From Wikipedia, the free encyclopedia
ಅಣ್ಣಿಗೇರಿ ಪುರಸಭೆಯು 1973 ರಲ್ಲಿ ಸ್ಥಾಪನೆಯಾಯಿತು.1973 ರಲ್ಲಿ ಸ್ಥಾಪನೆಯಾಯಿತು.ಅಣ್ಣಿಗೇರಿ ಪುರಸಭೆಯು ಅಂಕೊಲಾದಿಂದ ಗೂಟಿಗೆ ಹೋಗುವ ಎನ್ ಎಚ್-63 ರಸ್ತೆಯಲ್ಲಿ ಇದೆ,ಅಣ್ಣಿಗೇರಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡಗಳಿದ್ದು 23 ಚುನಾಯಿತ ಸದಸ್ಯರಿರುತ್ತಾರೆ,ಅಣ್ಣಿಗೇರಿ ಪುರಸಭೆಯ ವ್ಯಾಪ್ತಿಯು ಒಟ್ಟು 32.00 ಚದುರ ಕೀಲೋಮೀಟರ್ ಗಳಿರುತ್ತದೆ,ಚಾಲಿಕ್ಯರು ತಮ್ಮ ಆಡಳಿತದಲ್ಲಿ ಅಣ್ಣಿಗೇರಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು.
ಕಲಚೂರಿ ವಂಶದ ದೊರೆ ಬಿಜ್ಜಳನ ಹಾಗೂ ಚಾಲುಕ್ಯ ದೊರೆ ನಾಲ್ಕನೇ ಸೋಮೇಶ್ವರನ ರಾಜಧಾನಿಯಾಗಿಯೂ ಮತ್ತು ಹೊಯ್ಸಳ ದೊರೆ ವೀರ ಬಲ್ಲಾಳನ ಉಪರಾಜಧಾನಿಯಾಗಿಯೂ ಅಣ್ಣಿಗೇರಿ ಪ್ರಸಿದ್ಧಿ ಪಡೆದಿತ್ತು. ೧೧೫೭ರಲ್ಲಿ ಕಳಚೂರಿ ವಂಶದ ೨ನೇ ಬಿಜ್ಜಳನು ಬಸವಕಲ್ಯಾಣವನ್ನು ವಶಪಡಿಸಿಕೊಂಡಾಗ ಚಾಳುಕ್ಯರು ಅಲ್ಲಿಂದ ಅಣ್ಣಿಗೇರಿಗೆ ತಮ್ಮ ರಾಜಧಾನಿಯನ್ನು ಬದಲಿಸಿದರು. ಪ್ರಾಚೀನ ಶಾಸನಗಳಲ್ಲಿ ದಕ್ಷಿಣದ ವಾರಣಾಸಿ ಎಂದೇ ಈ ಊರನ್ನು ಉಲ್ಲೇಖಿಸಲಾಗಿದೆ. ಇಸವಿ ೯೦೨ ರಲ್ಲಿ ಆದಿ ಕವಿ ಪಂಪ ಹುಟ್ಟಿದ ಸ್ಥಳ ಅಣ್ಣಿಗೇರಿ. ಇಲ್ಲಿರುವ ಅಮೃತೇಶ್ವರ ದೇವಾಲಯವು ೧೦೫೦ರಲ್ಲಿ ಕಟ್ಟಲ್ಪಟ್ಟಿದ್ದು ೭೬ ಕಂಬಗಳಿಂದ ಕೂಡಿದ ದ್ರಾವಿಡ ಶೈಲಿಯಲ್ಲಿರುವ ದೇವಸ್ಥಾನ. ಇದೇ ಮುಂದೆ ೧೧೧೨ರಲ್ಲಿ ಇಟಗಿಯಲ್ಲಿರುವ ದೇವಾಲಯಗಳ ಚಕ್ರವರ್ತಿ ಎಂದು ಕರೆಯಲಾಗುವ ಮಹಾದೇವ ದೇವಸ್ಥಾನಕ್ಕೆ ಸ್ಫೂರ್ತಿಯಾಯಿತೆಂದು ಹೇಳಲಾಗುತ್ತದೆ.
ಅಣ್ಣಿಗೇರಿ ಪುರಸಭೆಯು 2001 ರ ಜನಗಣತಿಯ ಪ್ರಕಾರ ಅಣ್ಣಿಗೇರಿ ಪುರಸಭೆ ವ್ಯಾಪ್ತಿಯಲ್ಲಿ 25,709 ಜನಸಂಖ್ಯೆಯನ್ನು ಹೊಂದಿರುತ್ತದೆ.
ಅಣ್ಣಿಗೇರಿಯಲ್ಲಿ ಪ್ರಸಿದ್ದವಾದ ಪುರಾತನ ಕಾಲದ ಅಮೃತೇಶ್ವರ ದೇವಸ್ಥಾನವಿದೆ.
638 ವರ್ಷ ಹಳೆಯ ತಲೆಬುರುಡೆ ಸಿಕ್ಕಿದ್ದರಿಂದ ಪುರಾತತ್ವ ಇಲಾಖೆಗೆ ಒಳಪಡುತ್ತದೆ.638 ವರ್ಷ ಹಳೆಯ ತಲೆಬುರುಡೆ
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.