ಳ ಜೀನ್ ಗ್ರೆಯ್. ಅತೀಂದ್ರಿಯ ಶಕ್ತಿಯುಳ್ಳವರು ತಮ್ಮನ್ನು ಅರಸಿ ಬಂದವರಿಗೆ ಸಲಹೆ ಹಾಗು ಹಿತವಚನವನ್ನು ನೀಡುವ ಒಂದು ವಿಶಾಲವಾದ ಕ್ಷೇತ್ರವು ಅಸ್ತಿತ್ವದಲ್ಲಿದೆ.[2] ಕೆಲವು ಪ್ರಸಿದ್ಧ ಸಮಕಾಲೀನ ಅತೀಂದ್ರಿಯ ಶಕ್ತಿಯುಳ್ಳವರಲ್ಲಿ ಮಿಸ್ ಕ್ಲೆಯೋ,[3] ಜಾನ್ ಎಡ್ವರ್ಡ್, ಡೇನಿಯಲ್ ಎಗ್ನೆವ್, ಹಾಗು ಸಿಲ್ವಿಯ ಬ್ರೌನೆ ಸೇರಿದ್ದಾರೆ. ವಿಮರ್ಶಕರು, ಅತೀಂದ್ರಿಯ ಶಕ್ತಿಗಳನ್ನು ಅಂತಾರಾಷ್ಟ್ರೀಯ ಕುತಂತ್ರ ಅಥವಾ ಖುದ್ದು ಮೋಸಹೋಗುವುದು ಎಂದು ಟೀಕಿಸುತ್ತಾರೆ.[4][5][6][7] 1988ರಲ್ಲಿ, U.S. ನ್ಯಾಷನಲ್ ಅಕ್ಯಾಡೆಮಿ ಆಫ್ ಸೈನ್ಸಸ್ ನಡೆಸಿದ ಅಧ್ಯಯನವು, "ಸುಮಾರು 130ಕ್ಕೂ ಹೆಚ್ಚಿನ ವರ್ಷಗಳಲ್ಲಿ ನಡೆಸಿದ ಅಧಿಮನೋವಿಜ್ಞಾನದ ವಿದ್ಯಮಾನಕ್ಕೆ ಸಂಬಂಧಿಸಿದ ಸಂಶೋಧನೆಗೆ ಯಾವುದೇ ವೈಜ್ಞಾನಿಕ ಸಮರ್ಥನೆಗಳಿಲ್ಲವೆಂದು [8] ವರದಿ ಮಾಡಿತು."
ಅತೀಂದ್ರಿಯ ಶಕ್ತಿ ಎಂಬ ಪದವು ಗ್ರೀಕ್ ನ ಪದ ಸೈಕಿಕೋಸ್ ಎಂಬ ಪದದಿಂದ ವ್ಯುತ್ಪತ್ತಿ ಹೊಂದಿದೆ.("ಮನಸ್ಸಿನ" ಅಥವಾ "ಮಾನಸಿಕತೆಯ") ಜೊತೆಗೆ ಭಾಗಶಃ ಮನುಷ್ಯನ ಮನಸ್ಸು ಅಥವಾ ಆತ್ಮಕ್ಕೆ ಸೂಚಿತವಾಗಿದೆ.(ಉದಾಹರಣೆಗೆ "ಮಾನಸಿಕ ಸಂಕ್ಷೋಭೆ"). ಅತೀಂದ್ರಿಯ ಶಕ್ತಿ ಎಂಬ ಪದವನ್ನು ಮೊದಲ ಬಾರಿಗೆ ಬಳಕೆ ಮಾಡಿದ ಕೀರ್ತಿ ಫ್ರೆಂಚ್ ಖಗೋಳಶಾಸ್ತ್ರಜ್ಞ ಹಾಗು ಆತ್ಮವಾದಿ ಕ್ಯಾಮಿಲ್ಲೆ ಫ್ಲಮ್ಮರಿಯನ್ ಗೆ ಸಲ್ಲುತ್ತದೆ, ನಂತರ ಇದನ್ನು ಇಂಗ್ಲಿಷ್ ಭಾಷೆಗೆ 1870ರಲ್ಲಿ ಎಡ್ವರ್ಡ್ ವಿಲ್ಲಿಯಮ್ ಕಾಕ್ಸ್ ಪರಿಚಯಿಸಿದರು.[9]
ಕಾಲಜ್ಞಾನ ಹಾಗು ಭವಿಷ್ಯ ಹೇಳುವ ವಿಸ್ತಾರವಾದ ವ್ಯವಸ್ಥೆಗಳು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿವೆ. ಬಹುಶಃ ಪ್ರಾಚೀನ ನಾಗರೀಕತೆಯಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿದ್ದ ಭವಿಷ್ಯ ಹೇಳುವ ವ್ಯವಸ್ಥೆಯೆಂದರೆ ಜ್ಯೋತಿಷ್ಯ, ಈ ವೃತ್ತಿಯನ್ನು ನಡೆಸುವವರು ಆಕಾಶ ಕಾಯಗಳ ಸಂಬಂಧಿತ ಸ್ಥಾನಗಳು ಜನರ ಜೀವನ ಮೇಲೆ ಒಳದೃಷ್ಟಿಯನ್ನು ಒದಗಿಸಬಹುದೆಂದು ಭಾವಿಸಿದ್ದರು. ಜೊತೆಗೆ ಇವರು ಮನುಷ್ಯರ ಭವಿಷ್ಯದ ಸ್ಥಿತಿಗತಿಗಳ ಬಗ್ಗೆಯೂ ಸಹ ಮುನ್ನುಡಿಯುತ್ತಿದ್ದರು. ಕೆಲವು ಭವಿಷ್ಯವಾದಿಗಳು, ಈ ವಿಸ್ತಾರವಾದ ವ್ಯವಸ್ಥೆಗಳನ್ನು ಬಳಸಿಕೊಳ್ಳದೇ, ಕೆಲವು ನೇರ ಗ್ರಹಿಕೆಯ ವಿಧಾನ ಅಥವಾ ಭವಿಷ್ಯದ ಬಗ್ಗೆ ದೃಷ್ಟಿಸುವ ಶಕ್ತಿಯ ಮೂಲಕ ಭವಿಷ್ಯ ನುಡಿಯುವಷ್ಟು ಸಮರ್ಥರಾಗಿದ್ದರು. ಇವರನ್ನು ಕಾಲಜ್ಞಾನಿಗಳು ಅಥವಾ ಪ್ರವಾದಿಗಳೆಂದು ಕರೆಯಲಾಗುತ್ತಿತ್ತು, ಹಾಗು ನಂತರದ ಅವಧಿಗಳಲ್ಲಿ ಕ್ಲೇರ್ವಾಯಂಟ್ಸ್ (ಅತೀಂದ್ರಿಯದೃಷ್ಟಿಯುಳ್ಳವರು)(ಫ್ರೆಂಚ್ ಪದದ ಅರ್ಥ "ಸ್ಪಷ್ಟ ದೃಷ್ಟಿ" ಅಥವಾ "ಸ್ಪಷ್ಟ ನೋಟ") ಹಾಗು ಅತೀಂದ್ರಿಯ ದೃಷ್ಟಿಯುಳ್ಳ ವ್ಯಕ್ತಿಗಳೆಂದು ಕರೆಯಲ್ಪಡುತ್ತಿದ್ದರು. ಕಾಲಜ್ಞಾನಿಗಳು ಪ್ರಾಚೀನ ನಾಗರೀಕತೆಯಲ್ಲಿ ಕಾರ್ಯನಿರ್ವಾಹಕ ಪಾತ್ರವನ್ನು ರೂಪಿಸಿದರು, ಸಾಮಾನ್ಯವಾಗಿ ಸಲಹೆಗಾರರು, ಪುರೋಹಿತರು, ಹಾಗು ತೀರ್ಪುಗಾರರಾಗಿ ಸೇವೆ ಸಲ್ಲಿಸುತ್ತಿದ್ದರು.[9] ಇದರ ಬಗ್ಗೆ ಬೈಬಲಿನಲ್ಲಿ ಹಲವಾರು ಉದಾಹರಣೆಗಳು ಸೇರಿವೆ. 1 ಸ್ಯಾಮ್ಯುಯೆಲ್ ಪುಸ್ತಕವು (ಅಧ್ಯಾಯ 9) ಇಂತಹ ಒಂದು ಕಾರ್ಯ ನಿರ್ವಹಣೆಯ ಬಗ್ಗೆ ವಿವರಿಸುತ್ತದೆ. ಇದರಂತೆ ಸ್ಯಾಮ್ಯುಯೆಲ್ ಗೆ ಭವಿಷ್ಯದ ರಾಜ ಸಾಲ್ ನ ಕತ್ತೆಗಳನ್ನು ಹುಡುಕಿಕೊಡುವಂತೆ ಹೇಳಲಾಗುತ್ತದೆ.[10]
ಪ್ರಾಚೀನ ಸಂಸ್ಕೃತಿಗಳಲ್ಲಿ ಪ್ರವಾದಿಗಳ ಪಾತ್ರವು ಚಿರಂತನವಾಗಿ ಕಂಡುಬಂದಿತು. ಈಜಿಪ್ಟ್ ನಲ್ಲಿ, ಮೆಂಫಿಸ್ ನಲ್ಲಿ (ಪೂಜಾಸ್ಥಳ) ರಾ ದ ಪುರೋಹಿತರು ಕಾಲಜ್ಞಾನಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಾಚೀನ ಅಸ್ಸಿರಿಯದಲ್ಲಿ ಕಾಲಜ್ಞಾನಿಗಳನ್ನು ನಬು ಎಂದು ಕರೆಯಲಾಗುತ್ತಿತ್ತು, ಇದು "ಕರೆಯುವುದು" ಅಥವಾ "ಘೋಷಿಸುವುದು" ಎಂಬ ಅರ್ಥವನ್ನು ನೀಡುತ್ತದೆ.[9]
ಪ್ರವಾದಿಯ ಸಾಮರ್ಥ್ಯಗಳಿಗಿರುವ ಪ್ರಾಚೀನ ಪೂರ್ವಾಚಾರಗಳನ್ನು ಒಳಗೊಳ್ಳುವ ಪುರಾತನ ಕಥೆಗಳಲ್ಲಿ ದಿ ಡೆಲ್ಫಿಕ್ ಆರೆಕಲ್ ಸಹ ಒಂದು. ಡೆಲ್ಫಿಯ ಅಪೋಲೋದ ದೈವಪೀಠದಲ್ಲಿ ಮುಖ್ಯಸ್ಥಳಾಗಿದ್ದ ಪುರೋಹಿತೆ ಪೈಥಿಯಳನ್ನು, ಧಾರ್ಮಿಕ ಕ್ರಿಯೆಯ ಸಂದರ್ಭಗಳಲ್ಲಿ ಭವಿಷ್ಯವನ್ನು ನುಡಿಯಲು ಸಮರ್ಥಳಾಗಿದ್ದಳೆಂದು ಎಂಟನೆ ಶತಮಾನ BCಯ ಆರಂಭದಲ್ಲಿ ಭಾವಿಸಲಾಗುತ್ತಿತ್ತು.[11] ಪೈಥಿಯ, ಭೂಮಿಯಿಂದ ಏಳುತ್ತಿದ್ದ ಆವಿಯಿಂದ ಪ್ರೇರಿತಳಾಗಿ ಭ್ರಮಾವೇಶದಿಂದ ದೇವವಾಣಿಯನ್ನು ಆವ್ಹಾನಿಸಿಕೊಂಡು ನುಡಿಯುತ್ತಿದ್ದಳೆಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಅಲ್ಲದೇ ಅವಳು ಅರ್ಥರಹಿತವಾಗಿ ಮಾತನಾಡುತ್ತಿದ್ದಳು, ಇದನ್ನು ಅಪೋಲೋನ ಧ್ವನಿಯೆಂದು ಭಾವಿಸಲಾಗುತ್ತಿತ್ತು, ಪುರೋಹಿತರು ನಿಗೂಢವಾದ ಭವಿಷ್ಯವಾಣಿಗಳಾಗಿ ಮರುರೂಪ ನೀಡುತ್ತಿದ್ದ ಇದನ್ನು ಗ್ರೀಕ್ ಸಾಹಿತ್ಯದಲ್ಲಿ ರಕ್ಷಿಸಲಾಗಿದೆ. ಅಂದಿನ ದಾಖಲೆಗಳನ್ನು ಆಧರಿಸಿ ಕೆಲವು ವಿದ್ವಾಂಸರು ಪೈಥಿಯ ಗ್ರಹಿಸಲು ಸಾಧ್ಯವಾಗುವಂತೆ ಮಾತನಾಡುತ್ತಿದ್ದಳೆಂದು ಸೂಚಿಸುತ್ತಾರೆ, ಹಾಗು ಭವಿಷ್ಯವನ್ನು ತನ್ನದೇ ದನಿಯಲ್ಲಿ ಹೇಳುತ್ತಿದ್ದಳೆಂದು ನುಡಿಯುತ್ತಾರೆ.<ಉಲ್ಲೇಖ>
{{cite journal}}
: Cite journal requires |journal=
(help)(Lardinois, Andre; McClure, Laura (2001). Making Silence Speak: Women's Voices in Greek Literature and Society. Princeton University Press. pp. 38–54.)</ಉಲ್ಲೇಖ>ದಲ್ಲಿ ಪೈಥಿಯ ಎಂಬುದು ಪರಂಪರಾಗತವಾಗಿ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದ ಸ್ಥಾನ, ಬಹುಶಃ ಇವರನ್ನು ದೇವಾಲಯದ ಪುರೋಹಿತೆಯರ ಸಂಘದಿಂದ ಆಯ್ಕೆ ಮಾಡಲಾಗುತ್ತಿತ್ತು. ಚಕ್ರವರ್ತಿ ಥಿಯೋಡೋಸಿಯಸ್ I ಪೇಗನ್ ದೇವಾಲಯಗಳಿಗೆ ಕಾರ್ಯಾಚರಣೆಯನ್ನು ಕೈಬಿಡುವಂತೆ ಆದೇಶ ನೀಡಿದಾಗ ಇದರ ಬಗ್ಗೆ ಕಡೆಯ ದಾಖಲಿತ ಪ್ರತಿಕ್ರಿಯೆಯನ್ನು 393 ADಯಲ್ಲಿ ನೀಡಲಾಯಿತು.ಇತ್ತೀಚಿನ ಭೂವೈಜ್ಞಾನಿಕ ಸಂಶೋಧನೆಗಳು, ಪೈಥಿಯಾಳ ಭ್ರಮಾವೇಶ ಸ್ಥಿತಿಗೆ ಬಹುಶಃ ಎಥೆಲಿನ್ ಆಮ್ಲವು ಕಾರಕವಿರಬಹುದೆಂಬ ಶಂಕೆ ವ್ಯಕ್ತಪಡಿಸುತ್ತವೆ.<ಉಲ್ಲೇಖ>
ಅತೀಂದ್ರಿಯ ಸಾಮರ್ಥ್ಯವೆಂದು ಕೆಲವರು ಪರಿಗಣಿಸುವ ಅತ್ಯಂತ ಸಮರ್ಥ ಐತಿಹಾಸಿಕ ಉಲ್ಲೇಖಗಳಲ್ಲಿ ಒಂದೆಂದರೆ ಮೈಕಲ್ ಡೆ ನಾಸ್ಟ್ರಡಾಮ್ ನ (1503 – 1566) ಕಾಲಜ್ಞಾನ, ಸಾಮಾನ್ಯವಾಗಿ ಲ್ಯಾಟಿನ್ ಭಾಷಾಂತರದಲ್ಲಿ ನಾಸ್ಟ್ರಡಾಮಸ್ ಎಂದು ಕರೆಯಲಾಗುತ್ತದೆ, ಇವರ ನುಡಿದ ಭವಿಷ್ಯವನ್ನು ಫ್ರೆಂಚ್ ಪುನರುಜ್ಜೀವನದ ಅವಧಿಯಲ್ಲಿ ಪ್ರಕಟಿಸಲಾಯಿತು. ನಾಸ್ಟ್ರಡಾಮಸ್ ಒಬ್ಬ ಫ್ರೆಂಚ್ ಔಷಧ ವ್ಯಾಪಾರಿ ಹಾಗು ಕಾಲಜ್ಞಾನಿಯಾಗಿದ್ದರು, ಇವರು ಬರೆದ ಭವಿಷ್ಯದ ಬಗೆಗಿನ ಸಂಗ್ರಹಗಳು ವಿಶ್ವವ್ಯಾಪಿಯಾಗಿ ಜನಪ್ರಿಯವಾಗಿವೆ.ಅಲ್ಲದೇ ಅವರ ಮರಣದ ತರುವಾಯ ವಿರಳವಾಗಿ ಮುದ್ರಣಗೊಂಡಿವೆ. ಇವರ ಜನಪ್ರಿಯ ಪುಸ್ತಕ ಲೇಸ್ ಪ್ರೊಫೆಟೀಸ್ ನ ಮೊದಲ ಆವೃತ್ತಿ 1555ರಲ್ಲಿ ಪ್ರಕಟವಾಯಿತು. ಒಟ್ಟಾರೆ ತೆಗೆದುಕೊಂಡಲ್ಲಿ, ಅವರು ಬರೆದ ಕೃತಿಗಳಲ್ಲಿ ಕಡೆಪಕ್ಷ 6,338 ಚೌಪದಿಗಳು ಅಥವಾ ಭವಿಷ್ಯವಾಣಿಗಳು,[12] ಜೊತೆಗೆ ಕಡೆಪಕ್ಷ ಹನ್ನೊಂದು ವಾರ್ಷಿಕ ಕ್ಯಾಲೆಂಡರುಗಳು ಸೇರಿದ್ದವೆಂದು ತಿಳಿದುಬಂದಿದೆ. ಚೌಪದಿಗಳಲ್ಲಿ ಹಲವು ನೈಸರ್ಗಿಕ ವಿಕೋಪಗಳಾದ, ಪ್ಲೇಗ್ ಕಾಯಿಲೆ, ಭೂಕಂಪಗಳು, ಯುದ್ಧಗಳು, ಪ್ರವಾಹಗಳು, ಆಕ್ರಮಣಗಳು, ಕೊಲೆಗಳು, ಬರಗಾಲ, ಹಾಗು ಕದನಗಳ ಬಗ್ಗೆ ಸಂಬಂಧಿಸಿವೆ; - ಆದರೆ ಇವುಗಳ ಕಾಲಾವಧಿಯ ಬಗ್ಗೆ ಬರೆಯಲಾಗಿಲ್ಲ. ನಾಸ್ಟ್ರಡಾಮಸ್ ಒಬ್ಬ ವಿವಾದಕ್ಕೀಡಾದ ವ್ಯಕ್ತಿ. ಆತನ ಬಗ್ಗೆ ಉತ್ಸಾಹವುಳ್ಳ ಹಲವರು ಜೊತೆಗೆ ಆತನನ್ನು ಅನುಸರಿಸುವ ಜನಪ್ರಿಯ ಗುಂಪು, ಜಗತ್ತಿನಲ್ಲಿ ನಡೆದ ಹಲವು ಪ್ರಮುಖ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದರ ಬಗ್ಗೆ ಪ್ರಶಂಸಿಸುತ್ತದೆ. ಅವನ ಕೃತಿಗಳ ಬಗ್ಗೆ ಆಸಕ್ತಿಯನ್ನು ಇಂದಿಗೂ ಪರಿಗಣಿಸಲಾಗುತ್ತದೆ, ವಿಶೇಷವಾಗಿ ಮಾಧ್ಯಮದಲ್ಲಿ ಹಾಗು ಜನಪ್ರಿಯ ಸಂಸ್ಕೃತಿಯಲ್ಲಿ. ಇದಕ್ಕೆ ಭಿನ್ನವಾಗಿ, ಹಲವು ವಿದ್ವಾಸರು, ಜಗತ್ತಿನಲ್ಲಿ ನಡೆದ ಘಟನೆಗಳು ಹಾಗು ನಾಸ್ಟ್ರಡಾಮಸ್ ನ ಚೌಪದಿಗಳ ನಡುವಿನ ಸಂಯೋಗಗಳು ಬಹುತೇಕವಾಗಿ ತಪ್ಪು ಗ್ರಹಿಕೆ ಅಥವಾ ತಪ್ಪು ಭಾಷಾಂತರದ ಪರಿಣಾಮವೆಂದು ಹೇಳುತ್ತಾರೆ.(ಕೆಲವೊಂದು ಬಾರಿ ಉದ್ದೇಶಪೂರ್ವಕವಾಗಿ) ಅಥವಾ ಇದಕ್ಕೆ ಭಿನ್ನವಾಗಿ ಸತ್ತ್ವಹೀನ ಪ್ರಭಾವಗಳಾದ ಇವುಗಳು ಯಾವುದೇ ಪ್ರಾಮಾಣಿಕವಾದ ಭವಿಷ್ಯದ ಶಕ್ತಿಗೆ ಸಾಕ್ಷ್ಯವನ್ನು ಒದಗಿಸುವಲ್ಲಿ ನಿರುಪಯೋಗಿಯಾಗಿವೆ.[13] ಕೆಲವು ಐತಿಹಾಸಿಕ ವ್ಯಕ್ತಿಗಳು ಅತೀಂದ್ರಿಯ ಪ್ರಯೋಗಗಳಿಗೆ ವಶವಾಗುವ ಸಾಮರ್ಥ್ಯವನ್ನು ಹೊಂದಿದ್ದರೆಂಬ ನಂಬಿಕೆಯ ಜೊತೆಯಲ್ಲಿ, ಕೆಲವು ಅತೀಂದ್ರಿಯ ಸಾಮರ್ಥ್ಯಗಳು ಪ್ರತಿಯೊಬ್ಬರಿಗೂ ಸಂದರ್ಭಾನುಸಾರವಾಗಿ ಲಭ್ಯವಾಗುತ್ತವೆಂದು ಪರಿಗಣಿಸಲಾಗಿದೆ. ಉದಾಹರಣೆಗೆ, ಪ್ರವಾದಿಯ ಕನಸುಗಳಲ್ಲಿ ನಂಬಿಕೆಯು ಹಲವು ಪುರಾತನ ಸಂಸ್ಕೃತಿಗಳಲ್ಲಿ ಸಾಮಾನ್ಯ ಹಾಗು ಸತತವಾಗಿತ್ತು.[14]
ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ, ಆಧುನಿಕ ಪ್ರೇತಸಂಪರ್ಕ ಸಿದ್ಧಾಂತವು ಅಮೆರಿಕ ಸಂಯುಕ್ತ ಸಂಸ್ಥಾನ ಹಾಗು ಯುನೈಟೆಡ್ ಕಿಂಗ್ಡಮ್ ನಲ್ಲಿ ಪ್ರಮುಖವಾಯಿತು. ಕಾರ್ಯಚಟುವಟಿಕೆಯ ಭಿನ್ನ ಲಕ್ಷಣವೆಂದರೆ, ಸತ್ತವರ ಆತ್ಮವನ್ನು ಮಾಧ್ಯಮದ ಮೂಲಕ ಸಂಪರ್ಕಿಸಿ ಜೀವನದ ಬಗ್ಗೆ ಒಳನೋಟವನ್ನು ಪಡೆಯಬಹುದೆಂಬ ನಂಬಿಕೆ.[15][page needed] ಕಾರ್ಯಚಟುವಟಿಕೆಯನ್ನು ಭಾಗಶಃ ಅತೀಂದ್ರಿಯ ಶಕ್ತಿಗಳ ಕಥಾನಕಗಳ ಮೂಲಕ ಉತ್ತೇಜಿಸಬಹುದು. ಇಂತಹ ಅಸಾಧಾರಣ ಶಕ್ತಿಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿ ಡೇನಿಯಲ್ ಡುಂಗ್ಲಾಸ್ ಹೋಂ ಸಹ ಒಬ್ಬ, ಈತ ವಿಕ್ಟೋರಿಯನ್ ಅವಧಿಯಲ್ಲಿ ಎತ್ತರಕ್ಕೆ ಗಾಳಿಯಲ್ಲೇರಿ ತೇಲುವುದಕ್ಕೆ ಹಾಗು ಸತ್ತವರೊಂದಿಗೆ ಮಾತನಾಡುವ ಸಾಮರ್ಥ್ಯಕ್ಕೆ ಪ್ರಸಿದ್ಧನಾಗಿದ್ದ.[16] ಪ್ರೇತಸಂಪರ್ಕ ಸಿದ್ಧಾಂತ ಕಾರ್ಯಚಟುವಟಿಕೆಯು ಬೆಳವಣಿಗೆಯಾಗುತ್ತಿದ್ದಂತೆ, ಸದೃಶವಾದ ಇತರ ಗುಂಪುಗಳು ಹುಟ್ಟಿಕೊಂಡವು, ಇದರಲ್ಲಿ ಥಿಯೋಸೊಫಿಕಲ್ ಸೊಸೈಟಿ ಸಹ ಒಂದು, ಇದನ್ನು 1875ರಲ್ಲಿ ಹೆಲೆನ ಬ್ಲವಾಟ್ಸ್ಕಿ(1831–1891) ಸಹ-ಸ್ಥಾಪಿಸಿದರು. ಬ್ರಹ್ಮವಿದ್ಯೆಯು, ಆತ್ಮವಾದಿ ಅಂಶಗಳನ್ನು ಪೌರಸ್ತ್ಯ ಅನುಭಾವದೊಂದಿಗೆ ಸಂಯೋಜಿಸಿತು. ಜೊತೆಗೆ ಇದು 20ನೇ ಶತಮಾದ ಆರಂಭದಲ್ಲಿ ಬಹಳ ಪ್ರಭಾವಿಯಾಗಿತ್ತು, ನಂತರ ಇದು 1970ರಲ್ಲಿ ನಡೆದ ನ್ಯೂ ಏಜ್ ಕಾರ್ಯಚಟುವಟಿಕೆಯನ್ನು ಉತ್ತೇಜಿಸಿತು. ಬ್ಲವಾಟ್ಸ್ಕಿ ಸ್ವತಃ ತನಗೆ ಹಲವಾರು ಅತೀಂದ್ರಿಯ ಶಕ್ತಿಯಿದೆಯೆಂದು ಘೋಷಿಸಿಕೊಂಡಳು.[17]
ಇಪ್ಪತ್ತನೆ ಶತಮಾನದ ಉತ್ತರಾರ್ಧದ ಹೊತ್ತಿಗೆ ಅತೀಂದ್ರಿಯ ಶಕ್ತಿಯುಳ್ಳ ವ್ಯಕ್ತಿಗಳನ್ನು ಸಾಮಾನ್ಯವಾಗಿ ನ್ಯೂ ಏಜ್ ಸಂಸ್ಕೃತಿಯೊಂದಿಗೆ ಸಂಯೋಜಿಸಲಾಗುತ್ತಿತ್ತು.[18] ಅತೀಂದ್ರಿಯ ಶಕ್ತಿಯ ಗ್ರಹಣೆಯನ್ನು ಶುಲ್ಕ ಪಡೆದುಕೊಂಡು ಮಾಡಲಾಗುತ್ತಿತ್ತು. ಜೊತೆಗೆ ತಮಗೆ ನೀಡಲಾದ ಸನ್ನಿವೇಶದಲ್ಲಿ ಉದಾಹರಣೆಗೆ ದೂರವಾಣಿಯ ಮೂಲಕ, ಮನೆಗಳಲ್ಲಿ, ಅಥವಾ ಅತೀಂದ್ರಿಯ ಪ್ರದರ್ಶನಗಳಲ್ಲಿ ನಡೆಸಲಾಗುತ್ತಿತ್ತು.[19]
1990ರಲ್ಲಿ ನಡೆಸಿದ ಸಮೀಕ್ಷೆಯ ವರದಿಯಂತೆ, ನ್ಯಾಷನಲ್ ಅಕ್ಯಾಡೆಮಿ ಆಫ್ ಸೈನ್ಸಸ್ ನ ಸದಸ್ಯರಲ್ಲಿ, ಪ್ರತಿಕ್ರಿಯೆ ತೋರಿದವರಲ್ಲಿ ಕೇವಲ 2%ನಷ್ಟು ಜನರು ಇಂದ್ರಿಯಾತೀತ ಗ್ರಹಣೆಯು ವೈಜ್ಞಾನಿಕವಾಗಿ ನಿರೂಪಿತವಾಗಿದೆಯೆಂದು ಭಾವಿಸಿದರೆ, ಮತ್ತೊಂದು 2%ನಷ್ಟು ಜನರು ಸಾಕ್ಷಾತ್ತಾಗಿ ಗ್ರಹಿಸುವ ಸಂಗತಿಗಳು ಕೆಲವೊಂದು ಬಾರಿ ಮಾತ್ರ ನಡೆಯುತ್ತವೆಂದು ಭಾವಿಸಿದರು. ಈ ಕ್ಷೇತ್ರದಲ್ಲಿನ ಸಂಶೋಧನೆಯ ಬಗ್ಗೆ ಪ್ರಶ್ನಿಸಿದಾಗ, 22%ನಷ್ಟು ಜನರು ಇದನ್ನು ವಿರೋಧಿಸಬೇಕೆಂದು ಭಾವಿಸಿದರೆ, 63%ನಷ್ಟು ಜನರು ಇದಕ್ಕೆ ಅವಕಾಶ ನೀಡಬೇಕು; ಆದರೆ ಉತ್ತೇಜಿಸಬಾರದೆಂದು ಹೇಳಿದರು, ಅದಲ್ಲದೇ 10%ನಷ್ಟು ಜನರು ಇದಕ್ಕೆ ಉತ್ತೇಜನ ನೀಡಬೇಕೆಂದು ಹೇಳಿದರು; ಎಲ್ಲ ವಿಶೇಷ ಅಧ್ಯಯನದ ಮನೋವಿಜ್ಞಾನಿಗಳು ಅಧಿಮನಃಶಾಸ್ತ್ರಕ್ಕೆ ಹೆಚ್ಚು ವಿರೋಧಿಯಾಗಿದ್ದರು.[20][21] ಅಧಿಸಾಮಾನ್ಯ ವಿಷಯಗಳ ಕುರಿತಾದ ಅಮೆರಿಕಾ ಸಂಯುಕ್ತ ಸಂಸ್ಥಾನದ ಸಾರ್ವತ್ರಿಕ ಜನಸಮುದಾಯವು ಹೊಂದಿರುವ ನಂಬಿಕೆಗಳ ಒಂದು ಸಮೀಕ್ಷೆಯನ್ನು ದಿ ಗ್ಯಾಲಪ್ ಆರ್ಗನೈಸೇಷನ್ ಎಂಬ ಸಂಸ್ಥೆಯು 2005ರಲ್ಲಿ ಕೈಗೊಂಡಿತು.[22] ಸಮೀಕ್ಷೆಯು ನಡೆಸಿದ ಅಧ್ಯಯನದ ಪ್ರಕಾರ ಶೇಖಡಾ 41ರಷ್ಟು ಜನರು ಇಂದ್ರಿಯಾತೀತ ಗ್ರಹಣೆಯನ್ನು ನಂಬಿದರೆ, ಶೇಖಡಾ 26ರಷ್ಟು ಜನರು ಕ್ಲೇರ್ವಾಯನ್ಸ್(ಅತೀಂದ್ರಿಯ ದೃಷ್ಟಿ) ಅನ್ನು ನಂಬಿದರು. ಸಮೀಕ್ಷೆ ನಡೆಸಲಾದ ಶೇಖಡಾ 31ರಷ್ಟು ಜನರು ದೂರಸ್ಥಚಲನೆ ಅಥವಾ ಅತೀಂದ್ರೀಯ ಸಂಪರ್ಕವನ್ನು ನಂಬುತ್ತಾರೆಂದು ಸೂಚಿಸಲಾಯಿತು. 2006ರಲ್ಲಿ ಸಂಶೋಧಕರಾದ ಓಕ್ಲಹೋಮ ಸಿಟಿ ಯುನಿವರ್ಸಿಟಿಯ ಬ್ರಯಾನ್ ಫಾರ್ಹ ಹಾಗು ಯುನಿವರ್ಸಿಟಿ ಆಫ್ ಸೆಂಟ್ರಲ್ ಓಕ್ಲಹೋಮ ದ ಗ್ಯಾರಿ ಸ್ಟೀವರ್ಡ್ 439 ವಿದ್ಯಾರ್ಥಿಗಳ ಮೇಲೆ ನಡೆಸಿದ ಸಮೀಕ್ಷೆಯ ಪ್ರಕಾರ, ಕಾಲೇಜಿಗೆ ಬರುವ ಹೊಸ ವಿದ್ಯಾರ್ಥಿಗಳಿಗಿಂತ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಹಾಗು ಪದವಿ ವಿದ್ಯಾರ್ಥಿಗಳು ಅತೀಂದ್ರಿಯ ಸಂಗತಿಗಳ ಬಗ್ಗೆ ನಂಬುತ್ತಾರೆಂದು ಸೂಚಿಸಲಾಯಿತು.[23] ಕಾಲೇಜಿನ ಹೊಸ ವಿದ್ಯಾರ್ಥಿಗಳಲ್ಲಿ ಶೇಖಡಾ 23ರಷ್ಟು ಜನರು ಅಧಿಸಾಮಾನ್ಯ ಕಲ್ಪನೆಗಳ ಬಗ್ಗೆ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದರು. ಈ ಸಂಖ್ಯೆಯು ಕಾಲೇಜಿನ ಹಿರಿಯ ವಿದ್ಯಾರ್ಥಿಗಳಲ್ಲಿ (31%) ಹಾಗು ಪದವಿ ವಿದ್ಯಾರ್ಥಿಗಳಲ್ಲಿ (34%)ಅಧಿಕವಾಗಿತ್ತು.[24] ಸಮೀಕ್ಷೆಯು, ಅತೀಂದ್ರಿಯ ಸಂಗತಿಗಳ ಬಗ್ಗೆ ಸಮಾಜ ವಿಜ್ಞಾನ ಹಾಗು ಶೈಕ್ಷಣಿಕ ಅಧ್ಯಯನದ ವಿದ್ಯಾರ್ಥಿಗಳಿಗಿಂತ ವಿಜ್ಞಾನ ವಿದ್ಯಾರ್ಥಿಗಳಿಗೆ ನಂಬಿಕೆ ಕಡಿಮೆಯಿತ್ತು. ಕೆಲವರು ಅತೀಂದ್ರಿಯ ಸಾಮರ್ಥ್ಯಗಳನ್ನು ಅಧ್ಯಯನ ಹಾಗು ಹಲವಾರು ಶಿಕ್ಷಣ ಹಾಗು ತಂತ್ರಗಳಾದ ಧ್ಯಾನ, ಈ ವಿಧಾನಗಳ ಬಗ್ಗೆ ಮಾಹಿತಿ ನೀಡುವ ಹಲವಾರು ಪುಸ್ತಕಗಳು ಹಾಗು ಅಂತರಜಾಲಗಳ ಮೂಲಕ ಸಕ್ರಿಯಗೊಳಿಸಿಕೊಳ್ಳಬಹುದು ಅಥವಾ ವೃದ್ದಿಗೊಳಿಸಿಕೊಳ್ಳಬಹುದೆಂದು ಭಾವಿಸುತ್ತಾರೆ. ಮತ್ತೊಂದು ಜನಪ್ರಿಯ ನಂಬಿಕೆಯೆಂದರೆ ಅತೀಂದ್ರಿಯ ಸಾಮರ್ಥ್ಯವು ಪರಂಪರಾಗತವಾದುದೆಂದು, ಅತೀಂದ್ರಿಯ ಶಕ್ತಿಯುಳ್ಳ ಒಬ್ಬ ತಂದೆಯು ತನ್ನ ಸಾಮರ್ಥ್ಯಗಳನ್ನು ತನ್ನ ಮಕ್ಕಳಿಗೆ ಧಾರೆಯೆರೆಯಬಹುದೆಂದು ನಂಬಲಾಗುತ್ತದೆ.[25]
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. (October 2008) |
ಹಲವರು ತಮಗೆ ಅತೀಂದ್ರಿಯ ಸಾಮರ್ಥ್ಯಗಳಿರುವ ಬಗ್ಗೆ ಪ್ರಕಟಪಡಿಸುತ್ತಾರೆ. ಪೂರಕವಾಗಿ ಮತ್ತೆ ಕೆಲವರು ವೃತ್ತಿಪರ ಅತೀಂದ್ರಿಯ ಗ್ರಹಣಕಾರರಾಗಿ ತಮ್ಮ ಹೊಟ್ಟೆ ಹೊರೆಯುತ್ತಾರೆ ಅಥವಾ ತಮ್ಮದೇ ಆದ TV ಅಥವಾ ರೇಡಿಯೋ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಣ ಗಳಿಸುತ್ತಾರೆ. ಗ್ಯಾರಿ ಸ್ಪಿವೆಯ್, ಜಾನ್ ಎಡ್ವರ್ಡ್ ಹಾಗು ಸಿಲ್ವಿಯ ಬ್ರೌನೆಯಂತಹವರು ತಮ್ಮದೇ ಆದ ದೂರದರ್ಶನ ಕಾರ್ಯಕ್ರಮಗಳನ್ನು ನೀಡುತ್ತಾರೆ ಅಥವಾ ನಿಯಮಿತವಾಗಿ ಚರ್ಚಾಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ (ಅಧಿಸಾಮಾನ್ಯ ದೂರದರ್ಶನ). ಅತೀಂದ್ರಿಯ ಶಕ್ತಿಯುಳ್ಳ ಕೆಲವು ವ್ಯಕ್ತಿಗಳು ಸಾರ್ವಜನಿಕವಾಗಿ ಪ್ರಸಿದ್ಧರಾಗಿದ್ದಾರೆ; ಉದಾಹರಣೆಗೆ, ರಾಕ್ ಹಾಡುಗಾರ್ತಿ ಹಾಗು ನಟಿ ಡೇನಿಯೆಲ್ಲೇ ಎಗ್ನೆವ್, ಹಾಡನ್ನು ಹಾಡುವುದಕ್ಕಿಂತ ಹೆಚ್ಚಾಗಿ ಅತೀಂದ್ರಿಯ ಶಕ್ತಿಯುಳ್ಳ ವ್ಯಕ್ತಿಯಾಗಿ ನಿಯಮಿತವಾಗಿ ರೇಡಿಯೋ ಹಾಗು ದೂರದರ್ಶನದಲ್ಲಿ ಕಾಣಿಸಿಕೊಂಡಿದ್ದಳು.
ಅತೀಂದ್ರಿಯ ಸಾಮರ್ಥ್ಯವನ್ನು ಕಥೆಯ ಸಾಧನವಾಗಿ ಅಥವಾ ಅಪಾರ ಶಕ್ತಿಯಾಗಿ ಬಳಸಿಕೊಳ್ಳುವುದು ಕಾದಂಬರಿಯಲ್ಲಿ ಸಾಮಾನ್ಯ. ವೈಜ್ಞಾನಿಕ ಕಾದಂಬರಿಗಳಲ್ಲಿ ಅತೀಂದ್ರಿಯ ಸಾಮರ್ಥ್ಯಗಳನ್ನು ಸಾಮಾನ್ಯವಾಗಿ ಜನ್ಮಸಿದ್ಧ ಹಾಗು ಪರಂಪಾರಾಗತ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ, ಇದು ಆಲ್ಫ್ರೆಡ್ ಬೆಸ್ಟರ್ ಅವರ ದಿ ಡೆಮೊಲಿಶ್ಡ್ ಮ್ಯಾನ್ , ಎ. ಈ. ವ್ಯಾನ್ ವೋಗ್ಟ್ ರ ಸ್ಲಾನ್ , ಅನ್ನೆ ಮ್ಯಾಕ್ ಕಾಫ್ಫ್ರೆಯ್ ರ ಟ್ಯಾಲೆಂಟ್ಸ್ & ಟವರ್ ಅಂಡ್ ದಿ ಹೈವ್ ಸರಣಿ ಹಾಗು ದೂರದರ್ಶನ ಸರಣಿ ಬ್ಯಾಬಿಲೋನ್ 5 ನಲ್ಲಿ ಕಂಡು ಬರುತ್ತದೆ. ಮತ್ತೊಂದು ಮರುಕಳಿಸುವ ಪ್ರಯೋಗವೆಂದರೆ ಮನಃಪ್ರಭಾವಕ ಔಷಧಿಗಳ ಮೂಲಕ ಅತೀಂದ್ರಿಯ ಶಕ್ತಿಯನ್ನು ತಿಳಿಯಪಡಿಸುವುದು, ಈ ಮಾದರಿಯು ಡುನೆ ಯ ಕಾದಂಬರಿಗಳು ಹಾಗು ಸ್ಕ್ಯಾನರ್ಸ್ ರ ಚಲನಚಿತ್ರಗಳಲ್ಲಿ ಪರೋಕ್ಷವಾಗಿ ಕಂಡುಬರುತ್ತದೆ. ಜೊತೆಗೆ ಇದು ಸ್ಟಾರ್ ಕ್ರಾಫ್ಟ್ ಫ್ರ್ಯಾನ್ಚೈಸ್ ನ ಪ್ರೇತಗಳಲ್ಲಿಯೂ ಕಂಡುಬರುತ್ತದೆ. ಸ್ವಲ್ಪಮಟ್ಟಿಗೆ ಭಿನ್ನವಾಗಿ, ಮಾಡೆಲೆಯಿನೆ L' ಇಂಗ್ಲೆ ಅವರ ಏ ವಿಂಡ್ ಇನ್ ದಿ ಡೋರ್ ಹಾಗು ರಾಬರ್ಟ್ ಎ. ಹೆಯಿನ್ಲೆಯಿನ್ ರ ಸ್ಟ್ರೆನ್ಜರ್ ಇನ್ ದಿ ಸ್ಟ್ರೇಂಜ್ ಲ್ಯಾಂಡ್ ನಲ್ಲಿ, ಅತೀಂದ್ರಿಯ ಶಕ್ತಿಯನ್ನು ಸರಿಯಾದ ಮಾನಸಿಕ ಶಿಷ್ಟಾಚಾರವನ್ನು ಹೊಂದಿರುವ ಯಾವುದೇ ಮನುಷ್ಯನು ಸಾಧಿಸಬಹುದು, ಇದನ್ನು ಹಿಂದಿನ ಲೇಖನಗಳಲ್ಲಿ ಕೈಥಿಂಗ್ ಹಾಗು ನಂತರದ ಲೇಖನಗಳಲ್ಲಿ ಗ್ರೋಕ್ಕಿಂಗ್ ಎಂದು ಕರೆಯಲಾಗಿದೆ. ಜನಪ್ರಿಯ ಚಲನಚಿತ್ರಗಳಲ್ಲಿ ದಿ ಇನಿಸಿಯೇಶನ್ ಆಫ್ ಸರಃ ಕೂಡ ಒಳಗೊಂಡಿದೆ. ಅತೀಂದ್ರಿಯ ಪಾತ್ರಗಳು ಸೂಪರ್ ಹೀರೋ ಇರುವ ಕಾಮಿಕ್ ಪುಸ್ತಕಗಳಲ್ಲಿಯೂ ಸಾಮಾನ್ಯವಾಗಿದೆ, ಉದಾಹರಣೆಗೆ ಮಾರ್ವೇಲ್ ಕಾಮಿಕ್ X-ಮೆನ್ ನಲ್ಲಿ ಬರುವ ಜೀನ್ ಗ್ರೆಯ್ ಹಾಗು ಪ್ರೊಫೆಸರ್ X
ಅಧಿಮನಃಶಾಸ್ತ್ರದ ಸಂಶೋಧನೆಯು ಮನಶ್ಚಾಲನೆಯನ್ನು ಪರೀಕ್ಷಿಸಲು ಯಾದೃಚ್ಚಿಕ ಸಂಖ್ಯಾ ಜನಕಗಳನ್ನು ಬಳಸಲು ಪ್ರಯತ್ನಿಸಿದರು, ಇದು ಇಂದ್ರಿಯಾತೀತ ಗ್ರಹಣೆಯನ್ನು ಪರೀಕ್ಷಿಸಲು ಗಾನ್ಜ್ಫೆಲ್ಡ್ ಪ್ರಯೋಗದಲ್ಲಿ ಬಳಕೆಯಾಗುವ ಸೌಮ್ಯವಾದ ಸಂವೇದನದ ಅಭಾವ, ಹಾಗು ಸಂಶೋಧನಾ ಪ್ರಕ್ರಿಯೆಗಳು ಒಪ್ಪಿಗೆ ಮೇರೆಗೆ U.S. ಸರ್ಕಾರದ ಅಡಿಯಲ್ಲಿ ದೂರ ವೀಕ್ಷಣದ ಬಗ್ಗೆ ಪತ್ತೆ ಹಚ್ಚಲು ಪ್ರಯತ್ನ ನಡೆಸಲಾಯಿತು. ಇದರಲ್ಲಿ ಕೆಲವೊಂದು ಪರೀಕ್ಷೆಗಳು ಉದಾಹರಣೆಗೆ ಗಾನ್ಜ್ಫೆಲ್ಡ್ ಅನ್ನು ಅತೀಂದ್ರಿಯ ಸಂಗತಿಯೆಂದು ಅಧಿಮನಃಶಾಸ್ತ್ರಜ್ಞರು ಒದಗಿಸಿದ ಸಾಕ್ಷ್ಯಗಳು ಹಾಗು ಪ್ಯಾರಸೈಕಲಾಜಿಕಲ್ ಅಸೋಸಿಯೇಶನ್ ಪ್ರಕಾರ, ಈ ಕ್ಷೇತ್ರದೊಳಗಿರುವ ಬಹುಮತಾಭಿಪ್ರಾಯದಂತೆ ಇಂದ್ರಿಯಾತೀತ ಗ್ರಹಣೆಗೆ ಉತ್ತಮವಾದ ಸಾಕ್ಷ್ಯ, ಮನಶ್ಚಾಲನೆ, ಹಾಗು ಮುನ್ನರಿವಿದೆ.[ಸೂಕ್ತ ಉಲ್ಲೇಖನ ಬೇಕು] ವಿಮರ್ಶಕರಾದ ಎಡ್ ಜ. ಗ್ರಸೆಲಿ, ಈ ಸಾಕ್ಷ್ಯವು ಅಂಗೀಕಾರಕ್ಕೆ ಸಾಕಾಗುವುದಿಲ್ಲವೆಂದು ಹೇಳುತ್ತಾರೆ, ಭಾಗಶಃ ಇದಕ್ಕೆ ಕಾರಣ ಅತೀಂದ್ರಿಯ ಸಂಗತಿಗಿರುವ ವಾಸ್ತವಿಕ ಪರಿಣಾಮವು ಬಹಳ ಅಲ್ಪವಾಗಿರುತ್ತದೆ.[4][26]
ವಿಮರ್ಶಕರಾದ ರೇಯ್ ಹಯ್ಮನ್ ಹಾಗು ನ್ಯಾಷನಲ್ ಸೈನ್ಸ್ ಫೌಂಡೆಶನ್, ಅಧಿಮನಃಶಾಸ್ತ್ರವು ವಿಧಾನಶಾಸ್ತ್ರೀಯ ಲೋಪಗಳನ್ನು ಹೊಂದಿದೆ ಎಂದು ಸೂಚಿಸುತ್ತದೆ, ಅಧಿಮನಃಶಾಸ್ತ್ರಜ್ಞರು ಅಧಿಸಾಮಾನ್ಯ ವಿವರಣೆಗಳೆಂದು ಆರೋಪಿಸುವ ಇದನ್ನು ಪ್ರಾಯೋಗಿಕ ಪರಿಣಾಮಗಳೆಂದು ವಿವರಣೆ ನೀಡಬಹುದು, ಜೊತೆಗೆ ಹಲವು ವಿಮರ್ಶಕರು ಈ ಕ್ಷೇತ್ರವನ್ನು ಸ್ಯೂಡೋಸೈನ್ಸ್ ಎಂದು ನಿರಾಕರಣೆ ಮಾಡುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ, ಸ್ವತಂತ್ರವಾಗಿ ಪ್ರಯೋಗ ಮಾಡುವವರು ನೀಡುವ ಫಲಿತಾಂಶ-ಪರಿಣಾಮಗಳ ಪ್ರಕ್ರಿಯೆಯಲ್ಲಿ ಲೋಪವಿರುವುದು.[27][28][29][30][31] ವೈಜ್ಞಾನಿಕವಾಗಿ ಅಂಗೀಕಾರ ಮಾಡಲು ಅತೀಂದ್ರಿಯ ಸಂಗತಿಯನ್ನು ಪ್ರಸ್ತುತಪಡಿಸುವ ಸಾಕ್ಷ್ಯವು ಸಾಕಷ್ಟು ಪರಿಶೀಲನೆಯಾಗಿಲ್ಲ, ಜೊತೆಗೆ ಹಲವು ಅಧಿಸಾಮಾನ್ಯವಲ್ಲದ ಪರ್ಯಾಯ ವಿವರಣೆಗಳು ಅತೀಂದ್ರಿಯ ಘಟನೆಗಳು ಎಂದು ಸಮರ್ಥಿಸಿಕೊಳ್ಳುವ ಉದಾಹರಣೆಗಳು ಅಸ್ತಿತ್ವದಲ್ಲಿದೆ. ಅತೀಂದ್ರಿಯ ಸಾಮರ್ಥ್ಯಕ್ಕೆ ಕೆಲವು ಸಾಕ್ಷ್ಯಗಳಿವೆ ಎಂದು ಸಾಮಾನ್ಯವಾಗಿ ನಂಬುವ ಅಧಿಮನಃಶಾಸ್ತ್ರಜ್ಞರು, ಅತೀಂದ್ರಿಯ ಸಾಮರ್ಥ್ಯವು ಅಸ್ತಿತ್ವದಲ್ಲಿಲ್ಲ ಎಂದು ನಂಬುವ ವಿಮರ್ಶಕರ ಅಭಿಪ್ರಾಯವನ್ನು ಒಪ್ಪುವುದಿಲ್ಲ. ಅದಲ್ಲದೇ ಹೆಚ್ಚು ಜನಪ್ರಿಯವಾಗಿರುವ ಹಲವು ಅತೀಂದ್ರಿಯ ಸಂಗತಿಗಳಲ್ಲಿ ಉದಾಹರಣೆಗೆ ಪ್ರೇತವಿದ್ಯೆಯನ್ನು, ಅಧಿಸಾಮಾನ್ಯವಲ್ಲದ ತಂತ್ರಗಳಾದ ಕೋಲ್ಡ್ ರೀಡಿಂಗ್, ಹಾಟ್ ರೀಡಿಂಗ್, ಅಥವಾ ಖುದ್ದು ಮೋಸಹೋಗುವಿಕೆಯ ಪರಿಣಾಮವೆನ್ನಬಹುದು.[32][33] ಜಾದುಗಾರರಾದ ಜೇಮ್ಸ್ ರಾಂಡಿ, ಐಯಾನ್ ರೌಲ್ಯಾಂಡ್ ಹಾಗು ಡೆರ್ರೆನ್ ಬ್ರೌನ್ ತಂತ್ರಗಳನ್ನು ನಿರೂಪಿಸಿದ್ದಾರೆ. ಅವರು ಅತೀಂದ್ರಿಯ ಶಕ್ತಿಯಿಂದ ಜನಪ್ರಿಯ ಗಳಿಸಿದವರ ಮಾದರಿಯಲ್ಲೇ ಫಲಿತಾಂಶವನ್ನು ಪಡೆದಿದ್ದಾರೆ, ಆದರೆ ಇವರು ಅಧಿಸಾಮನ್ಯರಿಗಿಂತ ಭಿನ್ನವಾಗಿ ಮನೋವೈಜ್ಞಾನಿಕ ವಿವರಣೆಯನ್ನು ಪ್ರಸ್ತುತಪಡಿಸುತ್ತಾರೆ.[34] ಜನವರಿ 2008ರಲ್ಲಿ, ನ್ಯೂರೋಇಮೇಜಿಂಗ್ ಅನ್ನು ಬಳಸಿಕೊಂಡ ಒಂದು ಅಧ್ಯಯನದ ಫಲಿತಾಂಶವನ್ನು ಪ್ರಕಟಿಸಲಾಯಿತು. ಅತ್ಯಂತ ಅನುಕೂಲಕರ ಪರಿಸ್ಥಿತಿಗಳು ಎಂಬ ಅಭಿಪ್ರಾಯಕ್ಕೆ ಪೂರಕವಾಗಿ, ಅಧ್ಯಯನವು ಸೂಕ್ತವಾದ ಭಾವನಾತ್ಮಕ ಪ್ರಚೋದನೆಯನ್ನು ಅಳವಡಿಸಿತ್ತು. ಜೊತೆಗೆ ಜೈವಿಕವಾಗಿ ಅಥವಾ ಭಾವುಕವಾಗಿ ಸಂಬಂಧಹೊಂದಿದ ಸಹಭಾಗಿಗಳನ್ನು ಹೊಂದಿತ್ತು, ಉದಾಹರಣೆಗೆ ಅವಳಿಗಳು. ದೂರಸ್ಥಚಲನೆ, ಕ್ಲೈರ್ವಾಯನ್ಸ್ ಅಥವಾ ಪೂರ್ವಜ್ಞಾನವು ಸಂಭವಿಸಬಹುದೆಂಬ ಉದ್ದೇಶದಿಂದ ಪ್ರಯೋಗವನ್ನು ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿತ್ತು, ಇದರ ಹೊರತಾಗಿಯೂ ಅತೀಂದ್ರಿಯ ಪ್ರಚೋದನೆ ಹಾಗು ಅತೀಂದ್ರಿಯವಲ್ಲದ ಪ್ರಚೋದನೆಯ ನಡುವೆ ಇಂದ್ರಿಯಗೋಚರವಾದ ನರಕೋಶಕ್ಕೆ ಸಂಬಂಧಿಸಿದ ಯಾವುದೇ ಪ್ರತಿಕ್ರಿಯೆಗಳು ಕಂಡುಬರಲಿಲ್ಲ. ಈ ನಡುವೆ ಒಂದೇ ರೀತಿಯಾದ ಪ್ರಚೋದನೆಯಲ್ಲಿನ ವ್ಯತ್ಯಾಸವು, ಮೆದುಳಿನ ಸಕ್ರಿಯತೆಯ ಮಾದರಿಗಳ ಮೇಲೆ ನಿರೀಕ್ಷಿತ ಪರಿಣಾಮಗಳನ್ನು ಪ್ರಕಟಿಸಿತು. ಸಂಶೋಧಕರು,"ಈ ಶೋಧನೆಗಳ ಅತ್ಯಂತ ಪ್ರಬಲ ಸಾಕ್ಷಿಗಳಾಗಿದ್ದರು ಇವುಗಳನ್ನು ಅಧಿಸಾಮಾನ್ಯ ಮಾನಸಿಕ ಸಂಗತಿಯ ಅಸ್ತಿತ್ವಕ್ಕೆ ವಿರುದ್ಧವಾಗಿ ಪಡೆಯಲಾಗಿದೆ" ಎಂದು ಅಭಿಪ್ರಾಯಪಟ್ಟರು.[35] ಜೇಮ್ಸ್ ಅಲ್ಕಾಕ್, ಸಂಶೋಧಕರ ಈ ಹೇಳಿಕೆಯ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿದರು.[36] ಸಿಲ್ವಿಯ ಬ್ರೌನೆ ನಾಪತ್ತೆಯಾದ ವ್ಯಕ್ತಿಗಳು ಹಾಗು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಅವರ ಭವಿಷ್ಯವಾಣಿಯ ಬಗೆಗಿನ ಒಂದು ವಿಸ್ತೃತ ಅಧ್ಯಯನವು, 85%ನಷ್ಟು ಸರಿಯಾದುದೆಂದು ಅವರ ಸಮರ್ಥನೆಗೆ ಹೊರತಾಗಿಯೂ, "ಬ್ರೌನೆ ಯಾವುದೇ ಒಂದು ಪ್ರಕರಣದಲ್ಲೂ ಬಹುತೇಕವಾಗಿ ಖಚಿತತೆಯನ್ನು ವ್ಯಕ್ತಪಡಿಸಿಲ್ಲವೆಂದು" ಅಭಿಪ್ರಾಯಪಟ್ಟಿತು.[37]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.